Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಕೃತಿ

ಪ್ರಕೃತಿ ಇಲ್ಲದ ಮಾತೇ ಇಲ್ಲ....
ಪ್ರಕೃತಿ ಭಾವ ಇಲ್ಲದ
ಮನಸ್ಸು ಕಂಡಿಲ್ಲ....
ಪ್ರಕೃತಿಯ ಜೀವವಿಲ್ಲದೆ
ನಮ್ಮಯ ಸೋಬಗಿಲ್ಲ....
ಪ್ರಕೃತಿಯ ನೋಟವಿಲ್ಲದೆ
ನಮ್ಮಯ ಉಳಿವಿಲ್ಲ.....
ಪ್ರಕೃತಿ ಮಾತೆಯೇ ಮಡಿಲು..
ಬಾರದೇ ಪ್ರಪಂಚವೇ
ಉಳಿಯೋಲ್ಲ.......

- Swati S

16 Oct 2022, 09:47 pm

ಒಲವಾಗೋಗಿದೆ.. ಮನವು ನಿನದಾಗೋಗಿದೆ..

"ನಾ ಗೀಚೋ ಸಾಲಲೆಲ್ಲ....
ನಿನದೇ ಗುರುತಿದೆ! ನಿನದೇ ಗುನುಗಿದೆ!
ನಾ ಕಾಣೋ ಕನಸಲೆಲ್ಲ....
ನಿನದೇ ಸೊಗಸಿದೆ! ನಿನದೇ ಬೆಳಕಿದೆ!
ಒಂದೇ ಸಮನೆ ಕಾಡುತಿಹೆ.. ಹಗಲು ಇರುಳೆನದೇ!
ಕಾಣಿಸದೆ ಹೋಗಿಹೆ ಎಲ್ಲಿ.. ಎದಿರು ಬಾರದೇ!
ಒಮ್ಮೆ ಕಾಣಿಸೆ.. ನನ್ನೇ ಆಲಿಸೆ..
ಒಲವಾಗೋಗಿದೆ !
ಮನವು ನಿನದಾಗೋಗಿದೆ !!"
ಎಮ್.ಎಸ್.ಭೋವಿ....✍️

- mani_s_bhovi

15 Oct 2022, 11:15 pm

ಮಳೆ

ಚುಮು ಚುಮು ಮಳೆ ಬರುತಿರಲು.....
ತಣ್ಣನೆಯ ಗಾಳಿ ಬಿಸುತಿರಲು.......
ಪ್ರಕೃತಿಯ ಅಂದ ಸವಿಯುತ್ತ.......
ಬಿಸಿ ಬಿಸಿ ಚಹಾ ಕುಡಿಯುತ್ತ.......
ಹೊಸ ಹೊಸ ಹನಿಗಳು ಕವನಗಳು....
ಮೂಡುವಾಗ ಸುಂದರ ಕವಿತೆ......
ರೂಪೂಗೊಳ್ಳುವಾಗ........
ಮೂಡಿತೊಂದು ನಿಸರ್ಗದ.....
ಅದ್ಭುತ ಕವನ.......

- Swati S

15 Oct 2022, 10:36 pm

ಹೃದಯ

ನಾನು ತಪ್ಪು ಮಾಡಿದಾಗ, ನನ್ನ ಸರಿ ಮಾಡುವುದಕ್ಕೆ ನಿನ್ನ ಕೈಗಳು ಬೇಕು,
ನಾನು ಅತ್ತಾಗ ನನ್ನ ಸಂತೈಸಲು ನಿನ್ನ ಕೈಗಳು ಬೇಕು, ನಾನು ಗೆದ್ದಾಗ ನನ್ನ
ಹುರಿದುಂಬಿಸಲು ನಿನ್ನ ಕೈಗಳು ಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ
ನಿನ್ನ ಕೈಗಳನ್ನು ನನಗೆ ಕೊಟ್ಟು ಬಿಡು ನೀನು ಬಯಸುತ್ತೀಯ, ನೀನು ಪಡೆಯುತ್ತೀಯ, ಅದು ಅದೃಷ್ಟ.
ನೀನು ಬಯಸುತ್ತೀಯ, ನೀನು ಕಾಯುತ್ತೀಯ, ಅದು ನಿನ್ನ ಕಾಲ. ನೀನು ಬಯಸುತ್ತೀಯ,
ಆದರೆ ರಾಜಿ ಮಾಡಿಕೊಳ್ಳುತ್ತಿಯ, ಅದು ಜೀವನ. ನೀನು ಬಯಸುತ್ತೀಯ, ಕಾಯುತ್ತೀಯ
ಆದರೆ ರಾಜಿ ಮಾಡಿಕೊಳ್ಳುವುದಿಲ್ಲ ಅದೇ ಪ್ರೀತಿ.ನೀನು ನನಗೆ ಕಾಣಿಸದೇ ಹೋದರೂ ನನ್ನ ಹೃದಯದಲ್ಲೇ ಇದ್ದೀಯಾ,
ನೀನು
ನನ್ನ
ಕೈಗೆ ಸಿಗದೆ ಹೋದರೂ ನನ್ನ ನೆನಪಿನ ಅಂಗಳದಲ್ಲಿ ಇದ್ದೀಯಾ. ನಾನು ನಿನಗೆ
ಏನು ಅನ್ನೋದು ನನಗೆ ಗೊತ್ತಿಲ್ಲ. ಆದರೆ ನೀನು ಮಾತ್ರ ನನಗೆ ಯಾವಾಗಲು Special Person i miss u so much..... R. S........

- Swati S

14 Oct 2022, 09:58 pm

ಮರೆಯಲಾರದ ಸ್ನೇಹಿತೆ

ಅನುಕ್ಷಣವು ನಿನ್ನೊಂದಿಗೆ ಕಳೆದ ನೆನಪುಗಳು,
ನಿನ್ನಂತ ವರನ್ನು ಹುಡುಕಿದರೂ ಸಿಗಲಾರದ ಸ್ನೇಹಿತರು ನನ್ನ ಸುತ್ತ,
ಮನ ಬಯಸುತಿದೆ ನನ್ನ ಪ್ರತಿ ಹೆಜ್ಜೆಯ ಜೊತೆಗೆ ನಿನ್ನ ಮಾತುಗಳು;
ನಿನ್ನ ಬಿಟ್ಟು ಬೇರಾರಲ್ಲಿಯು ಹೇಳಲಾಗದ ಮನಸಿನ ನೋವುಗಳು;
ನೀನಾದರೂ ಸರಿ ನನ್ನವಳು ;
ನಿನ್ನನ್ನೇ ಬಯಸುತ್ತಿದೆ ನನ್ನಿ ಜೀವನದ
ಮುಂದಿನ ಕ್ಷಣಗಳು.

- Laxmi Dabbanavar

14 Oct 2022, 09:45 pm

ಮಾಯಾ ಮರಿಚಿಕೆ ಅವಳು......

ಗೆಳತಿ....
ನೀನು ಮರೆತಂತಿದೆ ನನ್ನಯ ಪರಿಚಯ.....
ಕನಸಿನಲ್ಲೂ ಊಹಿಸಲಿಲ್ಲ ನೀ ನನ್ನಿಂದ
ದೂರಾಗುವ ಈ ಸಮಯ.....
ನನ್ನ ಮನದಲ್ಲಿ ಸದ್ದಿಲ್ಲದೆ ಎದ್ದಂತಿದೆ ಪ್ರಳಯ.....
ಯಾಕೆಂದು ತಿಳಿಯುತ್ತಿಲ್ಲ ನೀ ನನ್ನ ದೂರಮಾಡಿದ
ವಿಷಯ.......
_ಪದಗಳಿಲ್ಲದ ಕವನ......
msbhovi.....✍️













- mani_s_bhovi

14 Oct 2022, 09:29 pm

ಪಿಸುಮಾತು.......

ನಿನ್ನ ನೋಡೋ ಆಶೆ ನನಗೆ....

ನನ್ನ ಸತಾಯಿಸುವ

ಮನಸೇಕೆ ನಿನಗೆ...

ಅದೆಷ್ಟೋ ಸಲ ಬಂದು ಹೋದೆ ನಾ,

ಮನೆಯ ಹೊರಗೆ....

ಆದರೆ ನೀ ಕಾಣಲಿಲ್ಲ,

ನಿಮ್ಮ ಮನೆಯ ಅಂಗಳದೊಳಗೆ...

ಕಾಯುತ್ತಿರುವೆ ನಾ, ಒಮ್ಮೆ ಬಂದು

ಹೋಗು, ಹೊತ್ತು ಮುಳುಗುವುದರೊಳಗೆ.....

ಎಮ್.ಎಸ್.ಭೋವಿ.....✍️

- mani_s_bhovi

14 Oct 2022, 09:28 pm

ಅರ್ಥವಾಗದ ಭಾವನೆಗಳು ನಿನ್ನದು...


ಅರ್ಥವಾಗುತ್ತಿಲ್ಲ ನಿನ್ನ ಭಾವನೆಗಳು....

ಕೇಳಿದರು ಹೇಳುತ್ತಿಲ್ಲ ನಿನ್ನ ಮನಸ್ಸಿನ

ಮಾತುಗಳು....

ನಿನ್ನ ಗೊಂದಲದ ಮಾತುಗಳಿಂದ

ಬಲಿಯಾಗುತ್ತಿರುವುದು ಮಾತ್ರ ನನ್ನ

ಭಾವನೆಗಳು....

ಇಷ್ಟೊಂದು ಮನಸ್ಸಿಗೆ ಹತ್ತಿರವಾದವಳು,

ಯಾರಿವಳು.......?
ಎಮ್.ಎಸ್.ಭೋವಿ.....✍️

- mani_s_bhovi

14 Oct 2022, 09:28 pm

ಮನಸ್ಸು



ಕಣ್ಣೊಳಗಿನ ಕನಸನ್ನು ಕದಿಯಬೇಡ……..
ಸುಪ್ತ ಮನಸ್ಸಿನ ಮಾತನ್ನು ಮರಿಯಬೇಡ…….
ಹೃದಯದ ಭಾವನೆಯ ಹೇಳದೇ ಇರಬೇಡ…….
ಎಲ್ಲವನು ತನ್ನೊಳಗೆ ಅವಿತಿಟ್ಟು ಕೊರಗಬೇಡ.R. S....


- Swati S

13 Oct 2022, 10:10 pm

ಅವಳು ಹುಬ್ಬೇರಿಸಿದಾಗೆಲ್ಲಾ ನನ್ನ ಮನಸ್ಸಲ್ಲಿ ಹೊಂಬಾಳೆಯಂತ

ಅವಳು
ಹುಬ್ಬೇರಿಸಿದಾಗೆಲ್ಲಾ
ನನ್ನ ಮನಸ್ಸಲ್ಲಿ
ಹೊಂಬಾಳೆಯಂತ
ಹೂಗಳು ಅರಳುತ್ತವೆ!

ಅವಳನ್ನು
ಪ್ರೇಮಿಸದ್ದಕ್ಕಿಂತ
ಪೂಜಿಸಿದ್ದೆ ಹೆಚ್ಚು;
ಅದಕ್ಕೆ ಅಲ್ವಾ ಅವಳಿಗೆ
ನಾನಂದ್ರೆ ಅಚ್ಚುಮೆಚ್ಚು!

- Kalmesh kale

13 Oct 2022, 10:55 am