Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಹಾಯ

ಫಲ ಕೊಡುವುದು ಸಸಿಯು
ಕಡಿಯುವರು ಅದನ
ಮನೆ ಕಾಯುವುದು ಶ್ವಾನ
ಹೊರ ಹಾಕುವರು ಅದ
ಜೀವ ಉಳಿಸುವುದು ಜಲವು
ಕಲುಷಿತ ಮಾಡುವರು ಅದ
ಸಹಾಯ ಮಾಡಬೇಡ ಮನುಜ.



ವಚನ

ಫಲ ಕೊಡುವುದು ಸಸಿಯುh
ಕಡಿಯುವರು ಅದನ
ಮನೆ ಕಾಯುವುದು ಶ್ವಾನ
ಹೊರ ಹಾಕುವರು ಅದ
ಜೀವ ಉಳಿಸುವುದು ಜಲವು
ಕಲುಷಿತ ಮಾಡುವರು ಅದ
ಸಹಾಯ ಮಾಡಬೇಡ ಮನುಜ
ಮುಂದೊಂದು ದಿನ ನೀನು ಉಳಿಯಲ್ಲ


ನಿಶಾ ಅಂಜುಮ್

- Nisha anjum

21 Sep 2022, 07:26 am

ಹೃದಯದ ಮಿಡಿತ

ಹೃದಯ ಮಿಡಿವಾಗ
ನುಡಿವ ಹೆಸರು
ನನ್ನ ಇನಿಯಳ
ಪ್ರೀತಿಯುಸಿರು!!❤️❤️

ತನುವು ದೂರವು
ಮಾತು ಮೌನವು
ಹೃದಯ ಉಲಿವುದು
ನಿನ್ನ ಹೆಸರದು!!❤️❤️

ದೇಶ ಭಾಷೆಯ
ಜಾತಿ ಧರ್ಮದ
ಕಟ್ಟು ಪಾಡನು
ಕೇಳಲಾರದು!!❤️❤️

ಕಪ್ಪು ಬಿಳುಪಿನ
ವರ್ಣ ಭೇದವು
ಅಂದ ಚಂದದ
ಪರಿವೆ ಇಲ್ಲವು!!❤️❤️

ಸಿರಿಯು ಸಂಪದ
ಸ್ಥಾನ ಮಾನದ
ಓದು ಬರಹದ
ಸೊಲ್ಲನರಿಯದು!!❤️❤️

ಕ್ಷಣವು ಪ್ರತಿಯದು
ಒಂದೇ ನಾದವು
ಹೃದಯ ಮಿಡಿವುದು
ನಿನ್ನ ಹೆಸರದು!!❤️❤️
ಹೃದಯ ಮಿಡಿವುದು
ನಿನ್ನ ಹೆಸರದು!!❤️❤️

- ಜೈಮಿನಿ

18 Sep 2022, 11:22 am

ಹೇಳು_ಬಾ_ಏಕೆ ?

"ಕನಸಲ್ಲಿ ಬರುವೆ ನೀ...ಏಕೆ ?
ದೂರಾದರು ಕಾಡಿಹೆ...ಏಕೆ ?
ಕಾಡುತ ಕೊಂದಿಹೆ...ಏಕೆ ?
ನೀ ಒಪ್ಪಿದ ದಿನಗಳು...
ನನ್ನಪ್ಪಿದ ಕ್ಷಣಗಳು...
ಕಣ್ಮುಂದೆಯೆ ಇನ್ನು ಇದೆ...ಏಕೆ ?!"
"ಭಾವ ಮಾಸದೆ..ಜಾಸ್ತಿ ಆಗಿದೆ !
ನೀ_ಹೋದ ದಾರೀಲೆ..ಕಾದು ನಿಂತಿದೆ !
ಕೇಳು ಬಾರೆಲೇ..ಏಕೆ_ಏನೆಂದು !
ಕೂಗು ಬಾರೆಲೇ..ಪ್ರೇಮದಿ 'ಮಣಿ' ಎಂದು !
ಶುರುವಾಗೋದಷ್ಟೆ..ಗೊತ್ತು_ಅದಕೆ !
ಕೊನೆಯಾಗೋ ರೀತಿಯೆ..ಬಾರದದಕೆ !
ಕೇಳು_ಬಾ ಏಕೆ ?..ಕೇಳೇಳು_ಬಾ ಹೀಗೇಕೆ !!"
ಎಮ್.ಎಸ್.ಭೋವಿ....✍️

- mani_s_bhovi

15 Sep 2022, 11:04 pm

ಅಮ್ಮಾ...

ತನಗಾಗಿ ಏನನ್ನೂ ಬಯಸದವಳು. ಅವಳಿಗಾಗಿ ಏನನ್ನೂ ಕೂಡಿಡದವಳು. ತನಗಿಲ್ಲ ವೆಂದು ಕೋರಗದವಳು. ಸೋತಾಗ ಸದಾ ಜೋತೆಗೆ ನಿಂತವಳು. ನಮ್ಮ ನಗುವಲ್ಲೆ ತನ್ನ ಖುಷಿ ಕಂಡವಳು. ನಮಗಾಗಿಯೇ ಇಡಿ ಜೀವನ ಮೀಸಲಿಟ್ಟವಳು. ಆ ಕನಸುಗಳಿಗೆ ದಿನಾಲೂ ಸಹಕಾರ ಕೋಟ್ಟವಳು. ಅವಳೇ ಪ್ರೀತಿಯ ಅಮ್ಮಾ......

- Renuka.S. P

12 Sep 2022, 05:04 pm

ಸ್ನೇಹ

ನಿನ್ನ ಸ್ನೇಹಕ್ಕೆ ಸೋತಿರುವ ನಾ ಎಂದೋ
ನಿನ್ನ ಜೊತೆಯಾಗಿ ಇರುವೆ ಸದಾ ಎಂದೆಂದೂ....!

ಆಕಸ್ಮಿಕವಾಗಿ ಬೇಳದ ನಮ್ಮ ಬಂಧವಿದು
ಶಾಶ್ವತವಾಗಿ ಉಳಿಯುವ ಸ್ನೇಹ ಸಂಬಂಧ ಇದು...!

- Raju Hosakeri

11 Sep 2022, 04:58 pm

ಅಂದು ತಾಯಿಯ ದಿನಾಚರಣೆಯ ಕುರಿತು ಬರೆದ ಮೊದಲ ಕವಿತೆ....

ಅತ್ತಾಗ ತಾಯಿಯಂತೆ ಕಣ್ಣಿರು ಒರೆಸಿ. ಸೋತ್ತಾಗ ತಂದೆಯಂತೆ ಧೈರ್ಯ ನೀಡಿ. ಹೆಜ್ಜೆ ಹೆಜ್ಜೆಗೂ ಸ್ನೇಹಿತನಂತೆ ಪ್ರೋತ್ಸಾಹ ನೀಡಿ. ಹ್ರದಯದಿಂದ ಈ ಮಗುವನ್ನು ಹಾರೈಸುವ ಈ ನನ್ನ ಮುಗ್ಧ ಮನಸ್ಸಿರುವ ನನ್ನ ಈ ಮುದ್ದು ಮನಸ್ಸಿಗೆ ಹೇಳುವೇ ತಾಯಿಂದರ ದಿನಾಚರಣೆಯ ಶುಭಾಶಯಗಳು ಅಮ್ಮಾ......

- Renuka.S. P

10 Sep 2022, 09:16 pm

ಎರಡು ಹೃದಯಗಳು

ಬಾಲ್ಯದಲ್ಲಿ ಚಿಗುರೋಡೆದ ನಮ್ಮ ಪ್ರೀತಿ
ತಿಳಿದಿರಲಿಲ್ಲ ನಮಗೆ ಅದರ ರೀತಿ
ಬೆಳೆಯುತ್ತ ಬೆಳೆಯುತ್ತ ಪ್ರೇಮಿಗಳಿಗಾದೆವು
ನಾವು ಸ್ಪೂರ್ತಿ
ಕೊನೆಗೂ ಫಲಿಸಿತು ಮದುವೆಯಲ್ಲಿ ನಮ್ಮ ನಿಜ ಪ್ರೀತಿ.......... ❤️

- shanti

09 Sep 2022, 08:18 pm

ಪ್ರೇಮಯಾನ

ಪಿಸುನುಡಿಯನಾಲಿಸಲು ಮನ ಬಯಸುವುದು ಸಹಜ
ಒಲವೆಂಬ ಕುಡಿನೋಟ ಸೆಳೆದ ಬಳಿಕ
ಹೊಸತನದ ಭಾವಗಳು ಗರಿಗೆದರಿ ಹಾರುತಿರೆ
ಪ್ರೀತಿ ಪ್ರೇಮದ ಸವಿಯನುಣಲು ತವಕ
ಬಿಸಿ ಉಸಿರ ಪರುಶದಲಿ ಹಾಯಾಗಿ ನಿದಿರಿಸಲು
ಕಾತರದಿ ಹೃದಯಗಳು ಕಾಯುತಿಹುದು
ಒಸಗೆಯೊಂದಿಗೆ ಬೆಸೆದ ಭಾವ ಬಂಧಗಳೆಲ್ಲ
ಭದ್ರತೆಯ ನೆಲೆಯಲ್ಲಿ ನಗುತಿರುವುದು

ಎದೆಯ ಬಡಿತದ ಸದ್ದು ಕಿವಿಯ ತಮಟೆಯ ಸೇರಿ
ನವ್ಯ ಸಂಚಲನವನು ಹುಟ್ಟಿಸಿಹುದು
ಬದುಕೆಂಬ ಪುಟದಲ್ಲಿ ಗೀಚಿದಕ್ಷರವೆಲ್ಲ
ಹಾಡಾಗುತಲಿ ಹೊರಗೆ ಹೊಮ್ಮುತಿಹುದು
ಬದಗು ಇಲ್ಲದ ಪ್ರಣಯ ಪಕ್ಷಿಗಳ ಸಹಯಾನ
ಮುಂದಕ್ಕೆ ಮುಂದಕ್ಕೆ ಸಾಗುತಿಹುದು
ಬದಲಿಸಲು ಸಾಧ್ಯವಿಲ್ಲದ ಹಾಗೆ ಸಂಬಂಧ
ತಳವೂರಿ ಬಲುಗಟ್ಟಿಯಾಗಿರುವುದು

ಮುನಿಸು ಇಲ್ಲದ ಪಯಣ ಚಿತ್ತಗಳ ಸಮ್ಮಿಲನ
ಆಸೆ ಆಕಾಂಕ್ಷೆಗಳು ಹೆಚ್ಚುತಿಹುದು
ನನಸಾಗುವಾಸೆಗಳ ನೆನೆದು ನೂತನ ಜೋಡಿ
ಹಸಿವು ನಿದಿರೆಗಳನ್ನು ಮರೆಯುತಿಹುದು
ಅನುರಾಗದೊಡನಾಟ ಬಹುಕಾಲವಿರಲೆಂದು
ದೇವರಲಿ ಬೇಡಿಕೆಯು ಸಲ್ಲುತಿಹುದು
ದಿನನಿತ್ಯ ಕಾದಾಟವಿರದಂಥ ಅನುಬಂಧ
ಕೊನೆಯವರೆಗೂ ಮುಂದುವರೆಯಲೆಂದು

✍️ಲತಾ ಆಚಾರ್ಯ ಬನಾರಿ

- latha banary

09 Sep 2022, 12:41 pm

ಕನಸು ❤️

ವಾಸ್ತವಕ್ಕಿಂತ ಚೆಂದ ಕನಸಿನ ಬಣ್ಣ
ಅದರೊಳಗಾದರೂ ನಾ ಬೇರೆಯಬೇಕು ನಿನ್ನ.......
ನೀ ತೊರೆದರು ಅದರಲ್ಲಿ ಬರುವೆ ಪ್ರತಿದಿನ
ಅದರೊಳಗೆ ಕಳೆಯುವೆ ನನ್ನ ಪೂರ್ತಿ ಜೀವನ.......
ಮುಂದಿನ ಜನ್ಮದಲ್ಲಾದರೂ ನಾ ಸೇರುವೆ ನಿನ್ನ
ದಯಮಾಡಿ ಮರೆಯದಿರು ಅಂದು ನೀ ನನ್ನ.......

- shanti

09 Sep 2022, 11:23 am

ನೋವು

ಸಹಿಸಲಾರದ ದುಃಖ ತವರಿನ ದೂರ
ಪ್ರಪಂಚವನ್ನೆ ಮರೆಸೋ ನಿನ್ನ ಪ್ರೇಮ
ಇವೆರಡು ಇದ್ದರೆ ಎಷ್ಟು ಚೆಂದ ಸನಿಹ
ಅದಂತೂ ಆಗದು ಅದಕ್ಕೆ ಮರೆಯಬೇಕು
ಅದರೊಳಗೊಂದ

- shanti

09 Sep 2022, 10:50 am