Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ ಕಲರವ ಗೆಳೆತನ..

ನಿನ್ನ ಬಳಿ ಮಾಡಿಕೊಳ್ಳುತ್ತಿರುವೆ
ಒಂದು ಮನನ,
ಪರಿಚಯ ಇಲ್ಲವೆಂದು
ದೂರಬೇಡ ನನ್ನನ್ನ.
ನೀನು ನೇರವಾಗಿ ನೋಡಿಲ್ಲ
ನನ್ನ ಮುಖನ,
ಹಾಗಂತ ಬೇರೆಯವರೆಂದು
ತಿಳಿಯಬೇಡ ನನ್ನನ್ನ.
ಕನ್ನಡ ಕಲರವ ಇಂದ ಆಗಿರಬಹುದು
ನಮ್ಮ ಗೆಳೆತನ,
ಆದರೂ ನನ್ನ ಹೃದಯದಲ್ಲಿ
ಇಟ್ಟಿರುವೆ ನಿನ್ನನ್ನ..
ಎಮ್.ಎಸ್.ಭೋವಿ...✍️
.

- mani_s_bhovi

13 Jan 2023, 12:46 am

ಒಮ್ಮೆ ಬರಬಾರದೆ...

ಈ ಹೃದಯದ ಬಡಿತ ನೀನು
ನನ್ನ ತನುವಿನ ಆತ್ಮ ನೀನು
ನನ್ನ ಉಸಿರಿಗೆ ಗಾಳಿ ನೀನು

ಎಷ್ಟು ಕಾಡಿಸಿದೆ ನಿನ್ನ
ಎಷ್ಟು ಕಾಯಿಸಿದೆ ನಿನ್ನ
ಆದರೂ ಹಠ ಬಿಡಲಿಲ್ಲ ನೀನು

ಕನಸೇ ಇಲ್ಲವೆಂದು ಬದುಕಿದ್ದೆ ನಾನು
ನನ್ನೊಳಗೆ ಮತ್ತೆ ಆಸೆ ಚಿಗುರಿಸಿದೆ ನೀನು
ಸಾವಿರ ಕನಸಿನ ಕೋಟೆಯೊಳಗೆ ನಿನ್ನನ್ನೆ ಕಂಡೆ ನಾನು

ಎದೆಯೊಳಗೆ ಬಚ್ಚಿಟ್ಟಿದ್ದ ಪ್ರೀತಿಯು ನೀನು
ಒಮ್ಮೆನಿನ್ನ ನೋಡುವ ಆಸೆಯಾಗಿದೆ ನನಗೆ
ದಯಮಾಡಿ ಬರಬಾರದೆ ಕಣ್ಣೆದುರಿಗೆ...

- Tanuja.K

12 Jan 2023, 10:14 pm

ನನ್ನ ಹೃದಯವು ನಿನಗೆ..

ಕೊಳಲು ನುಡಿಸುವೆ ನಾನು
ಕ್ರಿಷ್ಣನಂತೆ,
ಓಡೋಡಿ ಬರಬೇಕು ನೀನು
ರಾಧೆಯಂತೆ.
ರಾಧೆ ತುಂಬಾ ಕಾಯಿಸಬೇಡ
ನನ್ನ,
ಪ್ರತಿ ಕ್ಷಣವು ಕಾಯುತ್ತಿರುವೆ
ನಿನ್ನ.
ನೀನು ಬರುವ ಸೂಚನೆಯಾದರು
ನೀಡು ನನಗೆ,
ಮೊದಲೇ ತೆರೆದಿಡುವೆ ನನ್ನ
ಹೃದಯವ ನಿನಗೆ..
ಎಮ್.ಎಸ್.ಭೋವಿ...✍️
.
..
....
...

- mani_s_bhovi

11 Jan 2023, 11:10 pm

ನಿನ್ನ ಜೊತೆಯಾಗಿರುವೆ ನಾನು...

"ದೃಷ್ಟಿಯಾಗುವ ನಿನ್ನ
ಸೌಂದರ್ಯಕ್ಕೆ ದೃಷ್ಟಿಬೊಟ್ಟಾಗುವೆ
ನಾನು...
ತುಸು ನಾಚಿಕೆ ಪಡುವ
ನಿನ್ನ ನೋಟಕೆ ಬಂಧಿಯಾಗಿರುವೆ
ನಾನು...
ಇಂಪಾದ ನಿನ್ನ
ದ್ವನಿಯ ಕೇಳಲು ಮಾತಾಗುವೆ
ನಾನು...
ನಿನ್ನ ಸಂತೋಷದ ಕ್ಷಣಗಳಲ್ಲಿ
ನಗುವಿನ ಸದ್ದಾಗುವೆ
ನಾನು...
ನಿನ್ನ ಅಳುವಿನ ಕ್ಷಣಗಳಲ್ಲಿ
ಕಣ್ಣೀರಿನ ಹನಿಯಾಗುವೆ
ನಾನು...
ಪ್ರತಿ ಜನುಮದಲ್ಲೂ
ನಿನ್ನ ಜೊತೆಯಾಗಿರುವೆ
ನಾನು...!!"
ಎಮ್.ಎಸ್.ಭೋವಿ...✍️

- mani_s_bhovi

10 Jan 2023, 11:02 pm

ಸ್ನೇಹ ಸಂಬಂಧ..

"ನಿನ್ನ ಸ್ನೇಹಕ್ಕೆ ಸೋತಿರುವೆ ನಾ ಎಂದೊ,
ನಿನ್ನ ಜೊತೆಯಾಗಿರುವೆ ಸದಾ ಎಂದೆಂದೂ..!
ಆಕಸ್ಮಿಕವಾಗಿ ಬೆಳದ ನಮ್ಮ ಬಂಧವಿದು,
ಶಾಶ್ವತವಾಗಿ ಉಳಿಯುವ ಸ್ನೇಹಸಂಬಂಧವಿದು..!
ಖುಷಿಯಲ್ಲಿ-ದುಃಖದಲ್ಲಿ ಜೊತೆಯಾಗಿರುವೆ,
ನಿನ್ನ ಜೀವನದ ತುಂಬೆಲ್ಲ ಖುಷಿಯಿರಲೆಂಬ
ಅರಸುತ್ತಿರುವೆ..!
ಈಡೇರಲಿ ನೀ ಕಂಡ ಎಲ್ಲ ಕನಸುಗಳು,
ಬಾರದಿರಲಿ ನಿನಗೆ ಯಾವುದೇ ನೋವುಗಳು..!
ಎಮ್.ಎಸ್.ಭೋವಿ...✍️

- mani_s_bhovi

09 Jan 2023, 07:47 pm

ಚನ್ನ ಬಸವ ವಚನ

ನಂಬದೆ ಕೆಟ್ಟರು ಪರವಾಗಿಲ್ಲ ನಂಬಿ ಕೆಡಬೇಡ
ಕೊಡದೆ ಕೆಟ್ಟರು ಪರವಾಗಿಲ್ಲ ಕೊಟ್ಟು ಕೆಡಬೇಡ
ಮುಟ್ಟದೆ ಕೆಟ್ಟರು ಪರವಾಗಿಲ್ಲ ಮುಟ್ಟಿ ಕೆಡಬೇಡ
ಚನ್ನ ಬಸವ ಕೇಳಯ್ಯ
ಬಂದು ನೀ ನೆಲೆಸಿದರು ಪರವಾಗಿಲ್ಲ ಆದ್ರೆ
ಬರೆದೆ ಈ ಬಡವನ ಮರಿಬೇಡ

ಅನಾಮಿಕ ಸರ್ವಜ್ಞ

- Nisha anjum

08 Jan 2023, 08:35 pm

ಪಾಠ_ಹೇಳಿದಳು_ನನಗಿಲ್ಲಿ..

"ಭಾವದ ಆಟದಿ.. ಬಾಡಿದ ಮನವಿದು !
ನೋವಿನ ಒಡಲಲ್ಲೆ.. ನರಳಿದೆ ದಿನವಿದು !
ಬೇಕಿತ್ತಾ ?. ಒಲವಿನ ಸಹವಾಸವು..
ಹಾಯಾಗಿ ಇದ್ದಲ್ಲೊ ಓ_ಮನವೇ !
ವಿರಹದ ಅಪ್ಪುಗೆ ಬೇಕೆಂದಲೇ..
ಒಲವಿಗೆ ಒಳಗಾದಂತಿದೆ ಮನವೇ !
ಶುರುವಿನಲ್ಲಿ ಇದ್ದ ಭಾವಗಳು..
ಈಗ ಇಲ್ಲವಂತೆ ಅವಳಲ್ಲಿ !
ಕಾಲಸರಿದ ಹಾಗೆ ಮಾಯವಾಗೋ_ಕುರಿತು..
ಪಾಠ_ಹೇಳಿದಳು ನನಗಿಲ್ಲಿ !!"
ಎಮ್.ಎಸ್.ಭೋವಿ...✍️

- mani_s_bhovi

08 Jan 2023, 07:10 pm

ನೀನೇ ನನಗೆಲ್ಲ

ಈ ಪ್ರಶ್ನೆ ಉತ್ತರದ ಬದುಕಿನಲ್ಲಿ
ನೀ ನನಗೇನಾಗಬೇಕೊ ನಾ ನಿನಗೇನಾಗಬೇಕೊ
ತಿಳಿದಿಲ್ಲ
ನನ್ನ ಕಲ್ಪನೆಯ ಬದುಕಿನಲಿ ನೀನೆ ನನಗೆಲ್ಲ

ಇಲ್ಲಿ ಪ್ರಶ್ನೆಯು ನನ್ನದೆ, ಉತ್ತರವು ನನ್ನದೆ
ಪ್ರೀತಿ, ಪ್ರೇಮ, ಕಾಳಜಿ, ಅಕ್ಕರೆ, ಸಂತೋಷ
ಎಲ್ಲವೂ ನನ್ನದೆ

ಕಾದಿದೆ ಜೀವ ನಿನ್ನ ಬರುವಿಕೆಗಾಗಿ
ಈ ಕಣ್ಣು ಮಣ್ಣು ಸೇರೊ ಮುನ್ನ
ಬಂದುಬಿಡು ನನಗಾಗಿ...

- Tanuja.K

07 Jan 2023, 11:23 pm

ಕವನಗಳ ಪ್ರೀತಿ ನಿನಗಾಗಿ

ನನ್ನ ಕವನದ ಪ್ರತಿ ಪದವು ನಿನ್ನ ಪ್ರೀತಿಸುವುದು
ಪ್ರತಿ ಸಾಲುಗಳು ನಿನ್ನ ನೆನಪಿಸುವುದು
ನಿನ್ನ ಮರೆಯಲು ಆಗದು ನನಗೆ
ಋಣವಿಲ್ಲ ಬದುಕಲು ಜೊತೆಗೆ

ಎಂದಾದರೊಂದು ದಿನ ಈ ಕವನ ಸೇರುವುದು ನಿನ್ನ ಕೈಗೆ
ಆ ನಂಬಿಕೆಯಲೆ ಕವನಗಳ ಬರೆಯುವೆ ಮತ್ತೆ ನಿನಗಾಗೆ
ಎಷ್ಟು ಕವನಗಳ ಬರೆಯಲಿ ನಿನಗಾಗಿ
ಮತ್ತಷ್ಟು ಸಂತೋಷ ಕೊಡುವುದು ತಾನಾಗಿ

ನಿನ್ನ ನೆನಪಲ್ಲೆ ಪ್ರತಿಕ್ಷಣವ ಕಳೆಯುವೆನು
ನಿನ್ನ ಗುಣಕಾಗಿ ಸೋತಿರುವೆನು
ಕಾಲವು ದೂರ ಮಾಡಿದರೇನು ನಮ್ಮನ್ನು
ಕವನದಲಿ ಮತ್ತಷ್ಟು ಸನಿಹ ನಾವಿನ್ನು...

- Tanuja.K

07 Jan 2023, 11:05 pm

ಸ್ನಹದ ಆರ್ಥ ಕಲಿಸೇಕೋಟ ಗೆಳೆತಿಯ ನೆನಪಿನಲಿ

ಮನದ ಮೂಲೆಯಲಿ ಬೆಚ್ಚಗೆ ಮಲಗಿದ್ದ ನೆನಪೊಂದು ಹೇಳಿತು..
ಸ್ನಹದ ಕಾರಂಜಿಯಲಿ ಮೈ ಮರೆತು ಕುಣಿದಿದ್ದ ಕ್ಷಣಗಳಿಗೆ ಸಾಕ್ಷಿಯಾಗಿ..
ಮೌನದ ಪದಗಳಲಿ ಅರ್ಥವನು ಹುಡುಕಿದ್ದ ಭಾವನೆಗಳ
ಪ್ರತಿರೂಪವಾಗಿ....
ಸ್ನೆಹಿತರ ನೊಂದ ಮನದ ದುಃಖದಲ್ಲಿ ಬಾಗೀಯಾಗಿ...
ಜೀವನದ ಹಾದಿಯಲಿ ನಿನೋಂದಿಗೆ ನಡೆದಿದ ದಾರಿ ಇಂದಿಗೂ ಹಸಿರಾಗಿದೆ.

- Lakith gowda K

06 Jan 2023, 11:02 pm