Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳೇ_ಮನದೊಡತಿ...

"ಅವಳ ನೋಡುವುದೇ.. ಒಂದು_ಚೆಂದ !
ಅವಳು ಜೊತೆಯಾಗಿದ್ರೆ.. ಏನೋ ಆನಂದ !
ಅವಳ ಬೈಗುಳವು ಕೂಡ..
ಮುದ್ದಾಗೆ ಇರುತ್ತೆ !
ಅವಳು ನನ್ನ ಮೆಚ್ಚಿಕೊಂಡರಂತು..
ಜಗವೆ_ಗೆದ್ದಾಗ್ ಅನ್ಸುತ್ತೆ !
ಅವಳು.. ಹೇಗೆ ಇರಲಿ !
ನನ್ನ.. ಏನೇ ಅನ್ನಲಿ !
ಅದಕ್ಕಿಂತ ಹೆಚ್ಚಾಗಿ.. ಅವಳು ನನ್ನ ಪ್ರೀತಿಸಲಿ !
ಅವಳ ಪ್ರೀತಿ ಹೊರೆತು.. ಬೇರೇನು ಬೇಕಿಲ್ಲ !
ಅವಳ ಹೊರೆತು ಏನಿದ್ರು.. ನನಗೆ ಲೆಕ್ಕ ಇಲ್ಲ !!"
ಎಮ್.ಎಸ್.ಭೋವಿ...✍️

- mani_s_bhovi

14 Nov 2022, 05:25 pm

ಏಕಿದ್ದೆ_ನೀ_ನಕಲಿ..?!

"ಮನಸಾಗದೆ.. ಜೊತೆಯಾದ !
ಕನಸ_ಕಾಣದೆ.. ಕೂಡಿಬಂದ !
ಎಲ್ಲವು ನೀನೆ.. ಅಂದೇ ಏಕೆ ?
ಒಲವಲ್ಲಿ.. ಅಪ್ಪಿತಬ್ಬಿದೇಕೆ ?
ಹೇಳದೆ_ಕೇಳದೆ.. ದೂರಾದೆ ಏಕೆ ?!"
"ಬೇಡದ ಮನಸಿನಲ್ಲಿ.. ಇದ್ದೆಯ ಇಷ್ಟು_ದಿವಸ !
ಭಾವದಿ ಆಟವಾಡಿ.. ಮುಗಿಸಿದ ನೀ_ಸರಸ !
ಕಾರಣ ಸಾವಿರ.. ಇರಬವುದು ನಿನ್ನಲಿ !
ನನ್ನ ಪ್ರಶ್ನೆ ಇಷ್ಟೆಯೇ.. ಏಕಿದ್ದೆ ನೀ_ನಕಲಿ !!"
ಎಮ್.ಎಸ್.ಭೋವಿ...✍️

- mani_s_bhovi

12 Nov 2022, 07:45 pm

ಬಾಲ್ಯದ ಜೀವನ

ಬಾಲ್ಯದ ಜೀವನ ಅದೆಷ್ಟು ಸೊಗಸು,
ಕ್ರೋದ ಅಸೂಯೆ ಕಿಚ್ಚು ಇಲ್ಲದ ಮನಸ್ಸು,
ಕನಸುಗಳಿಗೆ ಇರಲಿಲ್ಲ ಎಲ್ಲೆ,
ಓ ಗಗನವೇ ಇದು ನೀ ಬಲ್ಲೆ,
ನಮಗಿರಲಿಲ್ಲ ಇತರರ ಹಂಗು,
ತುಂಬಿಕೊಂಡಿತ್ತು ಜೀವನದ ರಂಗು,
ಇದ್ದಾಗ ತಾಯಿಯ ಮಡಿಲಲ್ಲಿ,
ಬೇಸರವಿತ್ತು ನಮಗೆಲ್ಲಿ,
ಇದ್ದರೆ ಜೊತೆಯಲ್ಲಿ ಗೆಳೆಯರ ಬಳಗ,
ಎಲ್ಲವೂ ಮರೆಯುತ್ತಿದ್ದೆವು ನಾವಾಗ,
ನಮ್ಮ ಮನಸ್ಸಿತ್ತು ಸ್ವತಂತ್ರ,
ಆದೆಲ್ಲ ಆಗಿತ್ತು ನಮ್ಮ ಖುಷಿಗೆ ಮೂಲಮಂತ್ರ,
ಯಾಕೆ ಮರೆತವು ನಾವು ಆ ಕಲೆಯ?
ನೆನಪಾಗದೆ ನಮಗೆ ಆ ಬಾಲ್ಯ?
ಮರಳಲು ಇಚ್ಛಿಸಿದೆ ಮನ ಆ ಕಾಲಕೆ?
ಮತ್ತೆ ಒಡೆಯಲು ಸಾಧ್ಯವಿಲ್ಲವೇ
ಆ ಬಾಲ್ಯ ಮನದ ಮೊಳಕೆ?

ಸ್ವಾತಿ.........



- Swati S

12 Nov 2022, 12:04 am

ತುಟಿ ಮೇಲೆ ನಗುವ ಬಿತ್ತಲು ಮರೆಯದೆ ಬರುವೆ...

ಕಳೆದ ಆ ದಿನಗಳ
ಕಥೆಯ ರೂಪದಲ್ಲಿ ಕರೆತರುವೆ
ಕಿವಿಗೊಟ್ಟು ಕೇಳು
ಮಿಡಿಯುವ ಮನಕೆ
ಮಿನುಗುವ ನಗು ತರುವೆ
ಮನಬಿಚ್ಚಿ ಕೂಗು
ಕಣ್ಮರೆಯಾಗಿಲ್ಲ ನಾನು
ಕಣ್ಮರೆಯಾಗುವವರೆಗೂ
ನಿನ್ನನ್ನೇ ನೋಡುತಿರುವೆ
ಹಿಂತಿರುಗಿ ನೋಡು
ಸಾಕಾದ ಜೀವನಕೆ
ಸಾಕಷ್ಟು ಕ್ಷಣಗಳ ಮೀಸಲಿಡುವೆ
ಬಿಕ್ಕಿ ಅತ್ತವಳೆ
ತುಟಿ ಮೇಲೆ
ನಗುವ ಬಿತ್ತಲು
ಮರೆಯದೆ ಬರುವೆ
ಎಮ್.ಎಸ್.ಭೋವಿ...✍️

- mani_s_bhovi

10 Nov 2022, 08:23 pm

ವಾಸ್ತವ

ಪರ್ವತದಿಂದ ಹರಿಯುವ ನದಿಗೇನು ತಿಳಿದಿದೆ
ತನ್ನ ಪಯಣ ಎಲ್ಲಿಗೆಂದು?

ಗಿಡದಲ್ಲಿ ಅರಳಿದ ಹೂವಿಗೇನು ತಿಳಿದಿದೆ ತನ್ನ ಸಮರ್ಪಣೆ ಯಾವ ದೇವರ ಪಾದಕೆಂದು?

ಸ್ವಚಂದವಾಗಿ ಬೀಸುವ ಗಾಳಿಗೇನು ತಿಳಿದಿದೆ
ತನ್ನ ಚಲನೆ ಯಾವ ದಿಕ್ಕಿಗೆಂದು?

ವೈರಾಗ್ಯ ದ್ವೇಷ ಅಸೂಯೆ ಏತಕೆ ಮನದಲ್ಲಿ

ಪ್ರತಿದಿನವೂ ಅಚ್ಚರಿ ಕಾದಿರುವ ಈ ಬದುಕಿಗೇನು
ತಿಳಿದಿದೆ ತನ್ನ ಭವಿಷ್ಯ ಎತ್ತ ಸಾಗುವುದೆಂದು?

ಸ್ವಾತಿ.........

- Swati S

09 Nov 2022, 08:30 pm

ಒಲವು

"ನಿನ್ನನ್ನೇ ನೋಡುವ ಕಾತುರದಿ
ಪಯಣವ ಬೆಳೆಸಿರುವೆ,
ಹಾದಿಯ ನಡುವೆ ನಾ ದಾರಿ
ತಪ್ಪಿರುವೆ ಗೆಳತಿ ಕಾಣದ ನಿನ್ನನ್ನು
ಕಾಣುವ ಬಯಕೆಯೂ,
ಈ ಸುರಿಯುವ ಸೋನೆಯಲಿ ನಿನ್ನದೇ
ತುಂತುರು ನೆನಪುಗಳು,
ಅದೆಲ್ಲಿರುವೆಯೋ ಬಂದು ಸೆರುವೆ ಈ
ಮುಂಗಾರು ಮುಗಿಯುವ ಮುನ್ನ"..!!
ಎಮ್.ಎಸ್.ಭೋವಿ...✍️
..
..

- mani_s_bhovi

08 Nov 2022, 07:20 pm

ಹೇ_ಕನಸಿನ_ಲೋಕದ_ರಾಜಕಮಾರಿ..

"ಹೇ.. ಕನಸಿನ ಲೋಕದ ರಾಜಕುಮಾರಿ!
ಅವಾಗವಾಗ ಎದುರಾಗೋಕೆ ಏನೇ..ಸೋಮಾರಿ!
ಎಷ್ಟೇ ಕಾಡೋದು ಮರೆಯಲ್ಲೇ.. ಮಯೂರಿ!
ಯಾಕಾಗಿ ಸತಾಯಿಸುತಿರುವೆ.. ಕಿನ್ನರಿ!
ಆಲಿಸೆ ನನ್ನ ಮಾತಾ.. ಹೇ_ನಾರಿ!
ಸ್ವಲ್ಪ ಬಂದು ನೋಡೆ.. ನನ್ನ ದಾರಿ!
ನೀನೆ ನನ್ನವಳೆಂದು.. ಮನ_ಮಾಡಗಿದೆ ಜಾರಿ!
ಪ್ರತಿ_ಹೆಜ್ಜೆಲು ಜೊತೆಯಾಗಿ.. ಸೇರೆ ನನ್ನ ಸವಾರಿ!
ಹೇ ಮಾರಿ_ಪ್ಯಾರೀ.. ಮಾಡೇ ಒಲವ_ಖಾತರಿ!
ತೋರೆ.. ಅತ್ಯದ್ಬುತವಾದ ಒಲವಿನ_ಪರಿ!!"
ಎಮ್.ಎಸ್.ಭೋವಿ...✍️

- mani_s_bhovi

06 Nov 2022, 03:44 pm

ನಂಬಿಕೆಯ ಸಾರವೆ ಇಲ್ಲದಾಗಿದೆ...

"ನೆನಪಿನ ರಾಶಿಗೆ.. ನಿನದೆ ಹೆಸರಿದೆ !
ಕನಸಿನ ಬೀದಿಲಿ.. ಕತ್ತಲೆ ಕವಿದಿದೆ !
ಒಲವಿನ ಗಾಳಿಯ ಸದ್ದಿಲ್ಲದೇ...
ವಿರಹದ ಅಪ್ಪುಗೆ ಇನ್ನೂ ಹೆಚ್ಚಿದೆ !
ವಿವರಿಸಲಾಗದ ರೀತಿಗೆ..
ಬದುಕು ತಿರುಗಿದೆ !
ನಿರಂತರ ಹೊಡೆತಗಳಿಂದ..
ಮನವು ಕುಗ್ಗಿದೆ !
ನಂಬಿಕೆಯ ಸಾರವೆ.. ಇಲ್ಲದಾಗಿದೆ !!"
ಎಮ್.ಎಸ್.ಭೋವಿ...✍️

- mani_s_bhovi

06 Nov 2022, 03:27 pm

ಕನಸು

ಮೂಡಲ ನೇಸರನು.
ಪಡುವಣ ಸೇರುವ ಕನಸು;
ಅಣೇಕಟ್ಟಿನ ನದಿಗೆ,
ಹರಿದು ಹೋಗುವ ಕನಸು

ದಾರಿ ತಪ್ಪುವ ಹಕ್ಕಿಗೆ
ಗೂಡು ತಲುಪಿಸುವ ಕನಸು;
ಮುಗಿಯದ ಹೆಜ್ಜೆಗೆ,
ಊರ ಸೇರುವ ಕನಸು

ನಗುಹೀನ ಮೊಗಕೆ
ನಗುವ ಬೀರುವ ಕನಸು;
ಬಾಲಗೊಂಚಿಯ ಪಟಕೆ,
ಬಹುದೂರ ಹಾರುವ ಕನಸು

ಕನಸು ಹೊತ್ತ ಕನಸಿಗೆ
ಮಿತಿಯ ಕಡಿವಾಣವೇಕೆ?
ಬೇಲಿ ಹಾಕುವ ಕನಸಿಗೆ
ಆಗುವುದೆಂದು ನನಸು.........

ಸ್ವಾತಿ S.........

- Swati S

04 Nov 2022, 04:44 pm

ಬೇಜಾರು ಬೇಜಾರು..

ಉತ್ತರ ಇಲ್ಲದ ಪ್ರಶ್ನೆಗಳು ?
ಅರ್ಥವಿಲ್ಲದ ನೋವುಗಳು,
ನಿದ್ದೆ ಇಲ್ಲದ ರಾತ್ರಿಗಳು,
ನೆಮ್ಮದಿ ಇಲ್ಲದ ಹಗಲುಗಳು,
ಮರೆತು ಹೋದ ಮನಸುಗಳು,
ಮರೆಯದೆ ಬರುವ ಕಣ್ಣೀರು,
ಕಳೆದು ಹೋದ ನಿನ್ನೆಗಳು,
ಕಾಣದೆ ಬರುವ ನಾಳೆಗಳು,
ಆದರೂ ಸದ್ದಿಲ್ಲದೇ ಸಾಗುತಿದೆ
ಜೀವನದ ಹೆಜ್ಜೆಗಳು....
ಎಮ್.ಎಸ್.ಭೋವಿ....✍️
.

- mani_s_bhovi

03 Nov 2022, 11:35 pm