Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಳೆ

ಬೇಗ ಬಾ ಹೇ ಮಳೆ
ನಿನಗಾಗಿ ಕಾಯುತ್ತಿದೆ ಈ ಇಳೆ
ರೈತರ ದುಃಖದ ಕೊಳೆ ತೊಳೆ
ಹರಿಸು ಸಂತೋಷದ ಹೊಳೆ

ಹೇ ಮಳೆಯ ಬೇಗ ಬಂದು
ಭೂಮಿಯ ಬಾಯಾರಿಕೆ ತಣಿಸು
ಬರಡಾಗಿರುವ ಕಾಡುಗಳ ಹಸಿರಾಗಿಸು
ಹಳೆನೀರ ಕೊಚ್ಚಿ ಹೊಸ ನೀರು ತರಿಸು

ನೀ ಬಂದರೆ ಸುಂದರ ಮಲೆನಾಡು
ನೀ ಬರೆದೆ ಹೋದರೆ ಆಗುವುದು ಬರಡು
ನೀ ಬಂದು ಜಗಕ್ಕೆಲ್ಲ ಪ್ರೀತಿಯ ಹರಡು
ಭೂಮಿಗೆ ಸುಂದರ ಹಸಿರಿನ ಹೆಸರಿಡು

- Chandana Chandu

23 Jan 2026, 09:08 pm


ಅವಳ ಕಣ್ಣುಗಳು...

ಅವಳ ನೋಡುತ್ತಾ ಹಾದಿ ತಪ್ಪದಿರಿ ಕಣ್ಣುಗಳೇ...
ಅವಳ ಕಣ್ಣ ಕಣಿವೆಗೆ ಇಳಿದು

ಅವಳ ಕಣ್ಣಿಗೆ ಬೀಳದಿರಿ ಕಣ್ಣುಗಳೇ..
ಮತ್ತೆ ಅವಳ ನೋಡದಂತೆ

ಬೆಚ್ಚಗೆ ಬಚ್ಚಿಟ್ಟುಕೋ ಮನಸೇ ಎದೆಯೊಳಗೆ ಕಣ್ಣು
ಕಂಡ ಅವಳಂದ ಚಂದವ..

ತಪ್ಪು ನಿನ್ನದಲ್ಲ ಮನಸೇ...!

ಎಷ್ಟು
ಹೇಳಿದರೂ ಕೇಳುತ್ತಿಲ್ಲ
ಅವಳಿಗೆ ಸೋತ ಈ
ನನ್ನ ಕಣ್ಣುಗಳು..

Instagram:- unique_abhyaa

- abhi.s.j

18 Jan 2026, 05:36 pm

ಮೈಬಗ್ಗಿಸಿ ದುಡಿತಿರು ನೀ ಕೊನೆವರೆಗೆ ನಿನ್ನ ಮನೆಯವರು ನೋಡುತ್ತಾರೆ, ದುಡ್ಡಿನ ಕಡೆಗೆ ಹೊರೆತು ನಿನ್ನ ಕಡೆಯಲ್ಲ ಮೆರೆಗೆ???

- AKASH S RATHOD

18 Jan 2026, 11:51 am

- ಅನುಷಾ.ರೈ

17 Jan 2026, 03:32 pm

ಬಾ ಒಲವೇ

ಹಾಲಗಡಲಲ್ಲಿ ಹಾಲಾಹಲವು 

ಬೆರೆತಂತಾಗಿದೆ ಇಂದು ನನ್ನೆದೆಯು

ನೀ ಹೀಗೆ ದೂರಾದ ಮೇಲೆ ಚೆಲುವೇ

ಬಾ ಬೇಗ ಬಳಿಗೆ ಚಿಗುರಿಸಿ ಒಲವು


ಕಣ್ಣರೆಪ್ಪೆಯಾಗಿ ನೀನಿದ್ದೆಯಂದು ನಲ್ಲೆ

ಕನಸ ಕದ್ದು, ನನ್ನ ಹೊದ್ದು ಹೋದೆಯಲ್ಲೆ

ಒಮ್ಮೆ  ಬಳಿಸಾರಿ ನೀ ಬಾರೆ ಬಾಲೆ

ರಾಶಿ ಮುತ್ತ ಪೋಣಿಸುವೆ ಕೆಂದುಟಿಯ ಮೇಲೆ

- ಶಕುಂತಲಾ

16 Jan 2026, 04:54 pm

ಮಗುವಿನ ಮನದ ನಗುಮೊಗದ ಚೆಲುವೆ...

ಮಗುವಿನೊಂದಿಗೆ ನಗುತಿರುವ ಚೆಲುವೆ,
ಮಗುವಿನ ಮನವ ನಿನ್ನಲ್ಲಿ ನಾ ಕಂಡಿರುವೆ,
ನಾ ಕಾಣುವುದೇನಿದೆ, ಅದ ನೀನೆ ತೋರಿರುವೆ,
ಮುದ್ದಾದ ಮೊಗದ ನಗುವಿನಲಿ,
ಸುಂದರ ಕಂಗಳ ಕಾಂತಿಯಲಿ...
--- tippu ---

- tippu

15 Jan 2026, 04:47 pm

ದೂರಮಾಡೆಯಾ ನನ್ನೀ ಸಂಕಟ....

ಆ ನಿನ್ನ ಕಣ್ಣೋಟ,
ತಾಳದಾದೆ ನಾ ದಿಟ...
ಮೊಗವದೋ ನಗುವಿನ ಹೂದೋಟ,
ಬಳುಕಿ ನಡೆವ ಮೈ ಮಾಟ..
ನಿನ್ನ ನೋಡಿದ ದಿನದಿಂದ ಮನದಲ್ಲೇನೋ ತೊಳಲಾಟ,
ನೀನೊಮ್ಮೆ ನಸುನಕ್ಕು, ದೂರಮಾಡೆಯಾ ನನ್ನೀ ಸಂಕಟ....

--- tippu ---

- tippu

15 Jan 2026, 04:20 pm

- Shridevi

14 Jan 2026, 07:43 am

ಕತ್ತಲ ನಿಟ್ಟುಸಿರು...


ನಿನ್ನ ಬೆತ್ತಲೆ ಬೆನ್ನಮೇಲೆ
ಮುತ್ತಿಟ್ಟು ನನ್ನ ತಾಜಾ ಕನಸು
ನನಸಾಗಲಿಯೆಂದು
ಆಶಿಸುತ್ತೇನೆ ಹುಡುಗಿ
ಪ್ರತಿ ನಿದೀರೆಗೂ
ನಿನ್ನ ನೆನಪೊಂದನೇ
ಸ್ಖಲಿಸೋ ಅಮಾಯಕ
ನಾನೀಗ ಪೋಲಿಯೆನ್ನದಿರು

ತುಟಿಕಚ್ಚುತ್ತೇನೆ
ಒಂದಿಷ್ಟು ತಪ್ಪುಗಳಾಗಲಿ
ನಿನ್ನವನೆಂಬುದಕ್ಕೆ ಮುನ್ನಿಸಿಬಿಡು
ಪರಮಪಾಪಿಯ ಪ್ರೇಮಕ್ಕೆ
ಜಗದ ಹಂಗು
ಬೇಕಾಗಿಲ್ಲ ಇವಳೇ

ಬೇವರುಗಳನ್ನೆಲ್ಲಾ
ಅದಲು ಬದಲು ಮಾಡಿಕೊಳ್ಳೋಣ
ಪರಿಪೂರ್ಣ ನಿಶ್ಯಬ್ದಲಿ
ನಿನ್ನ ನಿಟ್ಟುಸಿರಿಗೆ ಕಿವಿಯಾಗುತ್ತೇನೆ
ಜಗದ ಕತ್ತಲಿಗೆ
ಪ್ರೇಮದ ಬೆಳಕನಿಡಿವ
ನಾವಿಕ ನಾನು ಹಾಗಾಗಿ

ನಮ್ಮ ನಡುವೆ
ಮರೆಯಾಗದಿರಲಿ
ನಾಚಿಕೆ ತುಂಡಡುಗೆಯು ಸಹ
ನಾ ನಿನ್ನಲಿ ಕಳೆದುಹೋಗುವಾಗ
ಮರೆಯುತ್ತೇನೆ ನನ್ನನ್ನೇ
ಬರಸೆಳೆದುಕೋ ಬಿಗಿದಪ್ಪಿ

ಲೇ ಇವಳೇ
ನೀ ಅಷ್ಟು ಮಾತ್ರ
ಕಾಡುವವಳಾಗಿದ್ದಿ
ನನ್ನನ್ನು..!

Instagram:- unique_abhyaa

- abhi.s.j

11 Jan 2026, 06:45 pm


ಸೀಗೆಯ ಹುಡುಗಿ..

ನಿನ್ನ ಕಾಲ್ಗೆಜ್ಜೆಯ
ನಾದಕ್ಕೆ ನನ್ನ ಒಂಟಿತನ
ಮುದುರಿಕೊಳ್ಳುತ್ತದೆ ಹುಡುಗಿ
ನೆಪದುರಿಗೆ ಹೆಜ್ಜೆ ಇಟ್ಟ
ಪಾದವನೊಮ್ಮೆ ತೋಳಲ್ಲಿ
ಬಂದಿಸಿಡಬೇಕೆಂದಾಗುವುದೇ ಆಗ

ನೆನೆದುಕೊಳ್ಳುವ ಉಮೇದುವಾರಿಕೆಗೆ
ಕತ್ತಲು ಬೆರಳ ಕೂಡಿಸುತ್ತದೆ
ನೆರಳೊಂದಿಗೆ ನೆನಪುಗಳಿಗೆ
ಜೋಗುಳ ಹಾಡುವ ಬೆಳಕು
ನನ್ನೊಳಗೊಂದು ಕಿಡಿ ಹೊತ್ತಿಸಿಕೊಳ್ಳುತ್ತದೆ

ಕೆನೇಕಟ್ಟಿದ ಕಣ್ಣೀರಲ್ಲಿ
ನವಿರಾದ ಪತ್ರ ಬರಿಯುತ್ತೇನೆ
ಹುಡುಗಿ
ಸೀಗೆಗಂಟಿದ ಹೆರಳಂತಿನ
ಸಿಳುಕೂದಲಿನ ಜೋಂಪು
ನಾ ಅಚ್ಚಿಸಿಕೊಂಡಿದ್ದರ ತರುವಾಯದ್ದು

ವಿಷಯಾಂತರಗಳ ಸರಹದ್ದಿನ
ಮೂಕ ಮಾತುಗಳೇ ಇವು
ನಿನ್ನೆದುರಿಗೆ ಬಟಬಯಲಾಗಿಸಿದ
ನನಗೆಂದಿರುವ ನಿಜಾಯಿತಿಗಳು

ಎದೆಮಗ್ಗುಲ ಇಶ್ಕಿನಲ್ಲಿ
ತಿಳಿಯಬೇಕಾದ ಕುತೂಹಲಗಳಿವೆ

ಲೇ ಇವಳೇ,
ನಿನ್ನ ಆಪ್ತತೆಯೊಂದಿದ್ದರೆ
ಸಾಕು
ನನ್ನ ಒಂಟಿತನ ಮುದುರಿಕೊಳ್ಳುತ್ತದೆ..!

Instagram:- unique_abhyaa

- abhi.s.j

11 Jan 2026, 06:19 pm