ಈ ಪ್ರಪಂಚದಲ್ಲಿ ಎಲ್ಲಾರು ಸರಿ ಇರ್ತಾರೆ ಯಾರು ಯಾರು ಕೂಡ ಕೆಟ್ಟವರಲ್ಲ ಆದ್ರೆ ಸಮಯಾನು ಕೆಟ್ಟಿದ್ದಲ್ಲ ಪರಿಸ್ಥಿತಿ ಅನ್ನೋದು ಇದೆಯಲ್ಲಾ ಅದು ನಿಜವಾಗಿಯು ಕೆಟ್ಟದ್ದು ಏಕೆಂದರೆ ನಾನು ನೀನು ಎಲ್ಲಾರೂ ಈ ಪರಿಸ್ಥಿತಿಯ ಕೈ ಗೊಂಬೆ ಹೋರೆತು ದೇವರ ಕೈ ಗೊಂಬೆ ಅಲ್ಲಿ ದೇವರು
ನಿನ್ನ ಸಾಂಗತ್ಯದ ಪ್ರತಿ ಕ್ಷಣವೂ ಪುಟ್ಟ ಮಗುವಿನಂತಿದ್ದ ಹೃದಯಕ್ಕೆ ಈಗ, ವಿರಹದ ಪ್ರತಿ ಕ್ಷಣಗಳು ಕಾದ ಕೆಂಡದಂತೆಯೇ! ಮೃದು ಹೂವಿನಂತೆಯೇ ಇದ್ದ ಮನದಲ್ಲಿ ನೆನಪುಗಳಂಬೆ ರಾಕ್ಷಸರ ದಬ್ಬಾಳಿಕೆಯೇ ಹೆಚ್ಚು ಹೆಚ್ಚು! ಸೂರ್ಯ ಕರಗಿ ಚಂದ್ರ ಬರುವ ಹೊತ್ತಿಗೆ ಕಂಗಳಲ್ಲಿ ನದಿಯ ಹರಿವು, ರಾತ್ರಿ ಕಗ್ಗತ್ತಲಿನಲ್ಲಿ ನರಳಾಟ ಉಸಿರೊಂದು ಕೇಳುವುದು ಅದು ನೀ ಇಲ್ಲದ ಹೃದಯದ್ದು,
ಮುಂಜಾನೆಯ ಮಡುಗಟ್ಟುವ ಚಳಿ ಸಹ ಎದೆಯಲ್ಲಿನ ನೋವಿನ ಶಾಖಕ್ಕೆ ನನ್ನಿಂದ ದೂರ ದೂರ! ಮರಳಿ ಬರದಿರುವ ನೀನು ಈಗ ಬರೀ ಮುಸುಕು ಮುಸುಕು!
ನಡೆದಷ್ಟೂ ಮುಗಿಯದ ಖಾಲಿದಾರಿಯಲಿ
ನಿನ್ನೊಡನೆ ನಡೆಯಬೇಕು, ಜೊತೆ
ಈ ಮಳೆ ಸುರಿಯುತಿರಬೇಕು...
ನೆನೆದ ದೇಹಕೆ ಹಿಡಿದ ಚಳಿ
ಬೆಸೆದ ಕೈಗೇರಿದ ಬಿಸಿಗೆ
ಬೆವೆತೋಗುವಷ್ಟು ಏಕಾಂತವಿರಬೇಕು...
ನಿನಾದ ಮೂಡುವ ನೀರ ಮೇಲೆ ಹೆಜ್ಜೆ ಇಟ್ಟಷ್ಟು
ಎದೆಯೊಳಗೊಂದು ಕಡಲು ಹುಟ್ಟಿ
ಕಣ್ಣಲಿ ಕಾರಂಜಿಯಾಗಿ ಚಿಮ್ಮಬೇಕು...
ಹರಿಹರಿದು ಸಾಗುವ ನದಿಗಳು
ದೂರದ ನೀಲಿಯಲಿ ಕೊನೆಗೊಳ್ಳುವಂತೆ
ಒಲವ ಮಳೆಯಲಿ ನೆನೆದ ನಾನು, ನನ್ನವನಾದ ನೀನು
ಒಂದಾಗಿಯೇ ಕೊನೆ ತಲುಪಬೇಕು...
ಅಲ್ಲಿವರೆಗೂ ಈ ಹುಚ್ಚುಮಳೆ
ಬಿಡದೇ ಸುರಿಯುತಿರಬೇಕು...
ಕನ್ನಡಿ ಹೇಳಿದ ಸತ್ಯ
ಮನದ ಕನಸ್ಸಿನ ಸತ್ಯ
ಮುನ್ನುಡಿ
ನುಡಿಯಿತು ಹೃದಯದ ಸತ್ಯ
ಕನ್ನಡಿ
ಮನದ ಮಾತುಗಳು
ಮೌನವೇ ಸತ್ಯ
ಮುತ್ತಿನಂತದೊಂದು
ಹಂಬಲ ನುಡಿ ಸತ್ಯ
ಕನ್ನಡಿ ತೋರುವ ದೇಹದ
ಸೌಂದರ್ಯಸತ್ಯ
ಕನ್ನಡಿಯ ತನುವಿನದು
ಮರಳಾಗಿಸ ಬಿಂಬವೇ ಸತ್ಯ
ಮನವೇ ಮರುಳಾಗದಿರು
ಮನವೇ ಪ್ರತಿಬಿಂಬದ ಸತ್ಯ
ಸೊಗಸಿಲ್ಲದ ಸೊಲಿಸಿದ
ಕನ್ನಡಿಯ ಸತ್ಯ ಹೊಳಪಿದೆ
ಉಸಿರಿನ ಸತ್ಯ.