Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
1. ಪ್ರಕೃತಿಯ ಸೊಬಗು
ಗಿಡದ ಮೇಲೆ ಚಿಗುರಿದ ಹಸಿರು,
ಮನದಲಿ ತಂದಿತು ಹೊಸದೊಂದು ಉಸಿರು.
ಹಕ್ಕಿಗಳ ಕಲರವ ಬೆಳಗಿನ ಹಾಡು,
ಸೋಲದ ಉತ್ಸಾಹಕೆ ನೀನಾಗು ಮುನ್ನುಡಿ ನೋಡು.
2. ಬದುಕಿನ ಪಯಣ
ಬದುಕು ಅಲೆಗಳ ನಡುವಿನ ದೋಣಿ,
ಕಷ್ಟ-ಸುಖಗಳೆ ಎರಡೂ ಬದಿಗಳ ಸಾಣಿ.
ಧೈರ್ಯವೊಂದಿದ್ದರೆ ಸಾಗುವುದು ಹಾದಿ,n
ಗಮ್ಯವ ತಲುಪಲು ಬೇಕು ಛಲದ ಹಾದಿ.
3. ಗೆಳೆತನ
ಮಾತಿಲ್ಲದಿದ್ದರೂ ಅರ್ಥವಾಗುವ ಮೌನ,
ಕಷ್ಟದಲಿ ಜೊತೆಯಾಗುವ ಸುಂದರ ಗಾನ.
ಗೆಳೆತನವೆಂಬುದು ದೈವಿಕ ವರವು,
ಪ್ರೀತಿಯೊಂದಿದ್ದರೆ ದೂರವಾಗುವುದು ನೋವು.
- ಶಿರೀಶ
08 Feb 2026, 10:39 pm
ಸೂರ್ಯನನ್ನೇ ಸುಡುವ ಕೋಪ ಅವಳದು.
ಚಂದ್ರನನ್ನೇ ನಾಚುವಂತೆ ಮಾಡುವ ನೋಟ ಅವಳದು.
ನವಿಲೇ ನಾಚುವಂತಹ ನೃತ್ಯ ಅದಳದು.
ಕೋಗಿಲೆಗಿಂತ ಸುಮಧುರ ಕಂಠ ಅವಳದು.
ಸಮುದ್ರದಲ್ಲಿ ಅರಳುವ ಕಮಲಕ್ಕಿಂತ ನಿಷ್ಕಲ್ಮಶ ಮನಸುಳ್ಳವಳು.
ಮುತ್ತು ರತ್ನಗಳಿಗಿಂತ ಹೊಳೆಯುವ ಸೌಂದರ್ಯ ಅವಳದು.
ಅವಳದು.
ಅವಳದು.
ಅವಳದು.
.
.
.
.
.
- Kiran R
03 Feb 2026, 07:33 pm
ತ್ಯಾಗವೇ ಪ್ರೀತಿಯಾದರೆ..
ಆ ಪ್ರೀತಿ ಚಿಗುರುವ ಮುನ್ನವೇ ನಶಿಸಬೆಕಿತ್ತು.
ನಾಟಕೀಯ ಪ್ರೀತಿಯ ತೋರಿದ ನೀನು ನಿಜವೇ ಆದರೆ...
ನೈಜವಾಗಿ ಇಷ್ಟ ಪಟ್ಟು ನಿನ್ನನ್ನೇ ಆರಾಧಿಸಿದ ನಾನು ಮುರ್ಖಳಾದೆ.
ನೀ ನನಗೆ ಸಿಗಬೇಕು ಎಂಬ ಸ್ವಾರ್ಥ ಕ್ಕಿಂತ
ನೀ ಎಲ್ಲೇ ಇದ್ದರೂ ಚೆನ್ನಾಗಿರಬೇಕು ಎಂದು ಬಯಸುವ ನಿಸ್ವಾರ್ಥಿಯಾದೆ.
ವರ್ಷಗಳೇ ಕಳೆದರೂ ನಿನ್ನ ಮೇಲಿನ ಪ್ರೀತಿ ಬದಲಾಗುತ್ತಿಲ್ಲ..
ನನ್ನ ಜೀವನದಲ್ಲೂ ಕೂಡ ಆ ಒಂದು ವ್ಯಕ್ತಿ ಬಂದಾಗ ನಾ ಈ
ಬೆರೂರಿ ನಿಂತ ನಿನ್ನ ಪ್ರತಿ ನೆನಪನ್ನು ಬುಡ ಸಮೇತ ಕಿತ್ತು ಹೊಸೆದು..
ನನಗಾಗಿ ಬಂದ ಆ ವ್ಯಕ್ತಿಯ ಪ್ರೀತಿಯ ಜೊತೆ ಪುಟ್ಟ ಸಸಿಯನ್ನು
ಹೆಮ್ಮರವಾಗಿಸುವೇ...
ಬಹುಶಃ ಇದೇ ಪ್ರೀತಿಯ ಪಾಠ ಇರಬಹುದು....
ಜ್ಯೋತಿ ❤️??
೦೨/೦೨/೨೦೨೬
- Jyothi
02 Feb 2026, 11:13 pm
ನಿಮ್ಮಂದಕೆ ನೀವೇ ಸಾಟಿ,
ಕೇಶರಾಶಿ ಸೆಳೆದಿದೆ ಮನವ ಚಿವುಟಿ,
ವದನವದು ನಗುವ ಹೂ ಬನ..
ಮಗುವಾಗಬಯಸಿದೆ ಮನ,
ಪಡೆಯಲೆಂದು ನಿಮ್ಮ ಚುಂಬನ...
---- tippu ----
- tippu
01 Feb 2026, 03:06 pm
ನೋಡಲು ಸುಂದರ ರಾತ್ರಿಯ ಚಂದ್ರ
ಎಲ್ಲರನ್ನು ತನ್ನಡೆಗೆ ಆಕರ್ಷಣೆಯ ಮಾಡುವ
ಚಿನ್ನದಂತೆ ಹೊಳಪುಳ್ಳ ಇವನ ಸುಂದರ ಬೆಳಕು
ಸೃಷ್ಟಿಸಿದೆ ಭೂಮಿಯ ಮೇಲೆ ಬೆಳದಿಂಗಳ ಮೈದಾನವ
ಚಂದ್ರನ ಸೌಂದರ್ಯ ಹೆಚ್ಚಿಸುವವು ಸುತ್ತಲಿನ ನಕ್ಷತ್ರಗಳು
ತಾಯಂದಿರು ಎಳೆ ಮಕ್ಕಳಿಗೆ ಊಟ ತಿನಿಸುವಾಗ
ಮಕ್ಕಳಿಗೆ ತೋರಿಸುವರು ಇವನನ್ನ
ಇವನ ಆ ಬೆಳಕು ಎಷ್ಟು ಸುಂದರ
ನೋಡಿದ ನಮ್ಮ ಕಣ್ಣುಗಳೇ ಅಮರ
- Chandana Chandu
31 Jan 2026, 07:30 pm
ಸಾಕಾಗಿದೆ ಈ ಹಳೆ ಬದುಕು
ಹಳೆ ನೆನಪುಗಳು ಹೃದಯ ಚುಚ್ಚಿ ಚುಚ್ಚಿ
ಗಾಯಗೊಳಿಸಿದೆ
ಕೊಚ್ಚಬೇಕೆಂದಿರುವೆ ಹಳೆ ನೆನಪ
ಶುರು ಮಾಡಬೇಕೆಂದಿರುವ ಹೊಸ ಬದುಕ
ಕಷ್ಟದಲ್ಲೂ ಕೈ ಬಿಡದೆ
ಎಂದೆಂದಿಗೂ ಜೊತೆಯಾಗಿ ಇರಲು
ಈ ಬರಡಾದ ಜೀವನಕ್ಕೆ
ಮುಂಗಾರಿನ ಮಳೆಯಾಗಿ ಬರುವೆಯಾ
ಹೇ ಗೆಳತಿ.........................?
- Chandana Chandu
31 Jan 2026, 07:23 pm
ಬಾಗಿಲ ಒಳಗೂ ಹೊರಗೂ ಪರದಾಟ
ಘಂಟೆಗಳ ಎಣಿಸುವ ಪರಿಪಾಠ
ತವಕದಲಿ ಹೃದಯದ ಬಡಿದಾಟ
ಸಮಯದೊಂದಿಗೆ ಮನಸಿನ ಓಟ
ಜೀವನದ ಕ್ಷಣ ಕ್ಷಣವೂ ಆತುರ
ಮಕ್ಕಳನ್ನು ಶಾಲೆಗೆ ಕಳುಹಿಸುವ ಕಾತುರ
ಪತಿಗೆ ಊಟದ ಡಬ್ಬಿ ತಯಾರಿಸುವ ಆತುರ
ನಂತರ ಕಚೇರಿಗೆ ಓಡುವಿಕೆ ನಿರಂತರ
ಜೀವನದ ಈ ಪರಿಪಾಠದ ಅಂತ್ಯಕೆ ಕಾತುರ
ಆ ದಿನ ಬಂದಾಗ ಅದೆಷ್ಟೋ ಸಡಗರ
ನೆಮ್ಮದಿಯ ಜೀವನ ನಡೆಸುವ ಹುನ್ನಾರ
ಪ್ರವಾಸಗಳ ಪಟ್ಟಿಯ ತರಾತುರಿ ನಿರಂತರ
ಎರಡು ದಿನ ಖುಷಿಯ ಅರಿವಾಯಿತು
ನಂತರ ಮೊಮ್ಮಕ್ಕಳಿಗೆ ಪಾಠ ಶುರುವಾಯಿತು
ಸೊಸೆ ಮೊಮ್ಮಕ್ಕಳನ್ನು ಸಂಭಾಳಿಸುವಂತಾಯಿತು
ಸಂಸಾರದ ಹೊಣೆ ಜಾಸ್ತಿಯಾಯಿತು
ಮಾವನ ಆರೈಕೆಗೆ ಕೊನೆಯಿಲ್ಲದಾಯಿತು
ಅತ್ತೆಯ ಪ್ರವಾಸಕೆ ಅಂತ್ಯವಿಲ್ಲದಾಯಿತು
ಸಂಸಾರದ ಹೊಣೆ ಹೆಚ್ಚಾಯಿತು
ನಿವೃತ್ತಿ ಜೀವನದ ಕನಸು ನುಚ್ಚು ನೂರಾಯಿತು
ಕ.ರಂ. ಶೈಲಜಾ, ಮೈಸೂರು
- shyla
31 Jan 2026, 06:37 pm
ನಿ(ಮ್ಮ)ನ್ನ ಸಮಯ ಪರಿಪಾಲನೆ,
ಅದಕೆ ನಾ ಸೋತೆನೆ,
ನಿಮ್ಮ ಕರ್ತವ್ಯ ಶ್ರದ್ದೆ,
ಅದಕೆ ನಾ ಸೋತೆನೆ,
ಸೋತಿರುವೆ ನಾ, ನೀವಿಟ್ಟ ನಂಬಿಕೆಗೆ,
ಸೋತು ಸೋತು ಸೋಲುತಿರುವೆ..
ಗೆಲ್ಲುವ ಹಂಬಲ ನನಗಿಲ್ಲ,
ನೀವೇ ಇರುವಿರಿ ನನ್ನೊಳಗೆಲ್ಲ...
ನಿಮ್ಮಂದ ನಾ ಹೇಗೆ ಬಣ್ಣಿಸಲಿ,
ನಿಮ್ಮಂದಕೆ ನಿಲುಕದ ಪದಗಳ ನಾ ಹೇಗೆ ಪೋಣಿಸಲಿ,
ಬರೆದು ಬರೆದು ಅಳಿಸಿದೆ ಪದಗಳ,
ಅವು ಸಾಲದಾಗಿವೆ ಹೊಗಳಲು ನಿಮ್ಮ ಕಂಗಳ ಬೆಳದಿಂಗಳ...
ನಿಮ್ಮ ಮಧುರ ಕಂಠಸಿರಿ,
ಕೇಳಬೇಕೆನಿಸಿದೆ ಪರಿ ಪರಿ,
ಸುಂದರ ಕೇಶರಾಶಿ, ಮೈ-ಮರೆಸಿ ಮನಕೆ ಮಾಡಿವೆ ಘಾಸಿ,
ಘಾಸಿಗೊಂಡ ಮನವ ಮಾಡುವಿರಾ ವಾಸಿ,
ಏಕೆಂದರೆ ನೀವಿರುವಿರಿ ನನ್ನ ಮನದ ನಿವಾಸಿ...
ನಿಮಗಾಗಿ ಬರೆದೆ ಈ ಕವನ,
ಪೋಣಿಸಿ ಸುಂದರ ಹೂವಂತ ಪದಗಳ ಸರಮಾಲೆಯನ್ನ,
ತೆರೆದು ನನ್ನ ಮನದ ನಿಮ್ಮ ಕದವನ್ನ...
ಬರೆಯುವುದಾದರೆ ಬರೆಯುತಲೇ ಇರುವೆ ನಾ,
ನೆನೆದು ನಿಮ್ಮ ಸುಮಧುರ ಕಂಠವನ್ನ,
ನೆನೆದು ನಿಮ್ಮ ಸುಂದರ ವದನವನ್ನ,
ಸಧ್ಯ ಇರಲಿ ಅಲ್ಪ ವಿರಾಮ....
---- tippu ----
- tippu
25 Jan 2026, 05:39 pm
ಬಣ್ಣ ಬಣ್ಣದ ಸೀರೆಯನ್ನುಟ್ಟು
ಕಪ್ಪು ಕೂದಲಿಗೆ ಬಿಳಿ ಮಲ್ಲಿಗೆ ಮುಡಿದು
ನಿಂತಿರುವ ಹಸಿರು ಕಂಗಳ ಚೆಲುವೆ
ಬೆಳದಿಂಗಳ ಮೈದಾನ ಇವಳ ಮುಖ
ಹೂ ಮೇಲೆ ಹಿಬ್ಬನಿಯು ಕುಳಿತಂತೆ
ಅವಳ ಹಣೆಯಲ್ಲಿ ಸಣ್ಣ ಕೆಂಪು ಮುಂಗುರುಳು
ಅರ್ಧ ಚಂದ್ರನಂತೆ ಬಾಗಿವೆ ಇವಳ ಕಣ್ಣುಬ್ಬುಗಳು
ಕಾಡಿಗೆ ಬಳಿದ ಆ ಸುಂದರ ಹಸಿರು ಶಿವಮೊಗ್ಗದಲ್ಲಿ ಎದ್ದು ಕಾಣುತ್ತಿದೆ
ಇವುಗಳ ಮೂಲಕ ಹೊರಡುವ ಕನ್ನಡ ಶಬ್ದಗಳು
ಕೇಳಿ ಮನಸಿಗಾಯ್ತು ತಂಪು
ಇವಳ ಮುಖದಲ್ಲಿ ಎದ್ದು ಕಾಣುತ್ತಿದೆ
ಸೌಂದರ್ಯತೆಯ ಗಾಂಭೀರ್ಯತೆ
ಸರಳತೆಯಯಲ್ಲಿ ಸಿರಿತನದ ಚಲವುಳ್ಳವಳು
ಕವಿ ವರ್ಣಿಸಲಾಗದ ಸೌಂದರ್ಯವತಿಇವಳು
........✍️ ವಿನಯ್ ಕುಮಾರ್, 10ನೇ ತರಗತಿ, ಸರಕಾರಿ ಪ್ರೌಢಶಾಲೆ ಹುಲಿಕುಂಟೆ
- Chandana Chandu
24 Jan 2026, 06:49 pm
ಎನ್ನ ಮನವ ಅರಿಯದಾದೆ ನೀನು..
ಅರಿತೂ ಅರಿಯದಂತಿರುವೆಯೇನು?
ಎನ್ನ ಮನ ಕಾಡಿ ಕೇಳುತಿದೆ ನನ್ನನು,.
ನನಗೆ ನೀ ನೀಡಿದ ನೋವಿನ ಪರಿಯದೇನು..
ಅರಿಯುವುದಾದರೆ ಅರಿತುಕೋ ನೀ ಬೇಗನೆ ನನ್ನನು,
ಅಂದುಕೊಂಡಿದ್ದೆ ನಾನಂದು ನೀನಾಗಬಲ್ಲೆ ನನ್ನೊಲವ ಜೇನು,
ಅರಿತೆ ನಾನಿಂದು ನೀ ಜೇನಲ್ಲ, ಬರಿ-ಕೈ ಗೆ ಸಿಗದ ಬಳು(ಬಲು)ಕಾಡುವಾ ಮೀನು...
ಕೈ-ಚಾಚಿರುವೆ ನೀರಲ್ಲಿ ನಾ, ಬರುವುದಾದರೆ ಬಂದು ಹಿಡಿ ನನ್ನ ಅಂಗೈ ಯನ್ನ,
ಬೊಗಸೆಗೆ ಬಂದು ಸೇರಿದ ನಿನ್ನ,
ಉಸಿರಿರೋವರೆಗೂ ಮನಸಾರೆ ಪ್ರೀತಿಸುವೆ ಚಿನ್ನ...
ಇಂತಿ ನಿನ್ನ.....
--- tippu ---
- tippu
24 Jan 2026, 12:37 pm