Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದಲಾಗಬೇಕಿದೆ

ನೋವನ್ನುಂಡು ಸಂತಸದ ಕಂಪನ್ನು ಹರಡಿಸಿ
ಮಮತೆಯ ಮಳೆಯನ್ನು ಸುರಿಸುವಳು ಹೆಣ್ಣು
ಅಮ್ಮನಾಗಿ, ಅಕ್ಕ,ತಂಗಿ,ಹೆಂಡತಿಯಾಗಿ
ಬದುಕಿನ ಜವಾಬ್ದಾರಿ ನಿರ್ವಹಿಸುವಳು ಹೆಣ್ಣು!

ಹೆಣ್ಣೆಂದರೆ ಸಹನೆ, ಶಾಂತಿ,ಪ್ರೀತಿ ವಿಶ್ವಾಸ
ಹೆಣ್ಣೆಂದರೆ ಮತ್ತೊಂದು ಜೀವಕೆ ಉಸಿರು ನೀಡುವಳು
ಕನಸುಗಳಿಗೆ ರೂಪವಾಗಿ,ಪದಗಳಿಗೆ ನಿಲುಕದವಳು
ಎಲ್ಲವೂ ಅವಳಿಂದಾದರೂ, ಒಂಚೂರು ಗರ್ವಪಡದವಳು!

ಪುರುಷರಿಗೆ ಸರಿಸಮನಾಗಿ ಸ್ವತಂತ್ರವಾಗಿ ಬದುಕಬಲ್ಲಳು
ಆದರೂ ಆಕೆ ನರಳುತ್ತಿದ್ದಾಳೆ ದೌರ್ಜನ್ಯದಡಿಯಲ್ಲಿ ಸಿಲುಕಿ
ಸ್ವಾವಲಂಬಿಯಾಗಿ ಬದುಕಲು ಬಿಡರು ಸಮಾಜದ ನಡುವಿನಲ್ಲಿ
ಹೆಸರಿಗಷ್ಟೇ ಮಹಿಳೆ ಒಬ್ಬಂಟಿಯಾಗಿ ಓಡಾಡಲು ಸ್ವತಂತ್ರಳು!

ತಡೆಯಬೇಕಿದೆ ಹೆಣ್ಣು ಭ್ರೂಣಹತ್ಯೆ,ವರದಕ್ಷಿಣೆ,ತಾರತಮ್ಯ,ಅತ್ಯಾಚಾರಗಳನ್ನು
ಸಮಾಜದ ಕಣ್ಣುಗಳಾಗಬೇಕಿದೆ ಮಮತೆ,ನಂಬಿಕೆ,ನೈತಿಕ ಮೌಲ್ಯಗಳು
ಹೀಗಾಗಿದ್ದಲ್ಲಿ ಮಾತ್ರವೇ ಮಹಿಳಾ ದಿನಾಚರಣೆಗೊಂದು ಅರ್ಥ
ಇಲ್ಲವಾದಲ್ಲಿ ಈ ಆಚರಣೆ ನಡೆಸುವುದು ವ್ಯರ್ಥ!

- ಪ್ರಿಯಾಂಕ

08 Mar 2023, 09:06 am

ಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ.

ಬಾನಂಗಳದಲ್ಲಿ ನೇಸರನು ಬರುವ ಮುಂಚೆ
ನೀ ತೊಡುಗುವೆ ನಿನ್ನ ಕಾಯಕದಲ್ಲಿ.
ನಿನಗೆ ಯಾರೇ ಸರಿಸಾಟಿ ಈ ಜಗದಲ್ಲಿ.
ಎಷ್ಟೇ ಕಷ್ಟ ಬಂದರು ನೀ ಹೊಳೆಯುವೆ ಕನ್ನಡಿಯಂತೆ.
ತಾಯಿಯಾಗಿ, ಸತಿಯಾಗಿ ಜೊತೆ ಬರುವೆ ನೆರಳಿನಂತೆ.
ಸಾವಿರಾರು ಸವಾಲುಗಳು ಎದುರಾದರೂ ನಡೆಯುವೆ ನೀ ದಿಟ್ಟ ಹೆಜ್ಜೆಯನಿಟ್ಟು.
ನಿನ್ನ ನೋವುಗಳನ್ನು ಪಕ್ಕಕೆ ಬಿಟ್ಟು.
ಮನೆ-ಮನೆಯಲ್ಲಿ ದೀಪ ಮೂಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ಸಂಸಾರದ ನೌಕೆ ಸಾಗಿಸುವ ಆಕೆ
ನಿನಗೆ ಬೇರೆ ಹೆಸರು ಬೇಕೆ .......?
ಸ್ತ್ರೀ ಅಂದರೆ ಅಷ್ಟೆ ಸಾಕೆ .....?
ಯೋಗಿತ.ಟಿ.ಎನ್.

- Yogitha T N

08 Mar 2023, 07:54 am

ಸ್ತ್ರೀ

ಬ್ರಹ್ಮನ ಅದ್ಭುತ ಕಲ್ಪನೆಯೆ
ಪ್ರಕೃತಿಯ ಅಪ್ರತಿಮ ಸೃಷ್ಟಿಯೆ
ಪ್ರೀತಿ-ಸಹನೆಯ ಪ್ರತಿರೂಪವೆ
ಧೈರ್ಯ-ತ್ಯಾಗದ ಮೂರ್ತಿಯೆ

ತಾಯಾಗಿ ಜೀವವಿತ್ತು
ಪ್ರೀತಿ -ಮಮತೆಯಿಂದ ಸಲಹಿ
ಸರ್ವಸ್ವವನ್ನೂ ಧಾರೆ ಎರೆವ
ನೀನಿಲ್ಲದ ಜಗವು ಶೂನ್ಯ

ಗೆಳತಿಯಾಗಿ ಜೀವನದ ಜೊತೆಯಾಗಿ
ಕಷ್ಟ -ಸುಖದ ನೊಗವ ಹೊರುತ
ಬದುಕಿಗೆ ಹೊಸ ಅರ್ಥವ ಕೊಡುವ
ನೀನಿಲ್ಲದ ಬದುಕು ವ್ಯರ್ಥ

ಹೆಣ್ಣಿಂದಲೇ ರಾಮಾಯಣ ನಾರಿಗಾಗಿಯೇ ಮಹಾಭಾರತ
ನಿನ್ನ ತುಳಿದು ಬದುಕಿದವರಿಲ್ಲ ಜಗದಲಿ
ಹೆಣ್ಣಿಗೆ ಶಿಕ್ಷಣ, ಸಮಾನತೆ, ಗೌರವವು
ಸಮಾಜದ ಉನ್ನತಿಗೆ ಮೂಲವು.

ಡಾ.ಅನಿಲ್

- anil

08 Mar 2023, 06:30 am

ಸಾಧನೆಯ ಹಾದಿ

ಸಾಧಿಸಲು ಏನಿದೆ ಈ ಜಗದೊಳು
ಹೇಳಿ ಸುಮ್ಮನಿರುವ ಮನುಜರು ದಡ್ಡರು
ಸೋತರೂ ಗೆಲುವಿಗಾಗಿ ಹಾತೊರೆದು
ಬದುಕ ಸವಿಯನ್ನು ಕಂಡವರು ಜಾಣರು!

ನೋವು-ನಲಿವು, ಸುಖ-ದುಃಖ ಹಂಚಿಕೊಂಡರೆ
ಸಾರ್ಥಕವೆನಿಸುವುದು ಬಾಳು
ಸೋತವರಿಗೂ ಬೆನ್ನುತಟ್ಟಿ, ಗೆದ್ದವರಿಗೂ ಪ್ರೋತ್ಸಾಹಿಸಿ
ನಗಿಸುತ್ತ ಮರೆಸಬೇಕು ಜನರ ಗೋಳು!

ಕನಸು ಕಾಣುವವನಿಗೆ ಗುರಿ ಮುಟ್ಟುವ ತವಕ
ಖಾಲಿ ಕುಳಿತಿರುವವನಿಗೆ ನಿದ್ದೆಯಲ್ಲಿಯೂ ದುಃಖ
ತಿಳಿದಷ್ಟು ಮತ್ತಷ್ಟು ಸಾಧಿಸುವವರಿಗೆ ತವಕ
ಯಾರಿಗೆ ಬೇಕು ಸಾಧನೆಯಿಲ್ಲದ ಸುಖ!

ನಮ್ಮೆದುರಿರುವ ದಾರಿ ಕಿರಿದಾದರೇನು
ನಮ್ಮೊಳಗೆ ಇರಬೇಕು ಸಾಧಿಸುವ ಛಲ
ಗೆಲುವಿನ ಹೆಜ್ಜೆ ಕಠಿಣವಾದರೇನು
ಸಾಧನೆಗೆ ದೊರಕುವುದು ತಕ್ಕ ಪ್ರತಿಫಲ!

- ಪ್ರಿಯಾಂಕ

06 Mar 2023, 07:05 pm

ಶಿವನೇ ಕೇಳಿಸುತ್ತಿರುವುದೇನಪ್ಪ...

"ಕೊಟ್ಟಾದರು ಕೊಡು ಶಿವನೇ..
ಅವಳ ಸೂಚನೆಯೆನ್ನೆ !
ಎಷ್ಟು ಕಾಯೋದು.. ನಾ_ಅವಳನ್ನ !
ಇನ್ನೆಷ್ಟು ಪರೀಕ್ಷೆ ಮಾಡ್ತಿಯಪ್ಪ..
ನನ್ನ ತಾಳ್ಮೆಯೆನ್ನ !
ಆದಷ್ಟು ಬೇಗನೆ ಕರಣಿಸೋ ಶಿವನೇ..
ನನ್ನವಳನ್ನ !
ಅವಳಿಗೂ ತಿಳಿಸೋ ಶಿವನೇ..
ನಾ_ಅವಳ ಆಗಮನವ
ನಿರೀಕ್ಷಿಸುತ್ತಿರುವುದನ್ನ !!"
ಎಮ್.ಎಸ್.ಭೋವಿ...✍️
.

- mani_s_bhovi

06 Mar 2023, 05:48 pm

ತಟ್ಟಿನೋಡುವೆಯ ನನ್ನೆದೆಯ ಬಾಗಿಲನ್ನ..

ಯಾರು ಇಲ್ಲದ ಈ ಒಂಟಿ ಮನಕೆ,
ತೂಗು ಹಾಕಲೇ ಖಾಲಿ ಫಲಖ...!
ಮನವು ಕಾಡುತಿದೆ ನೀ ಯಾರೆಂದು ತೆರೆದು ನೋಡುವೆಯ ನನ್ನೆದೆಯ ಚಿಲಕ...!
ಎದೆಯ ಪಂಜರದಲ್ಲಿ ಬಚ್ಚಿಟ್ಟ ಈ ಪ್ರೀತಿ,
ಹಾರುತಿದೆ ಬಿಡುಗಡೆ ಸಿಕ್ಕಿದ ಪಕ್ಷಿಯ ರೀತಿ...!
ಆ ಹಾರುವ ಪಕ್ಷಿಯ ಯಾರೋ ಹಿಡಿಯುವ ಮುನ್ನ,
ಒಂದು ಬಾರಿ ಆದರೂ ತಟ್ಟಿನೋಡು
ನನ್ನ ಎದೆಯ ಬಾಗಿಲನ್ನ....!
ಎಮ್.ಎಸ್.ಭೋವಿ...✍️

- mani_s_bhovi

06 Mar 2023, 05:35 pm

ಏನೆಂದು ಬರೆಯಬೇಕು ನನಗೆ ಅರಿಯದು..

ನಡೆಯುವ ಆಸೆ ನಿನ್ನೊಟ್ಟಿಗೆ ಕೈ ಹಿಡಿದು,
ಹೇಳಲಾಗದು ನಿನ್ನೆದುರು ನನ್ನುಸಿರ ಬಿಗಿ ಹಿಡಿದು...!
ತಿಳಿದು ತಿಳಿಯದೆ ಇರುವಂಥ ಈ ನಿನ್ನ ನಡವಳಿಕೆ,
ಮನದಿ ಮೂಡಿತಿದೆ ಒಂಟಿತನದ ಬೇಸರಿಕೆ...!
ಮರೆಯಲಾಗದ ನಿನ್ನ ನೆನಪಿನೊಟ್ಟಿಗೆ,
ಅರ್ಥವಾಗದ ಬದುಕು ನನ್ನದು...!
ಹರಿದು ಹೋಗುವ ಕಾಗದದ ಮೇಲೆ,
ಏನೆಂದು ಬರೆಯಬೇಕೋ ನನಗೆ ಅರಿಯದು...!
ಎಮ್.ಎಸ್.ಭೋವಿ...✍️

- mani_s_bhovi

06 Mar 2023, 05:25 pm

ಅವಳು..

ಆಕೆ ಅಲ್ಲಿಯೇ ನಿಂತಿದ್ದಳು ದೂರದಲೆಗಳ ಅಬ್ಬರಕ್ಕೆ ಚಲಿಸದೆ ನಿಂತ ಚಿಗುರೆಳೆಯಂತೆ, ಕಾರ್ಮೋಡದ ಸದ್ದು ಕೇಳಿ ಹೆದರಿ ಅಡಗಿದ ಪುಟ್ಟ ಕಂದನಂತೆ, ಬೆಚ್ಚಗಿನ ಹಾಲಲ್ಲಿ ಬಿದ್ದ ಹುಳಿ ಮೊಸರಿನ ದೂರದಂತೆ, ಆಕೆ ಅಲ್ಲಿಯೇ ನಿಂತಿದ್ದಳು ಅಮ್ಮನ ಕಿರುಬೆರಳು ಸಿಗದ ಮಗುವಿನಂತೆ ಅವನ ದಾರಿ ಕಾಯುತ್ತಾ. ಆಗೊಮ್ಮೆ ಈಗೊಮ್ಮೆ ಸುಡು ಬಿಸಿಲಲ್ಲಿ ಇಣುಕಿನೊಡುವ ತಂಗಾಳಿಯಂತೆ ಅವನ ನೆನಪು ಬಂದಾಗ ಸಣ್ಣಗೆ ಕಂಪಿಸುವಳು ಮತ್ತೆ ಸಾವರಿಕೊಂಡು ಹಾದಿ ನೋಡುವಳು.

ಹಿಂದೆಂದೋ ಬರಿದಾದ ರೋಡಿನಲ್ಲಿ ಕೈ ಹಿಡಿದು ನಡೆದಾಗ ಕೇಳಿದಳಂತೆ ಎಲ್ಲಿಯ ವರೆಗೂ ಈ ನಡುಗೆ ಎಂದು ಅವನ ಉತ್ತರ ಇನ್ನೂ ಕೇಳಿಸಲಿಲ್ಲ ಅವಳಿಗೆ! ನನ್ನವನಾ ನೀನು ಗೊತ್ತಿಲ್ಲ ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ, ಮೌನ ಮುರಿಯುವ ಆಸೆಯೂ ಅವಳಿಗೆ ಇರಲಿಲ್ಲ ವರುಷಗಳುರುಳಿದವು, ತಾರೀಕುಗಳು ಬದಲಾದವು ಅವನ ಸುಳಿವಿಲ್ಲ ಮನೆಯಲ್ಲಲ್ಲ ಮನಸಲ್ಲಿ!! ಎದುರುಬದುರು ಕುಳಿತರು ಆತ್ಮೀಯತೆ ಕಂಡುಬಂದಿಲ್ಲ, ತನ್ನ ಸ್ವತ್ತೆಂದು ಕಟ್ಟಿಹಾಕಲಿಲ್ಲ ಅವನನ್ನು, ಸರಿ ತಪ್ಪುಗಳ ಲೆಕ್ಕ ಮೇಲಿನವನಿಗಿರಲಿ ಅವನ ಹೃದಯ ಸೇರುವ ರಸ್ತೆಯಲ್ಲಿ ಹಿಂದಿರಬಹುದು ನಾನು ಮುಂದೆ ಹೋದವರಿಗೆ ಪ್ರಾಶಸ್ತ್ಯ ಕೊಟ್ಟಿರಬಹುದು ಅವನು...

ತಾನು ತನ್ನದೆಂಬುದ ತೊರೆದವಳು ತನ್ನನ್ನೆ ತಾ ಕೊಟ್ಟವಳು ಅವಳಲ್ಲವೆ! ಹಿಂಪಡೆಯುವುದು ಎಷ್ಟು ಸರಿ ಇರಲಿ ಬಿಡು ಹಿಂಪಡೆದು ತಾನಾದರು ಏನು ಮಾಡಿಯಾಳು ಅಸ್ತಿತ್ವದ ಕಳುವಾದಮೇಲೆ.. ಇಹದ ಚಿಂತೆ ಬೇಡವಾದಮೇಲೆ, ಹಗಲು ಉರುಳಿತು ಹಕ್ಕಿಗಳೆಲ್ಲ ಅವಸವಸರದಿ ಗೂಡು ಸೇರಿದವು ತಾನು ಎದ್ದು ಹೊರಟಳು ನೆನ್ನೆಯ ಚಿಂತೆಗಳು ನಾಳೆಗೆ ಬಿಟ್ಟು ಮರುಳಿನ ಮೇಲೆ ಬರೆದ ಅವನ ಹೆಸರಿಗೆ ಸಿಹಿ ಮುತ್ತೊಂದನಿಟ್ಟು.

- ಚುಕ್ಕಿ

06 Mar 2023, 02:42 pm

ನಾನೇಕೆ ಹೀಗಾದೆ...

ತಂಗಾಳಿ..
ತಂಪುಕೊಡಲಿಲ್ಲ ತನುವಿಗೆ..
ಇಂಪಾದ ಹಾಡು
ಹಿತ ಕೊಡಲಿಲ್ಲ ಭಾವಕೆ..
ನಾನೇಕೆ ಹೀಗಾದೆ..
ಎಲ್ಲೇ ನೋಡಿದರು ನಿನ್ನನ್ನೆ ಕಂಡಂತಾಗಿದೆ..
ಎಲ್ಲಾ ಕರೆಗಳು ನಿನ್ನದೆ ಅನಿಸುತಿದೆ...
ನಿನ್ನ ಸನಿಹ ಬೇಕಿದೆ ಗೆಳೆಯ..
ಅಪ್ಪಿಬಿಡಲೆ ಒಮ್ಮೆ....
ನಿನ್ನ ಅನುಮತಿ ಕೇಳದೇ.....
ಸಣ್ಣ ಮುತ್ತ ನೀಡಲೆ...
ಹೇಳದೆ ನಿನಗೆ...

ತನುಮನಸು✍️

- Tanuja.K

05 Mar 2023, 10:50 pm

ಪ್ರೀತಿಯಾಗಿದೆ ನಿನ್ನ ಮೇಲೆ

ಹೇಳಿ ಬಿಡಲೇ ಒಮ್ಮೆ..
ನನಗೆ ಪ್ರೀತಿಯಾಗಿದೆ ಎಂದು..
ಕೂಗಿ ಕರೆಯಲೇ..
ನಿನ್ನ ಹೆಸರ ಮನದುಂಬಿ ಇಂದು..
ಜೋಪಾದವಾಗಿದ್ದ ಹೃದಯ ಜಾರುತಿದೆ ನಿನ್ನೆಡೆಗೆ..
ಈ ಅನುಭವ ಹೊಸದು ನನಗೆ..
ಬರಿ ತನುವಾಗಿದ್ದೆ ನಾನು
ನಿನ್ನ ಪರಿಚಯದ ಮೊದಲಿಗೆ..
ಮನಸ್ಸೆಂದೂ ಇರಲಿಲ್ಲ
ಯಾರ ಮೇಲೂ ಹೀಗೆ..
ನಿನ್ನ ದಾರಿಯ ಕಾಯುತಿರುವೆ ನಾನು..
ಬರುವೆಯ ಜೊತೆಗೆ ನೆರಳಂತೆ ನೀನು...



ತನುಮನಸು✍️

- Tanuja.K

05 Mar 2023, 10:36 pm