ಕತ್ತಲು ಬೆಳಕೊಳಗಿದೆ,
ಬೆಳಕು ಕತ್ತಲೊಳಗಿದೆ,
ಕತ್ತಲು ಬಂದಾಗ ಬೆಳಕು ಮರೆಯಾಗಿದೆ,
ಬೆಳಕು ಬಂದಾಗ ಕತ್ತಲು ಮರೆಯಾಗಿದೆ,
ಇರುವ ರವಿ ಅಲ್ಲೇ ಇರುವಲ್ಲೇ,
ಅಲೆವ ಶಶಿ ರವಿ ಇರುವಲ್ಲಿ,
ಹಗಲಲ್ಲೂ ಶಶಿ ಇರುವ ಮರೆಯಾಗಿರುವ,
ಇರುಳಲ್ಲೂ ರವಿ ಇರುವ ಮರೆಯಾಗಿರುವ,
ಹಗಲಿರುಳ ತಿರುಳ ತಿಳಿಯೋ ನೀ ದುರುಳ,
ತಿಳಿದವರಿಲ್ಲಿ ಇಹರು ವಿರಳಾತಿ ವಿರಳ,
ಅವರಿವರ ಸೊಲ್ಲ ಬಲ್ಲವರಿಲ್ಲಿ ಬಹಳ,
ಆದರವರದೇ ಅಂತರಾಳ ತಿಳಿಯದವರೇ ಹೇರಳ,
ನಿನ್ನಂತರಂಗದಲಿ ಕಾರ್ಮೋಡ ಕವಿದಿದೆ,
ಅದೇ ಅಂತರಂಗದಲಿ ದಿವ್ಯ ಜ್ಯೋತಿ ಬೆಳಗುತಿದೆ,
ಅಂತರಂಗ ಬಹಿರಂಗ ಅದು ಬೇರಿಲ್ಲ ನೀ ಕೇಳ,
ನಿನ್ನ ಮನದ ಮಾತು, ಅದ ಒಮ್ಮೆ ನೀ ಕೇಳ.....
ಸರಳತೆಯ ಸಾಹುಕಾರ,
ನಗು ಮುಖದ ರಾಜಕುಮಾರ
ಕಲಿಯುಗದ ಕರ್ಣಕುವರ,
ರಾಜ್ಯ ಕಂಡ ಅತ್ಯುನ್ನತ ವ್ಯಕ್ತಿತ್ವದ ಸರದಾರ
ಕರುನಾಡ ಪ್ರತಿ ಹೃದಯದಲ್ಲೂ ಮಾಡುತ್ತಿರುವಿರಿ ರಾಯಭಾರ,
ನಿಮ್ಮ ಪ್ರತಿ ಹೆಜ್ಜೆಗಳಲ್ಲು ಮಾಡಿದ್ದಿರಿ ಮಾನವೀಯತೆಯ ಪ್ರಚಾರ,
ಮನದೆಲ್ಲೇಡೆ ತುಂಬಿಕೊಂಡಿದ್ದೀರಿ" ಕೆಟ್ಟವರಿಗು ಒಳ್ಳೆಯದನ್ನೇ ಬಯಸೋಣ"ಎಂಬ ಒಳ್ಳೆ ವಿಚಾರ
ಎಂದಿಗೂ ಬಯಸಲಿಲ್ಲ ಆಡಂಬರ,
ನಗು ನಗುತ್ತಲೇ ಕರುನಾಡ ಹೃದಯದಲ್ಲಿ ದೇವರಾದ ಧೀರ,
ನಮ್ಮಿ *' ಡಾ. ಪುನೀತ್ ರಾಜಕುಮಾರ".*
ಸದಾ ಕಾಡುವ ನಗುವಿನ ಒಡೆಯ
ಮನಸ್ಸು ಒಪ್ಪುತ್ತಿಲ್ಲ ನಿಮ್ಮ ಅಗಲಿಕೆಯ ವಿಷಯ.
ಮರೆಯಲಾಗದ ನಿಮ್ಮ ಅಭಿನಯ
ಜಗತ್ತು ಕಂಡ ಅಧ್ಬುತ ವಿಸ್ಮಯ.
ಬಾಡಿ ಹೋಹಿತು ಬೆಟ್ಟದ ಹೂವು
ಮುಗಿಲು ಮುಟ್ಟಿದೆ ಅಭಿಮನಿಗಳ
ನೋವು.
ನಿಮ್ಮ ಮೇಲಿದೆ ಜನರ ಒಲವು
ಯಾಕೆ ಕೊಡಲ್ಲಿಲ್ಲ ಸಾವಿನ ಸುಳಿವು??
ನೊಂದ ಮನಕೆ ನೀವೇ ಹಣತೆ
ಎಲ್ಲರ ಹೃದಯದಲ್ಲೂ ಕುಳಿತೆ
ಮರೆಯಲಾಗದ ನಿಮ್ಮ ಮಾತುಕತೆ
ನೀವಿಲ್ಲದೇ ಆಗಿದೆ ಅಪರ ಚಿಂತೆ....
ಜನುಮ ದಿನದ ಶುಭಾಶಯಗಳು ಪ್ರೀತಿಯ ಅಪ್ಪು ಸರ್. ❤️
ತಂಪಾದ ತಂಗಳಿ ಬೀಸುತ್ತಿತ್ತು.
ಹೊನಲು ಬೆಳಕು ಚಿಮ್ಮುತ್ತಿತ್ತು.
ಮೌನಿಯಾಗಿ ಕುಳಿತ್ತಿದ್ದೆ
ಪ್ರೆಯಸಿಯ ದಾರಿ ಕಾಯುತ್ತಿದ್ದೆ.
ಸೂರ್ಯ ಸರಿಯುವ ಹೊತ್ತಲಿ
ನನ್ನವಳು ಬರುತ್ತಿದಳು ಮಬ್ಬಲಿ
ಚಿಕ್ಕ ಕಾಲು ದಾರಿಯಲಿ
ನನ್ನ ನೋಡುವ ಸಂಭ್ರಮದಲಿ.
ಎಲ್ಲೂ ನೋಡದ ಜಾಗವಿದು
ಎಂದು ಕಾಣದ ಕನಸಿದು
ಸುಮ್ಮನೆ ಎನೂ ತಳಮಳ
ಮನಸಲಿ ಎನೋ ಕೋಲಾಹಲ.
ಕಾಯಿಸಿ, ಸತಾಯಿಸುವ
ಆಸೆ ಏಕೆ ನಿನ್ನಲಿ..
ಒಲಿದರೂ, ಮುನಿದರೂ
ನೀನೇ ಬೇಕು ನನಗಿಲ್ಲಿ..
ಸಿಹಿ ಕಹಿಗಳು ಏನೇ ಬರಲಿ..
ನೋವು, ನಲಿವಿಗೂ ನೀನೊಬ್ಬ ಸಾಕಿಲ್ಲಿ..
ಮನಸ್ಥಿತಿ, ಪರಿಸ್ಥಿತಿಗಳಲಿ ಅಂತರ ನೂರು...
ಕಾರ್ಯ, ಕಾರಣವಿಲ್ಲ ಪ್ರೀತಿ ಹುಟ್ಟಲು...
ಕಣ್ಣಿನ ರೆಪ್ಪೆಯಂತೆ ಜೊತೆ ಇರುವೆ...
ಹಸ್ತದ ರೇಖೆಯಾಗಿ ನಿನ್ನ ಸೇರುವೆ...
ಹೇ ನನ್ನ ಒಲವೆ.... ನಿನ್ನೇ ಪ್ರೀತಿಸುವೆ...
ಸಾಧನೆಯ ಹಾದಿಯಲಿ
ಸಹನೆ ಸದಾಯಿರಲಿ
ಗುರಿ ಮುಟ್ಟುವರೆಗೂ ನಿಲ್ಲದೆ
ಆತ್ಮ ವಿಶ್ವಾಸದಿ ಸಾಗು ನೀ ಮರೆಯದೆ
ಕಷ್ಟಗಳು ಬಂದರೆ ಸಹಿಸು
ಅನಂತರ ಪಡೆಯುವೆ ನೀ ಯಶಸ್ಸು
ಇದುವೇ ಜೀವನದ ಹುಮ್ಮಸ್ಸು
ಇದನ್ನರಿತು ಸಂತಸದಿ ಜೀವಿಸು.
ಯೋಗಿತ ಟಿ.ಎನ್.