ಕೂಗಿದರು ಕೆಳದಷ್ಟು ದೂರ ಸಾಗಿರುವೇ
ಸಂತೋಷವಾಗಿದ್ದ ಮನಸಲ್ಲಿ ನೋವು
ತುಂಬಿ ಹೋಗಿರುವೆ
ನೀನು ದೂರವಾಗಿದ್ದರೂ ನಿನ್ನ ನೆನಪುಗಳಿಂದ
ನನ್ನ ಮನಕ್ಕೆ ಹತ್ತಿರವಾಗಿರುವೆ
ಮತ್ತೊಮ್ಮೆ ಕೈ ಚಾಚಿ ಬೇಡುತ್ತಿರುವೇನು
ಮತ್ತೊಮ್ಮೆ ಬಿಟ್ಟಿರುವ ಕೈ ಹಿಡಿದು ನನ್ನ
ಜೊತೆ ಬರುವೆಯಾ ಗೆಳತಿಯಾಗಿ...
ಎಮ್.ಎಸ್.ಭೋವಿ...✍️
.
..
ಬಿಳಿ ಕೆನ್ನೆಯ ಗುಳಿ ನಗೆಯ ಓ ಬಾಲೆ,
ಮನದ ತುಂಬೆಲ್ಲಾ ಮೂಡುತಿದೆ
ನಿನ್ನದೇ ಖಾಯಿಲೆ...!
ನಿನ್ನ ಪ್ರತೀ ನಡಿಗೆಯ ಮುಂದೆ ಹೂವ ಹಾಸಲೇ,
ಸಾಗುವ ಹೆಜ್ಜೆಯ ಹಿಂದೆಲ್ಲಾ
ಪನ್ನೀರ ಚೆಲ್ಲಲೇ...!
ನನ್ನೆದೆಯ ಪುಟದಲ್ಲಿ ನಿನ್ನ ಪಠವೊಂದ ಚಿತ್ರೀಸಲೇ,
ನನ್ನೀ ಮುಗ್ಧ ಪ್ರೀತಿಗೆ ನಿನ್ನದೇ ಕರೆಯೋಲೆ...!
ಎಮ್.ಎಸ್.ಭೋವಿ...✍️
ಎಲ್ಲಿಯ ಬಂಧ, ಎಲ್ಲಿಯ ಬಾಂಧವ್ಯದಾ ಕಾಂತ,
ಬಂಧ ಬಾಂಧವ್ಯಕೂ ಮಿಗಿಲಾದುದು ಏಕಾಂತದಾ ಹಂತ,
ಬಂಧ ಬಾಂಧವ್ಯದ ಬಂಧನವಳಿದ ಮೇಲೆ,
ತೋರದಿಹುದೆ ಏಕಾಂತವದು ತನ್ನ ಕರಿ ಛಾಯೆಯಾ ಲೀಲೆ?,
ಏಕಾಂತವಳಿದು ಬಂಧದ ಬಂಧನಕ್ಕೆ ಸಿಲುಕಿದ ಮೇಲೂ,
ಸಮಯ ಸಾಲದು ಏಕಾಂತವದು ಮರಳಿ ತನ್ನ ಜಾಗಕ್ಕೆ ಬರಲು,
ಅನಿಸಬಹುದು ಇದು ಬರಿಯ ಸೊಲ್ಲು,
ಎಲ್ಲರಿಗೂ ಸುಲಭವಲ್ಲ ಈ ಕವನ ಅರ್ಥೈಸಲು,
ಏಕೆಂದರಿದರ ಸಂಪೂರ್ಣ ಭಾವ, ಅರಿತು ಬರೆದವನ ಮನಕೆ ಮೀಸಲು.....
ಕಾವಲು ಹಾದಿಯಲ್ಲಿ ಕನವರಿಸ
ನಿಂತ ನೆನಪುಗಳ ನರ್ತನ. ..
ಇರುಳ ಅಂಗಳದ ನಿದಿರೆಗೆ
ಅಪ್ಪಲಾಗದೆ ನೆನಪಿಗೊಂದರಂತೆ
ಕಣ್ಣ ನೀರ ಹನಿಗಳ ಅರ್ಪಣ!!
ಭಾವನೆಗಳು ಬಣ್ಣದ ಮಾತುಗಳಡಿ
ತಗಡಿನ ತುತ್ತೂರಿಯಂತೆ"
ಉಸಿರ ಬಿಗಿ ಉದಿದಾಗಲಷ್ಟೆ
ಹೊರ ಬಂದ ಧ್ವನಿ ಕಿವಿಗಳನಪ್ಪಿ
ಸೇಳೆಯ ಹೊರಟದ್ದು
ಅದೊಂದು ಸದ್ದಿನ ಸಿಹಿ ಸಿಂಚನ::
ಭಾವಿಸಿ ಕೊಂಡತೆ ಇಲ್ಲಿ ಈ
ಭಾವನೆಗಳ ಕಥನ....
ಭಾವನೆಗಳಾಗದಿರಲಿ ಕಾಲಹರಣಕೊಂದು
ಬಳಸುವ ಸಾಧನ. ...@ ವಿಶ್ವ ರಾಜ್..