Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೀಪಾವಳಿ

ಮಿನುಗುತ್ತಾ ಬರಲಿ ದೀಪಾವಳಿ
ಮಾಸಿದ ಬದುಕಿಗೆ ತರಲಿ ತಂಗಾಳಿ
ಮರೆಯಾಗಲಿ ಹಣದುಬ್ಬರದ ಬಿರುಗಾಳಿ
ಲಕ್ಷ್ಮೀದೇವಿಯೇ ನೀ ಮಾಡದಿರು ಚಳುವಳಿ
ಹರಸು ನೀ ನೀಡುತ್ತಾ ಸಂತಸದ ಬಳುವಳಿ
ದೂರವಾಗಿಸು ಬಡತನದ ಪಾತಳಿ
ಮುದುಡಲಿ ಅಂಧಕಾರದ ಹಾವಳಿ
ದಿವಾಳಿಯಾಗದಿರಲಿ ದೀಪಾವಳಿ
ಅರಳಲಿ ಬಾಳಲ್ಲಿ ನಗೆಯ ಓಕಳಿ....

ದೀಪಾವಳಿ ಹಬ್ಬದ ಶುಭಾಶಯಗಳು.....

- Swati S

26 Oct 2022, 09:39 am

ನನ್ನನ್ನೇ ನಾ.. ಹೊಸದಾಗಿ ಕಂಡುಕೊಳ್ಳುತ!!...

"ಕಾಣದೆ ಹೋದರೇನು !
ದೂರಕೆ ಸರಿದರೇನು !
ಮರೆಯಾಗಲಾರೆ ಎಂದಿಗೂ ನನ್ನಲ್ಲಿ..
ಕನಸಲು.. ಬರುವೆ ಇನ್ನು !
ಮಾತವು... ನಿನದೆ ಇನ್ನು !
ಜೊತೆ_ಇಲ್ಲ ನೀ.. ಅಂದುಕೊಳ್ಳದೆ !
ನೀ_ಕೊಟ್ಟ ನೆನಪನು.. ಅಳಿಸದೆ !
ಸಾಗುತಿರುವೆ.. ನಿನ್ನ ಕುರಿತೆ ಗೀಚುತ !
ನನ್ನನ್ನೇ ನಾ.. ಹೊಸದಾಗಿ ಕಂಡುಕೊಳ್ಳುತ !!"
ಎಮ್.ಎಸ್.ಭೋವಿ....✍️

- mani_s_bhovi

25 Oct 2022, 03:02 pm

ಹಣತೆ

ಬಾನಿನಲ್ಲಿ ಸೂರ್ಯನಿದ್ದರೂ
ಕತ್ತಲ ಕೋಣೆಯಲ್ಲಿ
ಹಣತೆಯೇ ಸೂರ್ಯ!

ಕತ್ತಲ ಓಡಿಸೋ
ಒಂಟಿನಾವಿಕ ಹಣತೆಯ
ಬದುಕು ತಾತ್ಕಾಲಿಕ

ಆಯಸ್ಸು ಇದ್ದಷ್ಟು ದಿನ ಬದಕು
ಎಣ್ಣೆಯಿದಷ್ಟು ಹೊತ್ತು
ಉರಿಯೋದು ಹಣತೆ!

ಹಣತೆಗೆ ಇಲ್ಲ ಜಾತಿಭೇದ
ಹೆಣ್ಣು ಗಂಡು ಎಂಬ ನಿರ್ಬಂಧ
ಯಾರು ಹಚ್ಚಿಟರು ಬೆಳಗುತ್ತದೆ

ಸಂಸಾರವೇ ಒಂದು ಹಣತೆ
ಪರಸ್ಪರ ಪ್ರೀತಿಸಿ
ಹಣತೆಯೋಳಗಿನ ಎಣ್ಣೆ ಬತ್ತೀಯಂತೆ!

- Swati S

24 Oct 2022, 01:15 pm

ಒಲವು

ಬರಡು ಬಾಳು ಕೊರಡು ಭಾವ
ಕಾಡ ದಾರಿ ನೀರ ಸುಳಿವು
ಬದುಕ ಹಾದಿ ಸವಿದಿದೆ

ಉಲಿಯುತ್ತಿದ್ದ ಮಧುರ ಗೀತೆ ತಾನೇ ಮುಕವಾಗಿದೆ

ಮಣ್ಣ ವೀಣೆ - ಮಣ್ಣ ತಂತಿ
ಚಿಗುರು ಬೆರಳು ನಾದ ಮೀಟೇ
ರಾಗದೊರೆತ ಹುಟ್ಟದು

ಹಳೆಯ ಮೆಲಕು ಮುಂದೆ ಮುಸಕು
ಒಳವದೇಕೋ ದಕ್ಕದ್ದು

ಇದರ ನಡುವೆ
ಮೇಲನ್ನೆಲ್ಲೋ ಕೇಳಿ ಬಂದ ನಿನ್ನ ಕರೆಗೆ
ಮರೆತ ಮಾತು ಇರದ ಭಾವ ಮತ್ತೆ ತೆಲಿಬಂದಿದೆ
ಗಾಳಿ ತೀಡಿದಂತಿದೆ!❣️

- Swati S

22 Oct 2022, 11:47 am

ಜೀವನ ಸಾಹಿತ್ಯ

ಬದುಕಿನ ಸಾಹಿತ್ಯದೋಳಗ
ನಾ ಬಾಳ ಹಿಂದೆ ಅದೀನಿ
ನನ್ನೊಳಗ ಅಕ್ಷರಗಳ ಕಣಜ
ತುಂಬಿಸಬೇಕ ಅಂದಕೊಂಡೀನಿ

ಜೀವನದೋಳಗ ಏನೆಲ್ಲ ಕಂಡೀನಿ
ಲೇಖನಿನೊಳಗ ನೆಮ್ಮದಿ ಕಂಡೀನಿ
ಪುಸ್ತಕದೋಳಗ ಜಗವ ಕಂಡೀನಿ
ಭಾವನೆಗಳ ಹೃದಯ ಬೆಳಸಿಕೊಂಡೀನಿ

ಹೊನಿಲ್ಲ ಬಣ್ಣಿಲ್ಲ ಬರೆಯುವದೂ
ನಾ ನಿಲ್ಲಿಸಲ್ಲ ನೋವು ನಲಿವುಗಳ
ಸಮೇಳನದಲ್ಲಿ ಹೊತ್ತಿಗೆಗಳ
ಸಂಬಂಧಿಳು

ಜಗಳಿಲ್ಲ ಮುನಿಸಿಲ್ಲ
ಮೌನ ನಗುವಿನ ಸರಸದಲ್ಲಿ
ಪುಸ್ತಕವೇ ಜೊತೆಗಾರ
ಜ್ಞಾನ ತುಂಬಿಸಿಕೊಳ್ಳುವುದೇ ಸಡಗರ

- Swati S

21 Oct 2022, 12:17 am

ಸೀರೆ....

ಅಂದವನ್ನು ಆರೋಗ್ಯಕರವಾಗಿ
ಪ್ರದರ್ಶಿಸೋ ಸೀರೆ

ನಾಚಿಕೆಯ ನೆರಿಗೆಯಲಿ
ಸಂಕೋಚವನ್ನು ಸೆರಗಲ್ಲಿ
ಸೂಚಿಸೋ ಸೀರೆ

ಉಟ್ಟವರ ಮನಸಿಗೆ
ಆನಂದ ಸೀರೆ
ನೋಡೋರ ಕಣ್ಣಿಗೆ
ಪರಮಾನಂದ ಸೀರೆ

ಸರಳ ಸುಂದರಿಯರಿಗೆ
ಅಲಂಕಾರ ಸೀರೆ
ಮಂಗಳಗೌರಿಯರಿಗೆ
ಗೌರವ ಸೀರೆ...
ಎಮ್.ಎಸ್.ಭೋವಿ...✍️
...........
...........
...‌‌........
....‌‌.......
...........

- mani_s_bhovi

18 Oct 2022, 10:55 pm

ನಿನಗಾಗಿ

ಅಂದದ ಅದರಗಳಲಿ
ಚಂದದೊಂದು ನಗುವಿರಲಿ
ಮಂದಾರ ಮನಸಿನಲ್ಲಿ
ಸುಂದರ ಕನಸಿರಲಿ
ಪ್ರೀತಿ ಎಂಬ ಹೂವಿನ ಗಂಧ ನನಗಾಗಿ ತೇಲಿ ಬರಲಿ....!

ಪ್ರೀತಿಯ ಅರ್ಥ ನಾ ಅರಿತೇ
ನಿನ್ನಂದಕೆ ನಾ ಮನಸೋತೆ
ಬರುತ್ತಿಲ್ಲ ಬಾಯಿಂದ ಮಾತೆ
ಆ ಖುಷಿಯಲ್ಲಿ ನನನ್ನೇ ನಾ ಮರೆತೇ
ಪ್ರೇಮದ ಹೂವಲ್ಲಿ ಗಂಧವಾಗಿ ನಾನು ಬೆರೆತೆ......!

ಎಂದೆದೂ ನಾ ನಿನಗಾಗಿ
ಕಣ್ಣಲ್ಲಿ ಬಿಂಬವಾಗಿ
ತುಟಿಗಳಲಿ ನಗುವಾಗಿ
ಹೆಜ್ಜೆ ಹೆಜ್ಜೆಯಲ್ಲಿ ಗೆಲುವಾಗಿ
ಇರಲು ಬಂದೆ ನಾನಿಂದು ಸಾವಲ್ಲೂ ನಿನ್ನ ಜೊತೆಯಾಗಿ......! ಪ್ರೀತಿಯ ಹೃದಯ

- Swati S

17 Oct 2022, 11:30 pm

ಅವಳನಷ್ಟೇ ಪ್ರೀತಿಸುವೇ...!!

"ಅವಳ ಚಾಟ್_ಲಿಸ್ಟ್ ಲ್ಲಿ ಇರಬೇಕು ಅನ್ಕೊಂಡೆ!
ಆದ್ರೆ ಅವಳು ಅನ್ಕೊಂಡಿದ್ದೆ ಬೇರೇ..ಬ್ಲಾಕ್_ಲಿಸ್ಟ್!
ಅವಳ ಹಾರ್ಟಲಿಸ್ಟ್ ಲ್ಲಿ ,ಕ್ರಸ್_ಲಿಸ್ಟ್ ಲ್ಲಿ ಇರಬೇಕು
ಅನ್ಕೊಂಡೆ!
ಆದ್ರೆ ಅವಳು ಅನ್ಕೊಂಡಿದ್ದೆ ಬೇರೇ..ಹೆಟ್_ಲಿಸ್ಟ್!
ಏನೇ ಆಗಿರಲಿ....
ನಾ_ಯಾರು ಅವಳ ತಡೆಯಲು..ದೂರ ಸರಿದಾಗ!
ಅವಳ್ಯಾರು ನನ್ನ ತಡೆಯಲು..ಇನ್ನಷ್ಟು ಪ್ರೇಮಿಸಿದಾಗ!
ಅವಳು...
ದೂರಿದರು! ರೇಗಿದರು!
ನನ್ನೇ ನಾ_ಕಳೆದು ಕೊಂಡರು!
ಅವಳನ್ನೇ ಪ್ರೀತಿಸುವೇ! ಅವಳನಷ್ಟೇ ಪ್ರೀತಿಸುವೇ!
ಎಮ್.ಎಸ್.ಭೋವಿ....✍️

- mani_s_bhovi

17 Oct 2022, 09:55 pm

ಉದ್ಧಾರ

ಯಾವುದೇ ಜಾತಿ ಮತ
ಪಂಥ ಧರ್ಮ ದೇವ್ರು ಜನರು
ನಮ್ಮನ್ನ ಉದ್ಧಾರ ಮಾಡೋದು ಇಲ್ಲ
ನಮ್ಮ ನಮ್ಮ ಉದ್ಧಾರ
ನಮ್ಮ ನಮ್ಮ ದುಡಿಮೆಯಿಂದ
ಮಾತ್ರ ಸಾಧ್ಯ

ಜಾತಿ ಧರ್ಮ
ದೇವ್ರು ಹಿಂದೆ ಬಿದ್ದರೆ
ಜೀವನವೇ ಪಂಗನಾಮ
ದುಡಿಮೆ ಹಿಂದೆ ಬಿದ್ದರೆ
ಜೀವನವೇ ಉದ್ಧಾರ

- ರಾಜು ಹಾಸನ

17 Oct 2022, 08:25 pm

ತೊಟ್ಟವರ ಕಿವಿಯಲ್ಲಿ ತೊಟ್ಟಿಲಾಗಿ ತೂಗು

ಅತ್ತಿಂದ ಇತ್ತ ಕತ್ತು ತೂಗಿದರೆ
ಕೆನ್ನೆಗೆ ಮುತ್ತಿಟ್ಟು ಬರುವ
ಉಯ್ಯಾಲೆ ಜುಮುಕಿ

ಕಿವಿಯಲಿ ಪಿಸುಗಟ್ಟುವ
ಪ್ರತಿ ಗುಟ್ಟನ್ನು ಮೊದಲು ಕೇಳಿದರು
ಯಾರಿಗೂ ಹೇಳದ ಜುಮುಕಿ

ಬಂಡಿ ಗಾಲಿಯಂತಹ
ಓಲೆಗಳ ಸಂಗದಲ್ಲಿ
ಬಿಂಕದ ಓಲೆ ಜುಮುಕಿ

ಆಲಿಸುವ ಕಿವಿಯಲ್ಲಿ
ಆಕಳಿಸೋ ಕೂಸು ಜುಮುಕಿ

ತೊಟ್ಟವರ ಕಿವಿಯಲ್ಲಿ
ತೊಟ್ಟಿಲಾಗಿ ತೂಗು

ಎಮ್.ಎಸ್.ಭೋವಿ..✍️



- mani_s_bhovi

17 Oct 2022, 07:37 pm