Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗುರಿ

"ಗುರಿಯನ್ನು ಮುಟ್ಟಲು ಏಕೆ ಯತ್ನಿಸಬಾರದು?
ಸೋಲಿನಿಂದ ನಾವು ಹೆಚ್ಚು ಬುದ್ಧಿವಂತರಾಗುವೆವು, ಕಾಲ ಅನಂತವಾಗಿದೆ.
ಗೋಡೆಯನ್ನು ನೋಡು, ಗೋಡೆ ಎಂದಾದರು ಸುಳ್ಳು ಹೇಳೀತೆ?
ಅದು ಯಾವಾಗಲೂ ಒಂದು ಗೋಡೆಯೇ ಆಗಿರುತ್ತದೆ.
ಮನುಷ್ಯ ಸುಳ್ಳನ್ನು ಹೇಳುತ್ತಾನೆ. ಆದರೆ ಅವನು ಒಬ್ಬ ದೇವನೂ ಆಗಬಲ್ಲ.
ಏನನ್ನಾದರೂ ಮಾಡುವುದು ಮೇಲು. ಅದು ತಪ್ಪಾದರೂ ಚಿಂತೆ ಇಲ್ಲ.
ಇದು ಏನೂ ಮಾಡದೇ ಇರುವುದಕ್ಕಿಂತ ಮೇಲು.
ಏನದರೂ ಮಾಡಿ."

- Swati S

11 Oct 2022, 06:52 pm

ಸ್ನೇಹ

"ಕಲೆಗಾರ ನಾನಲ್ಲ"
"ಕವಿಗಾರ ನಾನಲ್ಲ"
ಭಾವನೆಗಳೊಂದಿಗೆ ಬದುಕುವುದು ಬಿಟ್ಟು,
ಬೇರೇನು"ಗೊತ್ತಿಲ್ಲ"

ಆಸ್ತಿಯೂ"ನನಗಿಲ್ಲ"
ಆಸೆಯೂ"ನನಗಿಲ್ಲ"
ನಿಮ್ಮ"ಸ್ನೇಹ-ಪ್ರೀತಿ"ಬಿಟ್ಟು,
ಬೇರೇನು"ಬೇಕಿಲ್ಲ" R. S.....


- Swati S

11 Oct 2022, 12:52 am

ಕನಸು

ಕನಸಿನ ಕಣಿವೆಯಲಿ ನಿನ್ನಯ ದಾರಿಯನು ಕಾಯುವೆ ಎಂದಿಗೂ ಎಂದೆಂದಿಗೂ
ಇಷ್ಟು ದಿನ ನಿನ್ನ ನೋಡದೆ ಇರಲು ಮನವು ನೊಂದಿದೆ.ಬಾ ಬೇಗನೇ ನಿನ್ನ ದಾರಿ ಕಾಯುವೆ















ಬೀಸುವ ಗಾಳಿಯಾನು ಯಾರು ತಡೆಯಲು ಸಾಧ್ಯ

- Divya A.S

10 Oct 2022, 03:21 pm

ಹೆಣ್ಣು

ಹೆಣ್ಣೇ ಎಂದು ಏಕೆ ಕೀಳಾಗಿ ನೋಡುವೆ...
ಹೆಣ್ಣು ಇಲ್ಲದ ಮನೆ ಸುಡುಗಾಡಿನಂತೆ...
ನಿನ್ನ ತಾಯಿಯಾಗಿ, ನಿನ್ನ ಅಕ್ಕತಂಗಿಯೂಗಿ, ನಿನ್ನಮಡದಿಯಾಗಿ ಮಾತ್ರ ಬೇಕೆಂದು, ನಿನ್ನ ಮಗಳಾಗಿ ಯಾಕೆ ಬೇಡ ಎನ್ನುವೆ...?

ಹೆಣ್ಣು ಹುಟ್ಟಿದರೆ ಆಯ್ಯೆ ಎಂದೆ...?
ಹೆಣ್ಣು ಕಲಿತರೆ ಸೊಕ್ಕೆಂದೆ...
ಹೆಣ್ಣು ಕಲಿಯದಿದ್ದರೆ ಏನೂ ತಿಳಿಯದವಳು ಎಂದೆ...
ಹೆಣ್ಣಿಗೆ ಸ್ಥಾನವಿಲ್ಲವೆಂದೆ...
ಹೆಣ್ಣು ಬಡವಳಿದ್ದರೆ ಜೀವನದುದ್ದಕೂ ಅವಮಾನ ಅಪಮಾನ ಮಡುವೆ...
ಹೆಣ್ಣು ಶ್ರೀಮಂತಳಾದರೆ ಗೌರವಿಸುವೆ ಏಕೆ?

ನಾನು ಗಂಡು, ನೀನು ಕೇವಲ ಹೆಣ್ಣು ಎಂದು ಗರ್ವದಿಂದ ಹೇಳಬೇಡ...
ಹೆಣ್ಣಿನ ಸರಿಸಮ ನಿನಾಗಲಾರೆ...
ಹೆಣ್ಣು ಇಲ್ಲದ ನೀನ್ನ ಜೀವನ ಅಪೂರ್ಣ ಎಂದು ಮರೆಯಬೇಡ...

ಒಮ್ಮೆ ಹೆಣ್ಣುನ್ನು ಗೌರವಿಸಿ ನೋಡು...
ಒಮ್ಮೆ ಹೆಣ್ಣಿಗೆ ವಿದ್ಯೆಯನ್ನು ಕಲಿಸಿ ನೋಡು...
ಒಮ್ಮೆ ಹೆಣ್ಣಿಗೆ ಸ್ವಾತಂತ್ರ್ಯ ಕೊಟ್ಟು ನೋಡು...
ಒಮ್ಮೆ ಹೆಣ್ಣಿಗೆ ಜವಾಬ್ದಾರಿಯನ್ನು ವಹಿಸಿ ನೋಡು ...
ಒಮ್ಮೆ ಹೆಣ್ಣು ಮನಸು ಮಾಡಿದರೆ ಆಗದ ಕೆಲಸ ಕೂಡ ಸಾಧಿಸಿ ತೋರಿಸುವಳು...

_Aksh_Akshita_

- Akshita Paragi

10 Oct 2022, 12:45 pm

ಪ್ರೀತಿಯ ಅಲೆಯಲ್ಲಿ

"ಕಲ್ಲಿನಂತ್ತಿದ್ದ ನಾನು ಕರಗಿದ್ದು ನಿನ್ನಿಂದಲೇ..
ಕರಗಿರುವೆ ನಾ ಯಾರ ಕೈಗೆ ಸಿಗದಷ್ಟು ಈಗಾಗಲೇ..
ತುಸು ಕಡೆಗಣಿಸಿದರು ನಾ ಹೋಗಬಹುದು ಸಿಗದಲೇ..
ಸಂರಕ್ಷಿಸು ನೀ ನಿನ್ನ ಹೃದಯದ ಅಂಗಳದಲೇ."
ಕಲ್ಪನೆಯ ಕಲಾವಿದ....

- Shivu yadav

09 Oct 2022, 10:05 am

ನನ್ನವಳು

"ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವ.. ನಾ ಹೇಗೆ ವರ್ಣಿಸಲಿ..
ನನ್ನೊಂದಿಗೆ ನೀ ಹಾಡಿದ ಪ್ರೀತಿಯ ಮಾತುಗಳ.. ನಾ ಹೇಗೆ ಮರೆಯಲಿ..
ನೊಂದಿರುವಾಗ ನೀನೊಂದು ಅಪ್ಪುಗೆಯು ತಂದ ಸಮಾಧಾನವ.. ನಾ ಹೇಗೆ ತಿಳಿಸಲಿ..
ನಿನ್ನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಇರುವುದು.. ನಾ ಹೇಗೆ ಜೀವಿಸಲಿ."
ಕಲ್ಪನೆಯ ಕಲಾವಿದ...

- Shivu yadav

09 Oct 2022, 09:46 am

ಖುಷಿ

ಪ್ರೀತಿಯ ಕನಸಿನ ದಾರೆ
ಮನದಲ್ಲಿ ಹರ್ಷದ ತಾರೆ
ನಮ್ಮಿ ಬಾಂದವ್ಯ ತೊರೆ
ಹೀಗೆ ಸದಾ ಖುಷಿಯಾಗಿ ಇರು ನೀರೇ (ಹೆಣ್ಣೇ )

- Rashmi Rao

08 Oct 2022, 11:14 am

ನೀನು ಯಾಕೆ ಸಿಗಲಿಲ್ಲ....?


ಪ್ರತಿ ಕ್ಷಣ ನಿನ್ನ ನೆನೆದು
ದುಃಖಿತವಾದ ನನ್ನ ಮನದ
ನೋವನ್ನು ತಿಳಿಸಲು ಬಂದಾಗ
ನೀನು ಯಾಕೆ ಸಿಗಲಿಲ್ಲ..?

ಪ್ರೇಮದ ಆ ಯಾನದಲಿ
ಮನಸುಗಳು ಒಂದಾಗಿ ಕೂಡಿ
ಭಾವನೆಗಳು ಸನಿಹಕೆ ಬಂದಾಗ
ನೀನು ಯಾಕೆ ಸಿಗಲಿಲ್ಲ....!

ಎರಡೂ ಹೃದಯಗಳು ಬೆರೆತು
ಪ್ರೀತಿಯಂಬ ಜಾಲದಲ್ಲಿ ಸಿಲುಕಿ
ಮೊದಲ ಭೇಟಿಗೆ ಗುಲಾಬಿ ತಂದಾಗ
ನೀನು ಯಾಕೆ ಸಿಗಲಿಲ್ಲ..!

ಇಲ್ಲದ ಮನಸಿನ ವಿವಾಹದಲ್ಲಿ
ಸಪ್ತಪದಿ ತುಳಿಯಲು ನಡೆವಾಗ
ನಿನ್ನ ಕಂಬನಿ ಒರೆಸಲು ನಾ ಬಂದಾಗ
ನೀನು ಯಾಕೆ ಸಿಗಲಿಲ್ಲ....?

ನಿನ್ನ ಪ್ರೀತಿಯು ದೂರವಾಗಿ
ಬದುಕು ನರಕದಂತಾಗಿ
ಒಂಟಿತನವೇ ನನ್ನ ಬಯಸಿ ಬಂದಾಗ
ನೀನು ಯಾಕೆ ಸಿಗಲಿಲ್ಲ....?

ಶಿವರಾಜ ಕೋಟನಕರ
ಬಾದಾಮಿ
೮೭೪೮೮೨೧೦೭೩

- Shivaraj 72

08 Oct 2022, 10:08 am

ನಾನು ಈಗ ಪ್ರೀತಿಯಲ್ಲಿ ಬೀಳಬೇಕು ಅಂತೆ..?

ತೇರಿನ ಬದಲು
ನಿಮ್ಮನ್ನೇ ನೋಡಬೇಕಂದರೆ
ನಿಮ್ಮ ತಯಾರಿ ಸೀರೆ ಆಗಿರಬೇಕು
ಕಾಡುವ " ಮಣಿ " ಬೇಕೆಂದರೆ
ಅವನ ಜಿಯೋ ನಂಬರಿಗೆ
ನೀವು ಜೀವ ತುಂಬಬೇಕು
ಹಿಂದೆ ಮುಂದೆ
ಸುಳಿವವನು ಬೇಕಂದರೆ
ನೀವು ಅರಿಶಿಣ ಮತ್ತು ಚಂದನದ
ಸಂತೂರ್ ಬಳಕೆದಾರರು ಆಗಿರಬೇಕು
ಅಂತವನು ಬೇಕು ಇಂತವನು ಅಂದು
ಅಂಕಲ್ಗಳ ಕೈ ಹಿಡಿದು ಸಿಂಗಲ್ಸ್ ಗಳ
ಬಾಯಿಂದ ಶಾಪ ಹಾಕಿಸಿಕೊಳ್ಳಬೇಕು
ಅಲ್ವಾ.............
ಎಮ್.ಎಸ್.ಭೋವಿ....✍️

- mani_s_bhovi

07 Oct 2022, 11:16 pm

ನೀ_ಇದ್ದಹಾಗೆ_ಇರುವುದೆ_ಜೊತೆಯಲಿ...

"ಕರಗದಂತ ಕನಸು ನೀನು..
ನನ್ನ ಮನದ ಒಡಲಲ್ಲಿ !
ಅಳಿಸದಂತ ನೆನಪೇ ನೀನು..
ನನ್ನ ಬದುಕ ಪುಟದಲಿ !
ಕಾಲ_ಸರಿದ ಹಾಗೆಲ್ಲ !
ಹಾವಿಯಾಗಿ ಹೋಗದಲ್ಲ !
ಹಚ್ಚಾಗಿಹೆ..ನನ್ನ ಮನದಲಿ !!"
"ಮನದಿ ಎಲ್ಲ ನಿನದೆ ಮಾತು..
ಇಲ್ಲವೆಂದರು ನೀ ಜೊತೆಯಲಿ !
ನಿನ್ನ ಕುರಿತೆ ಹುಡುಕಾಟ..
ಅನುಕ್ಷಣವು ನನ್ನಲ್ಲಿ !
ಯಾರೇ ಬರಲಿ ! ಯಾರೇ ಇರಲಿ !!
ನೀ ಇದ್ದಹಾಗೆ ಇರುವುದೆ ಜೊತೆಯಲಿ ?!"
ಎಮ್.ಎಸ್.ಭೋವಿ....✍️

- mani_s_bhovi

07 Oct 2022, 03:16 pm