ನಂಬಿದವರು ಇವರು ನಮ್ಮವರೆಂದುಕೊಂಬರು,
ನಂಬದವರು ಯಾರನ್ನೂ ನಮ್ಮವರೆಂದುಕೊಂಬರು,
ಇವರು ಅವರೇ ಬಂದು ಹೋಗುವ ಬಂಧು ಬಾಂಧವರು,
ಇವರಿಗೆ ಬಂಧವೆಲ್ಲ ತಮ್ಮ ಪತಿ /ಪತ್ನಿ ಮಕ್ಕಳು,
ಇವರು ಕೇಳಲು ಒಲ್ಲ ಪರರ ಗೋಳು,
ಆದರವರ ಸೊಲ್ಲ ಕೇಳಲು ಬೇಕು ಪರರ ಬಾಳು,
ಹಿಂದೂ,ಇಂದೂ, ಎಂದೆಂದೂ ಇಲ್ಲ,
ಇವರು ಬದಲಾಗೋ ಮಾತೇ ಇಲ್ಲ,
ಬೆಕ್ಕು ಹಾಲು ಕುಡಿವಂತೆ ಇವರು ಇರುವರಲ್ಲ,
ಇವರ ಆಟವನು ಜಗದೀಶನೊಬ್ಬನೇ ಬಲ್ಲ,
ಮುಂದೊಂದು ದಿನ ಅವರಾಟ ಬಯಲು ಬಿಡಲೊಲ್ಲ,
ಕಾಲ ಬಂದಾಗ ಮಹಾಕಾಲ ಆಟ ಆಡದಿರಾನೊಲ್ಲ,
ಧಿಕ್ಕಾರವಿರಲಿ ಅವರ ಬಾಳ ನಡೆಗೆ,
ಅವರವರ ಬುತ್ತಿ ಅವರ ಹೆಗಲಿಗೆ....
----- tippu -----
"ಪಲ್ಲವಿ ಇಲ್ಲದ ಚರಣ.. ನೀ_ಇಲ್ಲದ ನಾನು !
ಭಾವನೆಗಳೆ ಇಲ್ಲದ ಮನವು.. ನೀ_ಇಲ್ಲದ ನಾನು !
ಮೌನದಿ ಮೋಡಿಯ ಮಾಡಿ.. ಆಗಿಹೆ ಹತ್ತಿರ !
ಮಾತೆಲ್ಲ ಕೂಡಿಟ್ಟಿರುವೆಯ.. ಮಾತಾಡೆ ಮಂದಾರ !!"
"ಈ ನಡುವೆ ಪ್ರತಿ ಸ್ವಪ್ನವು.. ನಿನದೆ_ಕಣೇ !
ಈ ಮನದಿ ನಗು_ತಂದಿರುವಳು.. ನೀನೆ_ಕಣೇ !
ಏರುಪೇರಿನ.. ಈ_ಬದುಕಿನಲ್ಲಿ !
ಎಂದು ಕೂಡ ಇರು_ನೀ.. ಜೊತೆಯಲ್ಲಿ !
ಸುಂದರ ಕ್ಷಣಗಳ ಉಗಮ.. ತನ್ನದೆ ರೀತಿಯಲ್ಲಿ !
ನೇರ_ಕಾರಣ ನೀನೆ.. ನಿನ್ನದೆ ರೀತಿಯಲ್ಲಿ !!"
ಎಮ್.ಎಸ್.ಭೋವಿ...✍️
ಸದಾ ಮೌನಿಯಾಗಿರುವೆ ನೀನು
ಅಳು ಆಕ್ರಂದನಗಳ ಕೊನೆಯ ತಾಣ ನೀನು
ಸಂಬಂಧಿಕರು ಸ್ನೇಹಿತರು ಬರುವರು ಸ್ಮಶಾನದ ಮುಂಭಾಗದವರೆಗೂ
ಉಸಿರು ನಿಂತವನಿಗೆ ಮಾತ್ರ ಅಂತಿಮ ದಿನವದು
ಸಾಕಷ್ಟು ಹಣಕೊಟ್ಟು ಖರೀದಿಸುವರು ಭೂಮಿಯನು
ಆದರೆ ಪ್ರಾಣವನು ಕೊಟ್ಟರೆ ಮಾತ್ರ ನೀ ಕೊಡುವುದು ಜಾಗವನು
ಗರ್ವ, 'ನಾನು' ಎಂಬ ಅಹಂಕಾರ ಸುಡುವುದಲ್ಲಿ
ನಿಶ್ಚಿಂತೆಯರಾದ ಕೊನೆಯ ನಿದ್ರೆ ಪ್ರಾರಂಭವಾಗುವುದಲ್ಲಿ
ಯಾವ ಶ್ರೀಮಂತನಿಗು, ಬಡವನಿಗೂ ಬೇಧವಿಲ್ಲ ನಿನ್ನಲ್ಲಿ
ಸರ್ವರಿಗು ಸಮಪಾಲು ಸಿಗುವುದಲ್ಲಿ
ಏನೇ ಪ್ರೀತಿ ಮಾಡಿದರು ಬರುವುದಿಲ್ಲ ಜೊತೆಗೆ
ನೀನೊಬ್ಬನೆ ಸಾಗಬೇಕು ಚಿತೆಗೆ..
"ಮೌನದಲೇ ಕೂಗಿದೆ.. ನಾನು !
ಹೃದಯದ ಸದ್ದಿಗೆ ತಿರುಗಿದಳು.. ಅವಳು !
ಕಣ್ಣೆಲ್ಲೆ ಮಾತನಾಡಿಸಿದೆ.. ನಾನು !
ಸನ್ನೆಯಲ್ಲೆ ಉತ್ತರಿಸಿದಳು.. ಅವಳು !
ಮೆಚ್ಚಿಸಲು ಕವಿಯಾದೆ.. ನಾನು !
ಒಲವಾರ್ಪಣೆಗೆ ನಾಚಿ_ನೀರಾದಳು.. ಅವಳು !
ಹೀಗಿತ್ತು ಪೂರ್ವದಲ್ಲಿ..
ನನ್ನ_ಅವಳ ಒಲವ ದಿನಗಳು !
ಈಗ ನಾನು..
ಬದುಕಿನ ಒದ್ದಾಟಕ್ಕೆ ಒಳಗಾಗಿ,
ದೂರಾದ ಪ್ರೇಮಿ ನಾನು !!"
ಎಮ್.ಎಸ್.ಭೋವಿ...✍️
ನೆನಪು ಎಂಬುದು ದೊಡ್ಡ ಉಡುಗೊರೆಯಂತೆ,
ಅದು ಸಿಹಿ ನೆನಪಾದರೆ ಸಂತೋಷದಂತೆ,
ಅತೀ ಕಹಿ ನೆನಪಾದರೆ ದುಃಖವಾದಂತೆ..
ನನ್ನ ಕರ್ಮಕ್ಕೆ ನನಗೆ ಆಗುವ ನೆನಪುಗಳು
ಅತೀ ದುಃಖವನ್ನೇ ತರುತ್ತಿವೆ ಎನಿಸುತ್ತಿದೆ.