Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರ ಆಟ

ಹುಟ್ಟು ದೇವರ ಭಿಕ್ಷೆ ಅಲ್ಲ
ಅಪ್ಪ ಅಮ್ಮನ ಭಿಕ್ಷೆ
ಸಾವು ವಿಧಿಯ ಆಟವಲ್ಲ
ನಮ್ಮ ದೇಹದ ಜೀವದ ಆಟ

ಜೀವದ ಆಟದ ಮುಂದೆ
ಯಾರ ಬಂಡಾಟ
ಯಾವ ದೇವರ
ಕಳ್ಳಾಟವು ನೆಡೆಯಾದು

ಜೀವ ಇದ್ದರೆ ದೇಹಕ್ಕೆ ಬೆಲೆ
ಜೀವನಕ್ಕೊಂದು ನೆಲೆ
ಜೀವ ಇಲ್ಲದಿದ್ದರೆ ದೇಹಕ್ಕೆ ಬೆಂಕಿ
ಜೀವನಕ್ಕೊಂದು ಚುಕ್ಕಿ


- ರಾಜು ಹಾಸನ

29 Aug 2022, 10:48 pm

ಮಮತೆ

ನಾವು
ಈ ಭೂಮಿ ಮೇಲೆ
ಕಷ್ಟಪಟ್ಟು ದುಡಿದು
ಏನ್ ಬೇಕಾದ್ರೂ
ಸಂಪಾದಿಸಬಹುದು
ಎಲ್ಲವನ್ನೂ ಗೆಲ್ಲಬಹುದು
ಅಂದುಕೊಂಡಿದ್ರೆ
ಅದು ಸುಳ್ಳು

ಏಕೆಂದರೆ
ಅಪ್ಪ ಅಮ್ಮನ
ಮನಸು ನೋಯಿಸಿ
ನಾವು ಈ ಭೂಮಿ ಮೇಲೆ
ಏನು ಗೆಲ್ಲೋಕೆ ಆಗಲ್ಲ

ನಾನು ನಂಬೋದು
ಪೂಜಿಸುವುದು
ಗುಡಿಯೊಳಗಿನ
ಕಲ್ಲಿನ ದೇವರನ್ನಲ್ಲ
ನನ್ನ ಎದೆಯೊಳಗಿನ
ನನ್ನ ದೇವರು
ಅಪ್ಪ ಅಮ್ಮನ




- ರಾಜು ಹಾಸನ

29 Aug 2022, 09:46 pm

ಓದ್ದೋನ್ ಬಾಯಿಗೆ ಮಣ್ಣಾಕ

ಜೀವ್ನ ತುಂಬಾ ಚಿಕ್ಕದು.
ಅನ್ಸಿದೆಲ್ಲಾ ಈಗ್ಲೇ ಮಾಡಿ...
ಹಳೇ ಹುಡ್ಗಿ ಕನ್ಸಲ್ಲಿ ಬಂದ್ರೆ
ಅಂಗಿ ಹಾಕೊಂಡು ಸ್ನಾನ ಮಾಡಿ...
ಲಂಗ ದಾವಣಿ ಹಾಕೊಂಡು
ನಮ್ಮಂತ ಡೀಸೆಂಟ್ ಹುಡ್ಗನ ಮುಂದೆ
ಬರ್ಬೇಡಿ. ಅನ್ಯಾಯವಾಗಿ ಒಂದ್
ಜೀವ ಸಾಯ್ತದೆ...
ಕಾಲ್ಮೇಲೆ ಕಾಲ್ ಹಾಕೊಂಡು
ಆಕಾಶ ನೋಡ್ತಿದ್ರೆ.ಹರಾಜು
ಲೆಕ್ದಲ್ಲಿ ನೆಮ್ದಿ ಸಿಗ್ತದೆ...
ಸಾಂಬ್ರಾಣಿ ಹೊಗೆ.ಕೊಬ್ಬರಿ ಎಣ್ಣೆ.
ಕಾಲ್ಸೂಪು. ಅಗರಬತ್ತಿ. ಸೊಳ್ಳೆ ಬ್ಯಾಟು
ಇವೇ ಶಾಶ್ವತ...
ಬಡವನ ಹಣೆಬರಹ ಬರೆಯೋಕೆ
ಬರ್ದಿರೋ ಭಗವಂತ ದೊಡ್ಡ
" ಅನಕ್ಷರಸ್ಥ "...
ಎಮ್.ಎಸ್.ಭೋವಿ....✍️



- mani_s_bhovi

21 Aug 2022, 02:57 pm

ಹೃದಯ ತುಂಬಾ ಪ್ರೀತಿಸುವೆ...

ಶೀತವಾದರೂ ಸರಿ ಜೋರ್ ಮಳೆಯಲಿ
ಹೃದಯ ಒದ್ದೆಯಾಗೋವರೆಗೂ
ನಿನ್ನ ಜೊತೆ ನಾ ನೆನೆಯಬೇಕು....
ಹೀಗೇ ಇಳಿಸಂಜೆ ಸಮಯದಲಿ ನಿನ್ನ
ಕಿರುಬೆರಳಿಡಿದು ರಸ್ತೆ ಮುಗಿಯೋ
ವರೆಗೂ ನಾ ನಡೆಯಬೇಕು....
ನಿನ್ನೆಲ್ಲಾ ಸುಂದರ ಕನಸಲ್ಲಿ
ನೆಚ್ಚಿನ ಪರಿಚಿತ ಆಗುವೆ....
ಎದೆಮೇಲೆ ಅಂಗಾಲಿಟ್ಟರೂ ಸಹ
ಹೃದಯ ತುಂಬಾ ಪ್ರೀತಿಸುವೆ....
ಎಮ್.ಎಸ್.ಭೋವಿ.....✍️

- mani_s_bhovi

18 Aug 2022, 10:51 pm

ನಾನ್ ಕನ್ನಡ ಕಂದ!!!!

ಸತ್ಯಕ್ಕೆ ಸಾವಾದರೂ
ಸುಳ್ಳಿಗೆ ಸುಖವಾದರೂ
ಸುಟ್ಟು ಸುಣ್ಣವಾದರೂ
ಸಾರುವೆ ನಾನ್ ಕನ್ನಡಿಗ


ಕಡು ಕಷ್ಟ ನರಕವಾದರೂ
ನರಕದೊಳ್ ನೋವಾದರೂ
ನೋವಿನೋಳ್ ಮರಣವಾದರೂ
ಮರಣಿಸಿದರು ಉಸಿರಾಡುವುದು ನಾನ್ ಕನ್ನಡಿಗ

ಕನ್ನಡ ಪದಗಳನ್
ತಡೆಯಲ್ ಬಂದಲ್ಲಿ
ಒಡಲ್ ಬಗೆದು
ಕಡಲ್ಗೆಸೆದು ನುಡಿವೆ ಪದ
ನಾನ್ ಕನ್ನಡಿಗ

ಸತ್ತು ಪೋಗುವುದರ ನಡುವೆ
ಹೊತ್ತು ಸಾರುವೆ ಚಿರಕಾಲ
ಜ್ಯೋತಿಯ೦ತೆ ಹೊಳೆವೆನ್
ಎತ್ತ ನೋಡಿದರು ನಾನಾಗಿ ಕನ್ನಡದ ಕಂದ

- Arun Naik

18 Aug 2022, 02:51 pm

ವಾಸ್ತವ!!!

ಹುಟ್ಟಿನೋಳ್ ಪಡೆದ ಒಂದೇ ಪರಿಯ ಜನ್ಮ
ಅದರಲ್ ಬೇಡುವನ್ ಬಿಕ್ಷಕನಾಗುವನೇ?

ಪಡುವ ಶ್ರಮದ ಪರಿ ಬೇರೆಯಾದರೋಳ್
ಶ್ರಮದ ಕೈಗಳ್ ಉಂಬುವ
ರೀತಿ ವಿಧಿ ಬೇರೆಯೇ?

ಮನದೊಳ್ ಕೆಟ್ಟಬುದ್ದಿಯ೦
ಬಾಯಿಯೋಳ್ ಇಟ್ಟ
ನುಡಿ ಶುದ್ದಿಯ೦
ಅವ ನಿಜ ಮನುಜನೇ?

ಸತ್ಯಕ್ಕೆ ಕಷ್ಟ ಇಟ್ಟಿ
ದ್ರೋಹಕ್ಕೆ ಕೋಟೆ ಕಟ್ಟಿ
ನ್ಯಾಯದ್ ಕಣ್ಗೆ ಬಟ್ಟೆ ಸುತ್ತಿ
ಅನ್ಯಾಯದ್ ಕಣ್ಣ ನೋಡಲಬಿಟ್ಟ
ನೋಡುತಿಹ ಅವ ನಿಜ ದೈವನೇ?

ಪಟ್ಟದ್ದು ಪಟ್ಟ ಹಾಗೆ
ಕೊಟ್ಟದ್ದು ಕೊಟ್ಟ ಹಾಗೆ
ಇಟ್ಟದ್ದು ಇಟ್ಟ ಹಾಗೆ
ಪಡೆದುದವೆಲ್ಲವನು
ಬಿಟ್ಟು ಹಿತದಿ ಪೋಗುವುದೇ
ನೃತ ಜೀವನ...

- Arun Naik

18 Aug 2022, 02:50 pm

ಕವನದ ಶೀರ್ಷಿಕೆ ಅಮೃತ ಮಹೋತ್ಸವ.

ಭಾರತಾಂಬೆಗೆ ನಡೆಯುತ್ತಿದೆ 75ರ ಸ್ವಾತಂತ್ರ್ಯದ ಅಮೃತ ಮಹೋತ್ಸವ,
ಕ್ರಾಂತಿ ವೀರರು ಕಣ್ತುಂಬಿಕೊಳ್ಳಲಾಗಲಿಲ್ಲ
ಈ ಹಬ್ಬದ ವೈಭವ.
ವ್ಯಾಪಾರಕ್ಕಾಗಿ ನಾಡಿಗೆ ಬಂದ ಬ್ರಿಟಿಷರು
ಭಾರತೀಯರನು ಪರತಂತ್ರರನ್ನಾಗಿಸಿ ದೇಶವ ಆಳತೊಡಗಿದರು.
ಭಾರತಾಂಬೆಯ ಬಿಡುಗಡೆಗೆ ನೆತ್ತರರಿಸಿದ ಅಂದಿನ ತರುಣರೀಗ,
ಪ್ರಜ್ವಲಿಸುತ್ತಿಹರು ಜನಮನಗಳೊಳಗೆ ಅವರ ಸಾಹಸ ಕಥೆಗಳ ನಾವು ಓದುವಾಗ.
ನೆಲದ ರಕ್ಷಣೆಗೆ ವೀರ ವನಿತೆಯರಿಗಿದ್ದ ಶೌರ್ಯ
ಕರೆದೊಯ್ಯುತ್ತಿತ್ತು ಅವರನ್ನು ಆಂಗ್ಲರು ಕೊಡುತ್ತಿದ್ದ ಕರಿನೀರಿನ ಕಠಿಣ ಶಿಕ್ಷೆಗೆ,
ಅಳುಕದೇ ಮುಂದಾಗಿ ಮಡಿದರು ತಾಯಿಯ ಉಳಿವಿಗೆ.
ನಾಡ ಸೇವೆಗೆ ಸಿದ್ಧರಾದ ಶೂರರು,
ಹೆಸರಾಗಿರುವ ರಿಂದು ನಮ್ಮ ರಾಷ್ಟ್ರ ಧ್ವಜದ ಪಥಾಕೆಗೆ.
ಇಂದು ಗೌರವಿಸುತ ಸ್ಮರಿಸುವ ಕೆಚ್ಚೆದೆಯ ಕಲಿಗಳ ದೇಶಭೀಮಾನವ,
ಸ್ವತಂತ್ರರಾಗಿರುವ ನಾವು ಹುತಾತ್ಮರಿಗೆ ಶ್ರದ್ಧೆಯಿಂದರ್ಪಿಸುವ ಸಾವಿರ ಪ್ರಣಾಮವ.
ವಿಶ್ವಗುರುವಾಗೋ ಕನಸು ಹುತ್ತ ತಾಯಿಗೆ
ನಡೆಯುತ್ತಿದೆ ಇಂದು ಸ್ವಾತಂತ್ರ್ಯೋತ್ಸವ,
ಕನಸ ನನಸು ಮಾಡುವ ಪ್ರಜೆಗಳೇ,
ಶಪಥದೊಂದಿಗೆ ಆಚರಿಸುವ ಬನ್ನಿ ಜಗದ ಬೆಳಕು ಭಾರತವೆಂಬ ಅಮೃತ ಮಹೋತ್ಸವ.

- nagamani Kanaka

15 Aug 2022, 06:58 am

ಉಳಿದ ಮಾತು

ಕೆನ್ನೆ ಇಳಿದು ಹರಿದ
ಕಣ್ಣೀರಲಿ ಸೇರದೆ
ಅಳುವಿನ ಬಿಕ್ಕಳಿಕೆಯ ದಾಟಿ
ನುಗ್ಗಿ ನಿಲ್ಲಲಾಗದೆ
ಜಗದ ಹಂಗಿಗೆ ಹೆದರಿ
ದಾರಿ ಹುಡುಕದೆ
ಪ್ರೀತಿ ಬಂಧನದಲಿ
ಕುರುಡಾಗಿ ದಾರಿ ಕಾಣದೆ
ಉಳಿದ ಮಾತುಗಳೆಲ್ಲ
ಮನದ ಮೂಲೆಗಳಲಿ
ತತ್ತರಿಸಿ ಬಿಕ್ಕಳಿಸಿ ಘಾಸಿಗೊಳಿಸಿ
ಕಾಯುತಲೇ ಇವೆ ಚಂದಿರ.....

ನನ್ನೆಲ್ಲ ಹುಚ್ಚು ಬಿಚ್ಚು ಮಾತುಗಳಿಗೆ
ಸಮಯದ ಪರಿವೆಯಿಡದೆ
ಸದಾ ಮುಗುಳ್ನಗುತ್ತಲೇ
ಕೂತು, ನಿಂತು ಜೊತೆಗೆ ನಡೆದು
ಮರುಮಾತಡದೆ ಕಿವಿಯಾಗಿ
ಮನದ ಮಾತಿಗೆಲ್ಲ ದನಿಯ ನೀಡಿ
ಎದೆಗೆ ನಗುವ ಪಸರಿಸಿದ
ಬಹು ಕಾಲದ ಗೆಳೆಯ ನೀನು

ಒಂದಿಷ್ಟು ಅಗಲಿಕೆಯಾನಂತರ
ಮತ್ತದೇ ನಿನಗಾಗಿ
ನಿನ್ನ ಬರುವಿಕೆಗಾಗಿ
ಮಾನವ ಹಾಗುರಾಗಿಸಿ
ಸಿಂಗರಿಸುವ ನಗುವಿಗಾಗಿ
ದೂರ ತಳ್ಳದ ಆಲಿಂಗನಕ್ಕಾಗಿ
ದಾರಿಯ ಕಾಯುತಲಿರುವೆ
ಬರುವೆಯ ಚಂದಿರ....

ನಿನ್ನ ತಣಿವ ನಲ್ಮೆಯ
ತಂಪು ನಗುವಲಿ
ಎದೆಯ ಬರಿದಾಗಿಸಿ
ಮೌನಕೆಲ್ಲ ಶಬ್ಧ ಉಣಿಸಿ
ಮೊಗೆದಷ್ಟು ಮಾತು ಹರಿಸಿ
ಕೊಟ್ಟಷ್ಟು ನಗುವ ಕೂಡಿಸಿ
ಮನದ ಭಾರವ ಹಗುರಾಗಿಸಿ
ಕೊಂಚ ನಲಿವ ಬಯಕೆ
ಆದರೆ ಸಿಗುವೆಯ ನಮ್ಮ ಹಳೆಯ ಸ್ನೇಹಕೆ






- ಶ್ರೀಕಾವ್ಯ

14 Aug 2022, 09:49 pm

ಹೃದಯದ ಬಡಿತ

ಹೃದಯದ ಬಡಿತ ಜೋರಾಗಿದೆ
ನಿನ್ನ ನೆನಪು ನನ್ನ ಕಾಡುತ್ತಿದೆ
ಯಾರೇ ನೀನು ಪ್ರೀತಿಯ ಒಲವೆ
ನನ್ನ ಮನಸ್ಸು ಕದ್ದ ಚಲುವೆ...!

ನೋಡುತ ನಿನ್ನ ಮುದ್ದಾದ ನಗುವ
ಮರೆತು ಹೋದೆ ನಾ ಈ ಜಗವ
ನೀನಿಲ್ಲದೆ ಕುರುಡಾಗಿದೆ ಮನವು
ನೆನಪಿದೆ ನಿನ್ನ ಚಲುವಮೊಗವು...!

ನೀ ಕೊಡುವ ಪ್ರೀತಿಗೆ ಕಾರಣವೇನು
ಒಮ್ಮೆ ನೋಡು ನನ್ನ ಪ್ರೀತಿಯನ್ನು
ನಿನ್ನ ಮೇಲಿರುವ ಪ್ರೀತಿ ಸಾಯಲ್ಲ
ಆ ಪ್ರೀತಿ ಇನ್ನೊಬ್ಬರ ಮೇಲೆ ಹುಟ್ಟಲ್ಲ..!

ನಿನ್ನ ಹೃದಯದಲ್ಲಿ ನಾನಿರುವ ಆಸೆ
ನಿನ್ನ ಉಸಿರ ಜೊತೆ ನನ್ನ ಸಾಗಿಸೆ
ನಿನ್ನ ಪ್ರೀತಿಗೆ ಮುತ್ತಹಾಗುವ ಆಸೆ
ನಿನ್ನ ಕೈಯಿಂದ ತುತ್ತ ಒಮ್ಮೆತಿನ್ನಿಸೆ...!

ಪ್ರೀತಿ ಹುಟ್ಟದ ಹೃದಯವಿಲ್ಲ
ನಿನ್ನ ಪ್ರೀತಿಯ ನಾ ಬಯಸಿದೆನಲ್ಲ
ನಿನ್ನ ಕೋಪದ ಮನಸ್ಸು ಚಂದ
ಯೋಚಿಸು ನಮ್ಮ ಜೋಡಿ ಅಂದ...!

ನೀ ಬಂದ ಕ್ಷಣದಲ್ಲಿ ಹಾರಾಡಿದೆ
ನೀನಿಲ್ಲದೆ ನನ್ನ ಮನ ನೊಂದಿದೆ
ನಿನ್ನ ಮನದ ಆಸೆಯ ತಿಳಿಸುವೆಯ
ಎಂದು ಕಾಯುತ್ತಿರುವ ಈ ಗೆಳೆಯ...!


- vijay kumar

12 Aug 2022, 03:39 pm

ತಂದೆ..

ಚಿಂದಿಯ ಬಟ್ಟೆಯನುಟ್ಟು ಹಳಸಿದ ಅನ್ನವ ಉಂಡು ತನ್ನ ಮಕ್ಕಳಿಗೆ ಮೃಷ್ಟಾನವಿತ್ತ ತಂದೆಗೆ
ಎನ ನಮನ...
ದೈತ್ಯಾಕಾರದ ಕಷ್ಟಗಳಎಂಬ ಸಾಗರದಲೇಗಳು
ತನ್ನ ಕೊಚ್ಚಿಕೊಂಡ ಹೋಗುವಂತಿದ್ದರು ತನ್ನ ಮಕ್ಕಳೆದುರು ಸದಾ ಹಸನ್ಮುಖಿಯಾದ ತಂದೆಗೆ
ಎನ ನಮನ...
ಬೃಹದಾಕಾರದ ಸಂಸಾರವೆಂಬ ಬಂಡೆಯ ಭಾರ
ಬೆನ್ನಮೊಳೆ ಮುರಿಯುವಂತಿದ್ದರು ಸದಾ ಸ್ಥಿರವಾಗಿ
ನಿಲ್ಲುವ ತಂದೆಗೆ ಎನ ನಮನ...

- Arun savadatti

11 Aug 2022, 04:50 pm