Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಸಿವು

ತಿನ್ನಲು ಅನ್ನವ ಇಲ್ಲದವರಿಗೆ ಹೊಟ್ಟೆಯ ಹಸಿವು..!
ಹೊಟ್ಟೆ ತುಂಬಿಸಲು ಕಾಡುವುದು ಹಣದ ಹಸಿವು..!
ಹಣವಂತರಿಗೆ ಮೈ ಮನ ಕಾದಿದ ಪ್ರೇಮದ ಹಸಿವು..!
ಪ್ರೇಮದಲ್ಲಿ ಮೈ ಮರೆತವನಿಗೆ ದುಡಿಮೆಯ ಹಸಿವು..!
ಮಕ್ಕಳಿಲ್ಲದ ದಂಪತಿಗಳಿಗೆ ಕರುಳ ಬಳ್ಳಿಯ ಹಸಿವು..!
ಅನಾಥ ಮಗುವಿಗೆ ಹೆತ್ತವರ ಪ್ರೀತಿಯ ಹಸಿವು..!
ಹಗಲಿರುಳು ದುಡಿಯುವರಿಗೆ ನಿದ್ದೆಯ ಹಸಿವು..!
ಅಷ್ಟ ಐಶ್ವರ್ಯ ಗಳಿಸಿದವರಿಗೆ ನೆಮ್ಮದಿಯ ಹಸಿವು..!
ಓದಬೇಕೆಂಬ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು..!
ಛಲದಿಂದ ಗೆಲುವಿನ ಮೆಟ್ಟಿಲು ಏರುವವರಿಗೆ ಸಾಧನೆಯ ಹಸಿವು.....!

ಸ್ವಾತಿ S......

- Swati S

01 Dec 2022, 08:11 pm

ಓ_ಗೆಳತಿ_ಬಂದು_ಬಿಡೇ...

"ಹೋಗೆಂದರೇ ಹೋದೆಯ..
ಕೋಪಕ್ಕೆ ಕಿವಿಕೊಟ್ಟು !
ಬಾ_ಎಂದರೇ ಬರುವೆಯ ?..
ತಂಗಾಳಿಲಿ ದ್ವನಿ_ಕೇಳ್ಬಿಟ್ಟು !
ನೀ ಇಲ್ಲದೆ.. ನಾ_ಎಲ್ಲುಂಟು !
ಅದರ ಕಲ್ಪನೆ ಆದ್ರು.. ನಿನಗೆ ಎಲ್ಲುಂಟು !
ನನ್ನ ಕಣ್ಣುಗಳು..
ನೀ ಬರುವ ದಾರಿಯೇ ಕಾಯುತ_ಉಂಟು !
ನನ್ನ ಮನ..
ಸದಾ ನಿನಗಾಗೆ ಪರಿತಪಿಸುತ_ಉಂಟು !
ಬಂದು_ಬಿಡೇ..
ಇರಲಾರೆ_ನಾ ನಿನ್ನ ಬಿಟ್ಟು !
ಓ_ಗೆಳತಿ_ಬಂದು_ಬಿಡೇ..
ಕಾಯಿಸಬೇಡ ನೀ_ಇನ್ನಷ್ಟು !!"
ಎಮ್.ಎಸ್.ಭೋವಿ...✍️

- mani_s_bhovi

30 Nov 2022, 07:21 pm

ವಾಸ್ತವದ ಸಮಾಜ ಮತ್ತು ರಾಜಕೀಯ

ಉಳಿದು ಹೋದವರು ನಾವು ಕಳೆದು ಹೋದವರು
ಅವರ್ ಬಿಟ್ ಇವರ್ ಬಿಟ್
ಮಧ್ಯೆ ತುಳಿದು ಅಳಿದು ಹೋದವರು
ಒಹೋ ದೊಂಬರಾಟ ಇದೆ ರಾಜತಂತ್ರದಾಟ ಬಿತ್ತಿ ಕುಳಿತಿಹರು ಹತ್ತಿ ಇಳಿಯುವರು ಇಳಿಸಿದವರ್ ಹತ್ತುವರು
ಕುರುಡು ಕಣ್ಣು ನೋಟ ಆಟ ನೊಡ್ ಆಟ
ನೋಟ ನೋಡುವವರ ನಾವು ನೋಡುವವರ ಇದು ಯುದ್ಧವಲ್ಲ ಮನುಜ ಇದರ ಅಸ್ತ್ರ ಕುರುಕ್ಷೇತ್ರವಲ್ಲ ರಂಗಸ್ಥಳವಾಯ್ತ್
ರಾಜಕೀಯದ್ ಆಟ
ಬಲದಲಿ ಎಡದಲಿ ಬಿಲದಲಿ ಪಣದಳಿ ರಾಜಕೀಯದಾಟ ಮೂರು ಬಿಟ್ಟವರ ನೋಡು ಏಣಿಯಾಟ
ಗುಲಾಮಗಿರಿಯು ಅಲ್ಲ ಆದರಿಲ್ಲಿ ಗುಲಾಮರೇ ಎಲ್ಲ ಇದು ಮುಗಿಯದ ನೋಟ ಬಗೆಯದ ಆಟ
ಬಡಿಸುವ ಮುನ್ನ ಎಲೆಯು ಎಂಜಲಲ್ಲ
ಆದರಿಲ್ಲಿ ಎಲೆಯೆ ಎಂಜಲಯ್ಯ
ಎಂಜಲು ನುಂಗಿದ ನುಂಗುವ ರಕ್ಕಸರೆ ಏಲ್ಲಾ..
ಶೂನ್ಯವೆಲ್ಲ ...
ಈ ರಾಜಕೀಯದ್ ಆಟ...ನೋಡ್ ದೊಂಬರಾಟ
ರಾಜಕೀಯದಾಟ


ವರ್ಷಾ ರಾಕೇಶ್ ಬಿಳಿನೆಲೆ

- Varsha Rakesh Bilinele

27 Nov 2022, 03:59 pm

ಕವನ ಹುಟ್ಟುಹಬ್ಬ.

ಕವನ ಹುಟ್ಟುಹಬ್ಬ.
ಸುಜ್ಞಾನದಿ ಹೊಳೆಯುತ್ತಿರುವ ನಕ್ಷತ್ರವು ನೀವು,
ನಿಮ್ಮ ಅನುಭೂತಿಯ ಸಹಕಾರವು ಬೇಕೆನಿಸಿದೆ ನನ್ನ ಕೊನೆಯವರೆಗೆ.
ಕಾಠಿಣ್ಯಕೆ ಉದ್ಗರಿಸದೆ ಮೌನಕ್ಕೆ ಶರಣಾಗೋ ನಿಮ್ಮ ಮನವು,
ಮುದುಡಿದ ಹಕ್ಕಿಗಳ ಸಂತೈಸುತ ಅವರ ಕೆಂದುಟಿಯಲಿ ಮೂಡಿಸುವುದು ಚಂದದೊಂದು ನಗುವ.
ನೊಂದ ಹೃದಯಕ್ಕೆ ಗೂಡಾಗಿದೆ ನಿಮ್ಮೆದೆಯ ಮಹಲು,
ಅಲ್ಲಿ ನಾ ಕಾಣದ ಪ್ರೀತಿಯ ಆಹ್ಲಾದಿಸುತ್ತ ನಿರಾಳ ಭಾವದಿ ನಾ ನಮಿಸುವೆ ದೇವರೇ ನನಗೆ ನಿಮಗಿಂತ ಯಾರಿಲ್ಲ ಮಿಗಿಲು.
ನಿಮ್ಮ ಅರಿವಿನ ಸಿಡಿಲು ಮನುಜರೆದೆಯಲಿ ಸಿಡಿದು,
ಸನ್ಮಾರ್ಗ ಚಿಗುರೊಡೆಯಲಿ ನವಿಲಂತೆ ನರ್ತಿಸುತ
ಗಗನದಿಕ್ತರಕ್ಕೆ ನಿಮ್ಹೆಸರ ಬರೆದು.
ನೋಟದಲೇ ನನ್ನ ನಿವೇದನೆಗೆ ಸ್ಪಂದಿಸೋ ನಿಮ್ಮ ಔದಾರಿಯ,
ವಸಂತ ಮಾಸದ ಕೋಗಿಲೆಯ ಮಾರ್ಧ್ವನಿಯೊಳಗೆ ಮೆರೆಯಬೇಕೆಂಬ ಆಸೆ ಮಹಾಶಯ.
ಕಳೆದ ಸಮಯವ ನೆನೆಯದೆ ಜೊತೆಗಿರುವ ಗಳಿಗೆಯ ತೋರೆಯದೆ,
ಸಂತಸದ ದಿನದಂದು ಸಂಭ್ರಮದ ಸಿಹಿಯಾಗಿ ನೀವ್ ಪೋರೆಯಿರಿ ನಿಮ್ಮವರ ಕೈತುತ್ತ ಮರೆಯದೆ.
ತಂಗಾಳಿ ಹೊತ್ತು ತರಲಿ ಶ್ರೀ ತಂಧದಂತ ನಿಮ್ಮ ವ್ಯಕ್ತಿತ್ವದ ಸಾರವ,
ಮಹತ್ವದ ಕನಸೊಂದ ನನಸಾಗಿಸೊ ಸಂಕಲ್ಪಕ್ಕೆ ಸಾಕ್ಷಿಯಾಗಲಿ
ಇಂದಿನ ನಿಮ್ಮ ಹುಟ್ಟು ಹಬ್ಬದ ಮಹೋತ್ಸವ.

- nagamani Kanaka

26 Nov 2022, 12:33 pm

....... ಗೆಳೆತನ........

ಎಲ್ಲದಕ್ಕೂ ಮಿಗಿಲಾದ ಬಂಧನ
ಸಾಸಿವೆ ಕೋಪ ಸಾಗರದ ಸಂತೋಷಗಳ ಸಮ್ಮಿಲನ
ತರ್ಲೆ ತುಂಟಾಟದ ಸಮ್ಮಿಶ್ರಣ.......

ಆಗಸದಷ್ಟು ಆತ್ಮೀಯತೆ ಆಲಂಬನ
ತುಸು ತಾಸು ಮುನಿಸ ಸಿಹಿ ಸಿಂಚನ
ನೋವು ನಶಿಸೋ ಮಿತ್ರತ್ವ ನಯನ........

ಹೇಳದೆ ಅರ್ಥೈಸಿಕೊಳ್ಳುವ ಸದ್ಗುಣ
ಜೀವನದ ಪರಮಾಪ್ತ ಕ್ಷಣ
ಜಗದ ಸುಖ ಕೊಂಡುಕೊಳ್ಳೊ ಸಿರಿತನ......

ಬಾಳಿನ ಸುಂದರ ಯಾನ
ಭಾವನೆಗಳಿಗೆ ಸ್ಪಂದಿಸುವ ಮನ
ಎಷ್ಟು ಹೇಳಿದರು ಮುಗಿಯದ ಕಥನ......

ಮೇಘಲತೆಯ ಗೌಜಿನ ಗೆಳೆತನ
ಸದಾ ಸಂಭ್ರಮದ ಹೂರಣ
ಹೀಗೆ ಸ್ನೇಹದ ಕಡಲಲ್ಲಿ ನಲಿತ ಸಾಗೋಣ......

ಸ್ವಾತಿ S...........

- Swati S

26 Nov 2022, 12:16 am

ಪ್ರೀತಿಯ ಬಂಧ

ನನ್ನದೊಂದು ಪುಟ್ಟ ಹೃದಯ
ಅದರೊಳಗೆ ದೊಡ್ಡ ದೊಡ್ಡ ಕನಸುಗಳು,
ಆ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸಿರುವೆ.
ನನ್ನ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವೆ.
ನನ್ನ ಇಷ್ಟ ಕಷ್ಟಗಳನ್ನು ನಿನ್ನಮೇಲೆ ಹೇರಿರುವೆ.
ವರ್ಷಗಳು ಉರುಳಿದಂತೆ ನಮ್ಮಿಬ್ಬರ ಬಂಧ
ಬಿಗಿಯಾಗುತ್ತಿರಲೆಂದು ಆಶಿಸುವೆ.........

ಸ್ವಾತಿ S.............

- Swati S

25 Nov 2022, 11:47 pm

ಸ್ನೇಹ ಎಂದರೆ ಹೀಗೆ ಇರಬೇಕು...

ಸ್ನೇಹ ಎಂದರೆ ಯಾವಾಗಲೂ
ನಮ್ಮ ಕಾಲುಗಳಂತಿರಬೇಕು.
ಯಾವ ಕಾಲು ಮುಂದೆ ಹೋಗಲಿ,
ಅಥವಾ ಯಾವ ಕಾಲು ಹಿಂದೆ ಉಳಿಯಲಿ,
ಸಂಬಂಧದಲ್ಲಿ ಎಂದಿಗೂ
ಅಂತರ ಬರಬಾರದು, ಹೊಂದಾಣಿಕೆ
ಅಳಿಯದೆಯೇ ಉಳಿಯಬೇಕು...!!
ಜೊತೆಗೂಡಿ ಮುಂದೆ ಸಾಗುವ
ಗುರಿಯೊಂದೇ ಪ್ರಬಲವಾಗಿರಬೇಕು...!!
ಎಮ್.ಎಸ್.ಭೋವಿ...✍️
.
..
...
....

- mani_s_bhovi

25 Nov 2022, 12:17 pm

ಗಜಲ್


ಎಷ್ಟೊಂದು ಸುಂದರವಾಗಿ ಗೀಚಿಹನು ನಿನ್ನನು ಯಾವ ಶಿಲ್ಪಿಯು
ಎಷ್ಟೊಂದು ಆಕರ್ಷಣೆ ನಿನ್ನಲಿ ತುಂಬಿಹನು ಯಾವ ಶಿಲ್ಪಿಯು

ಕೋಮಲ ಮನಸು ನವಿರಾದ ಮೆರಗು ಬಣ್ಣದ ಚಿಟ್ಟೆಯ ರೂಪವು
ನೋಡಿದರೆ ನೋಡುತ್ತಲೆ ಇರಬೇಕೆಂಬ ಆಸೆ ಇಟ್ಟವನು ಯಾವ ಶಿಲ್ಪಿಯು

ಜಿಂಕೆಯ ಕಣ್ಣು ಬಳುಕುವ ಬಳ್ಳಿ ತುಂಬಿದ ರಸ ಭರಿತ ಮಾವು
ಸವಿದ ಸವಿಯು ಕವಿತೆಗೆ ಸಿಗದ ಭಾವವು ಕೊಟ್ಟವನು ಯಾವ ಶಿಲ್ಪಿಯು

ಸ್ಪರ್ಶದಲಿ ಹಿತ ಮಾತಿನಲಿ ಮಾಣಿಕ್ಯ ಜೀವನ ನಿನ್ನಿಂದ ಸಾರ್ಥಕವು
ನೀನಿಲ್ಲದ ಪಯಣ ಮುಗಿಯದ ಕತೆಯಂತೆ ಬರೆದವನು ಯಾವ ಶಿಲ್ಪಿಯು

ನಿನ್ನಿಂದಲೇ ಉನ್ನತಿ ನಿನ್ನಿಂದಲೇ ಅವನತಿ ನಿರ್ಮಾಪಕ ನಿರ್ನಾಮಕಳು
ಜಗದ ಬೆಡಗೆಲ್ಲ ನಿನ್ನಲಿ ತುಂಬಿ ನವಿಲಿನಂತೆ ಕಟೆದವನು ಯಾವ ಶಿಲ್ಪಿಯು

ಆಕಾಶ ಭೂಮಿ ಸೂರ್ಯ ಚಂದ್ರ ಹಗಲು ರಾತ್ರಿಯಂತೆ ಬಂಧವು
ಯುಗ ಯುಗದಿಂದ ನಡೆವ ಬಂಡಿಗೆ ಗಾಲಿ ಕಟ್ಟಿದವನು ಯಾವ ಶಿಲ್ಪಿಯು

ಸೃಷ್ಟಿ ಸೌಂದರ್ಯದ ಅನುಪಮ ರತುನ ಮಯೂರ ಸಿಂಹಾಸಿನಿಯು
ಆದರ ಆತಿಥ್ಯ ಸದಾಕಾಲ ಸಲ್ಲುವಂತೆ ಅಲಿ ಅಕ್ಷರ ಬಿತ್ತಿದವನು ಯಾವ ಶಿಲ್ಪಿಯು

~ ಅಲಿಬಾಬಾ ರವುಡಕುಂದಾ

- ALIBABA ROUDAKUNDA

22 Nov 2022, 08:11 am

ಮಳೆಯಲಿ ನೆನಪುಗಳು ಕರಗಲಿ

ಮಳೆಯಲಿ ನೆನೆಯಬೇಕು ನಾನು
ಮತ್ತೆ ಮತ್ತೆ ನೆನೆಯಬೇಕು ನಾನು..

ನಿನ್ನ ನೆನಪುಗಳು ಕರಗುವ ಹಾಗೆ
ಮತ್ತೊಂದು ಉಳಿಯದ ಹಾಗೆ
ಇನ್ನೊಂದು ಸುಳಿಯದ ಹಾಗೆ..

ಬಿಕ್ಕಿ ಬಿಕ್ಕಿ ಅಳುವ ಆಸೆ ಮನಕೆ
ಅಪ್ಪಿ ಸಂತೈಸುವ ಹೆಗಲು ಜೊತೆಯಲಿಲ್ಲ ಜೀವಕೆ

ಪಾಪ ಕರ್ಮಗಳಿಂದ ತುಂಬಿದ ಈ ಜನ್ಮ
ದೂರ ಮಾಡಿತು ನನ್ನ ಪ್ರೀತಿಯನ್ನ

ಭರವಸೆಯೊಂದೆ ಉಳಿಯಿತು
ಕಣ್ಣೀರೊಂದೆ ಜೊತೆಗಾರನಾಯಿತು

ಇಳಿದು ಹೋಗಲಿ ಈ ಹೃದಯದ ಭಾರ
ಯಾರೂ ನೋಡದಿರಲಿ ಈ ನನ್ನ ಕಣ್ಣೀರ..

- Tanuja.K

21 Nov 2022, 10:40 pm

ನಮ್ಮ ವೀರರು

ಕೆಚ್ಚೆದೆಯ ವೀರರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ
ಕಂಬನಿಯ ಮಿಡಿದರು
ಜೋರು ಬೊಬ್ಬಿತ್ತರು
ಬಿಲ್ಲನ್ನು ಎತ್ತಿದರು
ಬಾಣವನ್ನು ಬಿಟ್ಟರು
ಬ್ರಿಟಿಷರ ವಿರುದ್ಧ ಹೋರಾಡಿದರು
ಸೆರೆಮನೆ ಅನುಭವಿಸಿದರು
ಬಂದೂಕ ಎತ್ತಿದರು
ಕ್ರಾಂತಿಕಾರಿ ಗಳಾದರು
ಪ್ರಾಣ ತ್ಯಾಗ ಮಾಡಿದರು
ನಮಗೆ ಸ್ವತಂತ್ರ ತಂದು ಕೊಟ್ಟರು
ಅವರನ್ನು ಮತ್ತೆ ಮಗು ನೀ ನೆನಪಿಗೆ ತರು
ಮರೆಯಬೇಡ ಅವರ ಚಿನ್ನ ವಜ್ರ ಕಿಂತಲೂ ಹೆಚ್ಚು ಅವರು

- Nisha anjum

20 Nov 2022, 11:57 pm