Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನವಳ ಕಣ್ಸನ್ನೆಗೆ ಸೋತಿರುವೆ
ನೋಡಬಾರದೆ ನನ್ನೊಲವೆ
ಯಾರಿಲ್ಲದ ಊರಲ್ಲಿ
ಜೊತೆಗಾರನಾಗಿರುವೆ ನಾನಿಲ್ಲಿ
ನೋವಿನಲಿ ನಗುವಾಗುವೆ
ಕಷ್ಟದಲಿ ಹೆಗಲಾಗಿರುವೆ
ನೆರಳಾಗಿ ಹಿಂಬಾಲಿಸುಬೆ
ಪ್ರತಿಕ್ಷಣ ಜೊತೆ ಇರುವೆ
ದೂರದಲ್ಲಿದ್ದೆವು ನಾವು
ಪರಸ್ಪರ ಪ್ರೀತಿಯಲಿ ಒಂದಾದೆವು
ಬಿಟ್ಟಿರಲಾರೆ ಕ್ಷಣ ಕಾಲವು
ನೀನೆ ನನ್ನ ಜಗವು
ಕಾದಿದೆ ಹೃದಯವು ನಿನಗೆ
ನಾ ಬರುವೆ ನಿನ್ನ ಜೊತೆಗೆ
ಯಾರ ಹಂಗು ಬೇಡ ನಮಗೆ
ಹೋಗೋಣ ಬಾ ನನ್ನೊಲವಿನ ಊರಿಗೆ...
- Tanuja.K
18 Dec 2022, 07:48 am
ಏಕಾಂಗಿ ಪಯಣಕೆ
ನೀನಾದೆ ಬೆಳಕಿನ ಆಸರೆ
ಕನಸುಗಳ ಬಣ್ಣದ ಲೋಕವಿದು
ಕಾಡುತಿದೆ ನನ್ನನ್ನೇ ತಡೆದು
ಕರವಿದು ಕೈ ಚಾಚಿ ಕರೆದಿದೆ ನಿನ್ನ
ಮನಸಾರೆ ಮೆಚ್ಚಿ ಬರುವೆಯ ಚಿನ್ನ
ನಿನ್ನ ಎದೆಯೊರಗಿ ಹೃದಯ ಬಡಿತ ಕೇಳಬೇಕು
ನಿನ್ನ ಬೆಚ್ಚನೆಯ ಅಪ್ಪುಗೆ ಸಾಕು
ನಿನ್ನ ಕೋಪ ಅಂದ, ಪ್ರೀತಿ ಚೆಂದ
ಮುದ್ದು ಮಾತು ಇನ್ನೂ ಚೆಂದ
ನಿನ್ನ ಕರುಣಿಸಿದ ಆ ದೇವರಿಗೆ ನನ್ನ ನಮನ
ಹೀಗೆ ಇರಲಿ ನಮ್ಮ ಬೇವು ಬೆಲ್ಲದ ಜೀವನ...
- Tanuja.K
17 Dec 2022, 11:10 pm
ನಾವು ಯಾರನ್ನ ನಮ್ಮೋರು ಅಂತ ಹೆಚ್ಚು ನಂಬುತ್ತೇವೋ, ಅವರು ಸಮಯ ಬಂದಾಗ ಅವರ ನಿಜವಾದ ಮುಖವಾಡವನ್ನು ತೋರಿಸಿ ಜೀವನಕ್ಕೆ ಬೇಕಾದ ಪಾಠವನ್ನ ಕಳಿಸಿ ಹೋಗುತ್ತಾರೆ. ಅವರಿಗೆ ನನ್ನ ಧನ್ಯವಾದ
- Kavya chinni1950
17 Dec 2022, 11:03 pm
ಚೂರಾಯ್ತು ಹೃದಯದ ಚಿಪ್ಪು,....ಕಳೆದು ಹೋಯ್ತು ಪ್ರೀತಿಯ ಮುತ್ತು...!!
ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು....!
ನಾ ಬರೆದ ಕವನಗಳೆಲ್ಲಾ,.....ಬರೀ ನೆನಪುಗಳ ಚರಿತ್ರೆಯಾಯ್ತು ....!!
ಕಮರಿಹೋದ ನನ್ನ ಕನಸಿನ ಹೂಗಳು...ಅರಳಲಿ ಅವಳ ಬಾಳಲಿ ಎಂದೆಂದೂ
ಆಶಿಸುವೆ ಅವು ಸದಾ ನಗುತಿರಲೆಂದು...!!
ಪ್ರೀತಿ ನರಳಿದರೆ..ಹೃದಯ ಅರಳೊಲ್ಲ ಗೆಳೆತಿ...!!
ಚೂರಾದ ಚಿಪ್ಪಿನಲಿ...ಉಸಿರಾಡುವ ಪ್ರೇಮಿ ನಾನು....!!
✍️ಫೀಲಿಂಗ್
- ನೆನಪಿನ ಕವಿತೆ
15 Dec 2022, 06:34 pm
ನನ್ನವಳು ಹೇಳಿದಳು
"ನಾನು ಖುಷಿಯಿರಲು
ನೀ ನನ್ನ ಮರೆಯಬೇಕು
ನನಗೆ ನೀ ಕರೆ ಮಾಡುವುದ ಬಿಡಬೇಕು"
ಆದರೆ ನನ್ನನೆ೦ದೂ ಕೇಳಲಿಲ್ಲ
ನೀ ಖುಷಿಯಿರನು ನಾ
ಎನು ಮಾಡಬೇಕೆ೦ದು
ಅವಳೆ೦ದೂ ಯೋಚಿಸಲಿಲ್ಲ
ಅವಳ ಮರೆತ ಈ ಹೃದಯ
ಬದುಕುವುದು ಹೇಗೆ೦ದು?
✍️ಫೀಲಿಂಗ್
- ನೆನಪಿನ ಕವಿತೆ
15 Dec 2022, 06:32 pm
ಮರವ ಸುತ್ತಿದ ಬಳ್ಳಿಯಂತೆ
ನಿನ್ನ ಪ್ರೀತಿಯ ಮಾಡಿಹೆ
ನೀರ ಮೇಲಿನ ಗುಳ್ಳೆಯಂತೆ ನೀ
ನನ್ನ ಮನಸ ಒಡೆದಿಹೆ
ಹಗಲು ರಾತ್ರಿ ಕಷ್ಟ ಸುಖವ
ತೊರೆದು ಪ್ರೀತಿ ಮಾಡಿದೆ
ಎಲ್ಲೋ ಬಚ್ಚಿ ಇದ್ದ ಮನಸ
ನೀನು ಕದಡಿ ಕಲಕಿದೆ
ಬೇಕು ಬೇಡ ಎಲ್ಲ ಮರೆತು
ನಿನ್ನ ಸಂಗ ಮಾಡಿದೆ
ಮನೆಯ ಕಡೆಗೆ ಗಮನ ಕೊಡದೆ
ನಿನ್ನ ಎಡೆಗೆ ವಾಲಿದೆ
ಕೂಲಿ ನಾಲಿ ಮಾಡಿ ನಾನು
ನಿನ್ನ ಹೊಟ್ಟೆ ತುಂಬಿದೆ
ಒಂದು ಮಾತು ಕೇಳದೇ ನೀ
ನನ್ನ ಕಿತ್ತು ಬಿಸಾಡಿದೆ
ಚಕ್ರದೊಳಗಿನ ಗಾಳಿಯಂತೆ
ನಿನ್ನ ಸೇವೆ ಮಾಡಿದೆ
ಮುಳ್ಳ ಚುಚ್ಚಿ ನೀನು ನನ್ನ
ಹೊರಗೆ ಹೋಗೆಂದು ಹೇಳಿದೆ
ಒಂದು ಕ್ಷಣವೂ ಬಿಡದೆ
ನಿನ್ನ ಚಿಂತೆಯಲಿ ನಾನಿರುವೆನು
ನಿನ್ನ ವಿರಹದ ನೋವಿನಲಿ ನಾ
ಜಡಕೆ ಸಮನಾಗಿರುವೆನು.
✍️ಫೀಲಿಂಗ್
- ನೆನಪಿನ ಕವಿತೆ
15 Dec 2022, 06:32 pm
ಇರುವಾಗ ಹತ್ತಿರದವರು,
ಇರದಿದ್ದಾಗ ಆಗುವರು ಪರರು.
ಕೊಟ್ಟರೆ ಹೋಗುಳುವರು,
ಪಡೆದಮೇಲೆ ಮರೆತು ಹೋಗುವರು,
ಕೊಡದೆ ಇದ್ದರೇ ತೆಗಳುವರು.
ಬೆಳೆದರೆ ಮತ್ಸರ ಕಾರುವರು,
ಎಡವಿ ಬಿದ್ದರೆ ಆಡಿಕೊಂಡು ನಗುವರು.
ಕಷ್ಟಕ್ಕೆ ಆಗದವರು,
ತಮ್ಮ ಕಷ್ಟಕೆ ಸಹಾಯ ನಿರೀಕ್ಷಿಸುವರು.
ಸಂಬಂಧಗಳಿಗೆ ಬೆಲೆ ಕೊಡದವರು,
ಸಂಪತ್ತಿಗೆ ಬೆಲೆ ಕೊಡುವರು.
ಇವರೇ ಆ ನಮ್ಮ -ಅವರು.......!
ಸ್ವಾತಿ S...........
- Swati S
14 Dec 2022, 04:50 pm
ಕಣ್ಣೀರಿನ ಹನಿಗಳಲಿ ಬೆಟ್ಟದಷ್ಟು ನೋವಿದೆ.
ಆ ನೋವಿನಲ್ಲಿ ಸದಾ ನಿನ್ನದೊಂದು ಪಾಲಿದೆ!
ಹೆಗಲು ಕೊಡಬೇಕಾದವ ಕಾಣೆಯಾಗಿಹ!
ಕಾಯುವಿಕೆಗೆ ಅರ್ಥವೇ ಇಲ್ಲದಂತೆ ಮಾಡಿಹ!
ಏಕಾಂತದಲ್ಲಿ ಬೆಂದು ಬದುಕುವಾಸೆ ನಂದು..
ಇಂದಲ್ಲ ನಾಳೆ ಬಂದೇ ಬರುವನೆಂದು.....!
ಸ್ವಾತಿ S..........
- Swati S
14 Dec 2022, 04:04 pm
ಹುಟ್ಟಿದ ಮನುಷ್ಯ ಸಾಯಲೇ ಬೇಕು,
ಆದರೆ ಕಾಣಲು ಬಯಸುವುದಿಲ್ಲ,
ಯಾರು ಕೂಡ ಸಾವಿನ ಕನಸು.
ಬದುಕು ನಶ್ವರವೆಂದು ತಿಳಿದಿದ್ದರು ಮೋಹದಲ್ಲಿ
ಸಿಲುಕುವೆವು.
ಕಾಣುವೆವು ಕಾಣದ ನಾಳೆಯ ಬಗ್ಗೆ ಸಾವಿರ ಕನಸು.
ಈ ಬದುಕೇ ಮಾಯೆ, ನಡೆಯವುದು ಮಾತ್ರ ಅವನ ಲೀಲೆ.
ಇರುವಷ್ಟು ಕಾಲ ಸಾರ್ಥಕತೆಯ ಬದುಕು ಬದುಕಿದರೆ
ಮಾತ್ರ ಈ ಬದುಕಿಗೊಂದು ಅರ್ಥ.
ಸ್ವಾತಿ S.........
- Swati S
14 Dec 2022, 03:38 pm
ಮೂಢರಿಗೆ, ಅಂಧ ಭಕ್ತರಿಗೆ
ಜೀವವಿಲ್ಲದ ಕಲ್ಲೇ ದೇವರಾದರೆ
ನನ್ನ ತಂದೆ ತಾಯಿಯೇ
ನನ್ನ ಮನೆಯ ದೇವರು
ಮೂಢರು ಮಾಡುವರು
ದೇವರಿಗಾಗಿ ಉಪವಾಸ
ನಾ ಮಾಡುವೇನು
ನನ್ನ ಹೇತ್ತವರ ಸೇವೆಗಾಗಿ
ದುಡಿಮೆಯ ಕಾಯಕ
ಉಸಿರಾಟದ ಮುಂದೆ
ಯಾವುದೇ ದೇವರುಗಳ
ಉಸರವಳ್ಳಿ ಆಟವಾಗಲಿ
ನವ ಯುಗದ ಮಾನವನ
ಮಂಗನಾಟವಾಗಲಿ
ನವರಂಗಿ ಆಟವಾಗಲಿ ನೆಡೆಯಾದು
- ರಾಜು ಹಾಸನ
13 Dec 2022, 01:52 pm