Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೃದರ ಪರದಾಡಿದೆ ಎಲ್ಲಾ ನಿನ್ನ ಸಹವಾಸ..

ಹೃದರ ಪರದಾಡಿದೆ ಎಲ್ಲಾ ನಿನ್ನ ಸಹವಾಸ...
ಸನಿಹ ಇರದಿದ್ದರೆ ನೀನು.ಬದೆಕೇ ಉಪವಾಸ...
ನೀನೇ ಉಳಿಸು ನನ್ನ. ಬರೀ ನೋಟದಲ್ಲೇ ನೀ ನನ್ನ ಕೊಂದಾಗ...
ಕನ್ನಡಿ ಎದುರು ನೀ ನಿಂತು ನನ್ನ ನೆನದಾಗ.
ನಾಚಿಕೆಯಾಗಿ ಬರುವೆ ನಾ ಆಗ...
ಬದುಕಿನುದ್ದ ನಿನ್ನ ನೆಚ್ಚಿನ ಖುಷಿಯಾಗಿರುವೆ...
ಬೆನ್ನಿಂದೆ ನಿಂತು ಕೊಂದರೂ.ನಿನ್ನೇ ಪ್ರೀತಿಸುವೆ...
ಎಮ್.ಎಸ್.ಭೋವಿ.....✍️

- mani_s_bhovi

06 Oct 2022, 08:05 pm

ನಾಡಹಬ್ಬ



ನವರಾತ್ರಿ ನಾಡಹಬ್ಬ,
ನವ ನವ ರಾತ್ರಿಯ ಸಂಭ್ರಮ ಹಬ್ಬ
ಕನ್ನಡಿಗರಿಗದು ಪವಿತ್ರ ಹಬ್ಬ,
ದುಷ್ಟರ ಮೇಲೆ ಶಿಷ್ಟರು,
ವಿಜಯ ಸಾಧಿಸಿದ ದಿನವದು,
ವಿಜಯದಶಮಿ,
ಹತ್ತನೆಯ ದಿನ ಆಚರಿಸುವ ಹಬ್ಬವಲ್ಲ,
ದೇಹದ ಹತ್ತು ಇಂದ್ರಿಯಗಳ ಮೇಲೆ,
ವಿಜಯ ಸಾಧಿಸುವ ಪ್ರಕ್ರಿಯೆ ,
ವಿಜಯದಶಮಿ,
ಕಾರ್ಯಪ್ರವವೃತ್ತರಾಗೋಣ ಬನ್ನಿ,
ಬನ್ನಿ ದೇವಮಾನವರಾಗೋಣ.

- jeeva

05 Oct 2022, 05:39 pm

ಎಂಥಾ ಹುಚ್ಚು ಮನಸ್ಸು ನೀನು.......

ಹೇ ಎಂತಾ ಹುಚ್ಚು ಮನಸ್ಸು ನೀನು ನಿನ್ನ ಹರಸಿ ಬಂದ ಹೃದಯಕ್ಕೆ ಸಮ್ಮತಿಸಿದೆ,
ನೀನೆ ತನ್ನ ಜೀವನವೆಂದು ಹೇಳಿದ ಹೃದಯವನ್ನು ತಿರಸ್ಕರಿಸಿದೆ,
ನೀನೆ ಬೇಕು ಎಂದು ಹಟ ಮಾಡಿದ ಹೃದಯವ ಲೆಕ್ಕಿಸಿದೆ,
ನಿನ್ನ ಒಂದು ಮಾತಿಗೆ ವರ್ಷ ಕಾಲ ಕಾಲದ ಹೃದಯಕ್ಕೆ ಉತ್ತರಿಸದೆ,
ನಿನ್ನ ಸಮ್ಮತಿ ಸಿಗುತ್ತೆ ಎಂದು ಭರವಸೆ ಇಂದ ಕಾಡ ಹೃದಯಕ್ಕೆ ಅವಮಾನಿಸಿದೆ,
ನಿನಗಾಗಿ ಕಾದು ಸಾಕಾಗಿ ತನ್ನ ಜೀವನ ರೂಪಿಸಿಕೊಂಡು ಹೋರಾಟ ಹೃದಯಕ್ಕೆ ಚಡಪಡಿಸುತ್ತಿರುವೆಯೇ?,
ಎಂಥಾ ಹುಚ್ಚು ಮನಸ್ಸು ನೀನು.......
--ಪೂಜಾ

- pushpa

04 Oct 2022, 09:46 pm

ಅಹಿಂಸಾ ಸಾರಥಿ


ಭವ್ಯ ಭಾರತದ ಕನಸನ್ನು ಕಂಡ ಭಾರತದ ನಾಯಕ..
ಶಾಂತಿ ಸೌಹಾರ್ದತೆಯ ಉಣಪಡಿಸಿದ ಪ್ರತಿಪಾದಕ..
ಅಹಿಂಸಾತ್ಮಕ ಆಲದ ಮರವ ಬೆಳೆಸಿದ ನಾಡಿನ ರೈತ..
ಭಾರತ ರಾಷ್ಟ್ರಕ್ಕೆ ಸ್ವಾತಂತ್ರ್ಯ ನೀಡಿದ ಭಾಗ್ಯವಿಧಾತ ...


ಸತ್ಯಮೇವ ಜಯತೆ ಘೋಷಣೆಯ ಹರಿಬಿಟ್ಟರು..
ಚಿತ್ತದಾಸದಲ್ಲಿ ಮುಳುಗಿದ ಭಾರತೀಯರ ಮುಕ್ತಗೊಳಿಸಿದರು..
ಬ್ರಿಟಿಷ್ರ ವಿರುದ್ಧ ಹೋರಾಡಲು ಪ್ರಜೆಗಳನ್ನು ಒಗ್ಗೂಡಿಸಿದರು..
ಸರ್ವತೋಮುಖ ಗುರಿಯ ಸಾಧಿಸುವ ಛಲವಾ ಅರಿತಿದ್ದರು..


ಸ್ವಾತಂತ್ರ್ಯದ ಮೂಲದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ನಡೆಸಿದರು..
ಅಸಹಕಾರ ಚಳುವಳಿಯ ಮೂಲಕ ಪರದೇಶಿಯ ಸರಕುಗಳನ್ನು ತೇಜಿಸಿಸಿದರು..
ಮಾನವೀಯತೆ ತಾಳ್ಮೆ ಅಹಿಂಸಾ ಮಾರ್ಗದ ಸಭಿ ರುಚಿಯ ತಿಳಿಸಿದರು..
ಕಾಯಕವೇ ಕೈಲಾಸ ಎಂದು ಬಲವಾಗಿ ಅರ್ಥೈಸಿದರು..


ಸ್ವಾತಂತ್ರ್ಯ ಸಿಗದೇ ಅಂಬಲಿಸಿದ್ದ ಭಾರತೀಯರಿಗೆ ಮಾರ್ಗದರ್ಶಿಯಾದರು..
ಅಂಧಕಾರದ ಕತ್ತಲಿನಲ್ಲಿ ಬೆಳಕಿನ ಕಿರಣದಂತೆ ಆಗಮಿಸಿದರು..
ಆಡಂಬರದ ಜೀವನವ ತ್ಯಜಿಸಿ ಸರಳತೆಯ ಮೂರ್ತಿಯಾದರು..
ಸತ್ಯಾ ಶಾಂತಿ ಒಂದೇ ಮಂತ್ರವೆಂದು ಗಾಂಧಿ ಪ್ರತಿಪಾದಿಸಿದರು..


ಭಾರತ ರಾಷ್ಟ್ರ ಭಾರತೀಯರಿಂದ ಕಂಗೊಳಿಸಬೇಕು ಎಂದು ಹೇಳಿಕೆ ನೀಡಿದರು ..
ದೇಶದ ವಿಭಜನೆಯಲ್ಲಿ ಹಿಂದೂ ಮುಸ್ಲಿಮರನ್ನು ವಿಭಾಗಿಸಿದರು..
ಸ್ವಾತಂತ್ರ್ಯ ಧೀರನ ಸಮಾಜ ವಿಜ್ಞಾನಿ ಸುಧಾರಕ ರಾಗಿ ನಾಡ ಸಲುಹಿದರು..
ಆದರ್ಶಗಳ ಮೂಲಕ ಪ್ರಜೆಗಳ ಹೃದಯದ ಇಂದಿಗೂ ಅಮರ...

ಚಿದಾನಂದ.ಎನ್
ದ್ವಿತೀಯ ಪಿಯುಸಿ
ನಾರಾಯಣಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ..

- Chidananda N

03 Oct 2022, 09:45 am

ನಾನೇ ಬರುವೆ..ನೀ_ಇರುವಲ್ಲಿಗೆ!!

"ಹುಡುಕಲು ನಿನ್ನ...ಈ ಜಗದಲ್ಲಿ !
ಅಲೆದಿಹೆ ನಾನು...ಎಲ್ಲೆಂದರಲ್ಲಿ !
ಕಾಣದೆ ಮರೆಯಾದೆ...ನೀ ಎಲ್ಲಿ ?!
ಇರುವೆ ನನ್ನಿಂದ...ನೀ_ಬಹುದೂರ !
ಬೇಡಿಕೆ ನಿನಗೆ...ನನ್ನಲ್ಲಿ ಆಪಾರ !!"
"ಏತಕೆ ಈತರ...ಆಟವು ಹೇಳೇ !
ಬೇಕೆನೆ ಈತರ...ಕಣ್ಣಮುಚ್ಚಾಲೆ !
ಸಾಕು ಮಾಡಿ ಬಾರೆ...ನನ್ನ ಬಳಿಗೆ !
ಸುಳಿವಾದರು ನೀಡೆ...ಕೊನೆಗೆ !
ನಾನೇ ಬರುವೆ..ನೀ_ಇರುವಲ್ಲಿಗೆ!!"
ಎಮ್.ಎಸ್.ಭೋವಿ....✍️

- mani_s_bhovi

27 Sep 2022, 09:32 pm

ಆಯ್ಕೆಗಳು

ಜೀವನನೇ ಹಾಗೆ ಅನ್ನಿಸುತ್ತೆ, ಕೆಲವು ವ್ಯಕ್ತಿಗಳು ತಮ್ಮ ಅವಶ್ಯಕತೆಗಳು ಹೆಚ್ಚಾದಂತೆ, ಮನಸ್ಥಿತಿ ಬದಲಾದಂತೆ, ತಾವು ಮೊದಲಿನಿಂದ ಯಾವುದು ಒಳ್ಳೆಯದು ಅಂತ ದೃಢವಾಗಿ ಮಾಡಿದ ಸ್ನೇಹವಾಗಲಿ ಪ್ರೀತಿಯಾಗಲಿ ಒಂದು ಹೊಸ ಸಂಬಂಧ ಅಥವಾ ಆಯ್ಕೆ ಬಂದೊಡನೆ ಬದಲಿಸಿಕೊಂಡುಬಿಡುತ್ತಾರೆ,, ಪ್ರಾಯಶಃ ಹೊಸ ಆಯ್ಕೆ ಎಷ್ಟೋ ವರ್ಷದ ಸ್ನೇಹ, ಪ್ರೀತಿಯ ಸಂಬಂಧವನ್ನೇ ಮುರಿದುಬಿಟ್ಟಿತ್ತು...!

ಶ್ರೀಲಕ್ಷ್ಮಿ...

- Sri Lakshmi

27 Sep 2022, 04:17 pm

ಪದೇ_ಪದೇ

"ಪದೇ_ಪದೇ ನೋಡಬೇಕನಿಸೋ...
ಅಂದ ಅವಳು !
ನಾ_ಕಣ್ಣ್ಮುಚ್ಚಿಕೊಂಡರೆ...
ನನ್ನೆದಿರೆ ಅವಳು !
ಪದೇ_ಪದೇ ಕೇಳಬೇಕಂಬ...
ಸದ್ದು ಅವಳು !
ಅಶರೀರವಾಣಿಯಾಗಿ ನನ್ನ ಸೇರುವಳು !
ಪದೇ_ಪದೇ ಹಿತವೆನಿಸೋ...
ಸ್ವರ್ಶ ಅವಳು !
ತಂಗಾಳಿಲಿ ಆಗಾಗ ಬಂದು...ಸ್ವರ್ಶಿಸುವಳು !
ಪದೇ_ಪದೇ ಹೇಳಬೇಕಂಬ...
ವಿಷಯ ಅವಳು !
ಗೀಚೋ ಕವನಗಳಲಿ ತುಂಬಾಸಲ...
ಬಂದೋಗುವಳು !!"
ಎಮ್.ಎಸ್.ಭೋವಿ...✍️

- mani_s_bhovi

25 Sep 2022, 11:54 pm

ಮುಗ್ದ ಪ್ರೇಮಿ....

ನಿನ್ನ ಮನವನ್ನು ತಿಳಿಯಲಾಗಲ್ಲಿಲ...
ನನ್ನ ಮನದ ಮಾತನು ತಿಳಿಸಲಾಗಲ್ಲಿಲ...
ತಡವಾಗಿತ್ತು ನನ್ನ ಆಗಮನ.....
ನೀನೇ ಗಮನಿಸುತ ಹೇಳುವುದನೆ ಮರೆತೇ ನನ್ನ ಮನದಾಳದ ಮಾತನಾ.....
ತಿಳಿಯಲಿಲ ನಿನ್ನ ಮಾನವನ್ನ ನಿನ್ನ ಮನಸಿಗ್ಗೆ ನೋವಾಗಿದರೆ ಕ್ಷಮಿಸುನನ್ನ.......
............ ಮುಗ್ದ ಪ್ರೇಮಿ.

- Darshan. L Darshan. L

24 Sep 2022, 11:15 pm

ಜೀವನ

ಜೀವನದಲ್ಲಿ ಯಾರಿಗೂ ಇಯಳಿಸಬೇಡ...
ಜೀವನದಲ್ಲಿ ಯಾರಿಗೂ ನೋವನ್ನು ಕೋಡಬೇಡ...
ಜೀವನದಲ್ಲಿ ಯಾರನ್ನೂ ನೋಡಿ ನಗ ಬೇಡ...
ಜೀವನದಲ್ಲಿ ಯಾರನ್ನೂ ನೋಡಿ ಉರಿದುಕೊಳ್ಳಬೇಡ...
ಜೀವನದಲ್ಲಿ ಯಾರನ್ನೂ ದ್ವೇಷಿಸಬೇಡ...
ಜೀವನದಲ್ಲಿ ಯಾರ ಬಗ್ಗೆಯು ಕೆಟ್ಟದಾಗಿ ಮಾತನಾಡಬೇಡ...

ನಾವು ಎಲ್ಲಾರನ್ನು ಸಮಾನವಾಗಿ ಕಾಣಬೇಕು...
ನಾವು ಎಲ್ಲಾರನ್ನು ಪ್ರೀತಿಸಬೇಕು...
ನಾವು ಎಲ್ಲಾರಿಗೂ ಒಳ್ಳೆಯದಗಲಿ ಎಂದು ಬಯಸಬೇಕು...
ನಾವು ಎಲ್ಲಾರಿಗೂ ಎಲ್ಲಾ ಸಮವಾಗಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕು...
ಜೀವನವು ನಮ್ಮಗೆ ಪಾಠ ಕಲಿಸುತ್ತದೆ ನೀನು ಮಡಿದ್ದು ನಿನಗೆ ಎಂದು...ಇದನ್ನೆ ಕರ್ಮ ಎನ್ನುವುದು...
_Aksh_Akshita_

- Akshita Paragi

24 Sep 2022, 02:58 pm

"ಒಲವು"

"ಧಾವಸಿ ಬರುತಿದೆ ಒಲವು...
ನಿನ್ನಯ ಮನಸಿನ ಬಳಿಯೇ!
ದಾರಿಯು ತಪ್ಪದ ಹಾಗೆ...
ಕರೆದುಕೋ ನಿನ್ನಯ ಬಳಿಯೇ!
ಒಲವಿನ ಅಪ್ಪುಗೆಯಲ್ಲಿ...
ಇರಿಸಿಕೋ ನಿನ್ನಯ ಬಳಿಯೇ!
ನನ್ನ ಜೊತೆಯು ನೀನೆ ಎಂದಿಗೂ..ತಿಳಿಯೇ!!"
"ರಾಶಿ_ರಾಶಿ ಕನಸದು ನನ್ನ ಮನದಲಿ...
ಎಲ್ಲಾ ಕನಸಿನಲ್ಲಿಯೂ ನೀನೆ ಕೇಳಿಲ್ಲಿ!
ಕೋಟಿ_ಕೋಟಿ ಕಾರಣ ಹುಡುಕ ಬೇಡವೆ..
ಬಂದ ಹಾಗೆ ಒಲವನು ಅಪ್ಪಿಕೊಳ್ಳೆಯೇ!
ಸಾಧಾರಣ ಹುಡುಗನ! ಅಸಾಧಾರಣ ಒಲವನು!
ಹೊತ್ತು ನಿಂತಿಹ..ಅಪ್ಪಿ ತಬ್ಬಿಕೋ..ಒಲವ ಹುಡುಗನ!!"
ಎಮ್.ಎಸ್.ಭೋವಿ....✍️

- mani_s_bhovi

21 Sep 2022, 10:28 pm