Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನವೇ ಮಾತು ಆದಾಗ ?.... ಸುಧಾ ಆರ್ ಬಳಿಗೇರ್

ಹೂ ಮೌನವಾದಗ ಕೇಳುವುದು ದುಂಬಿಯ
ಹಾಡಿನ ಸ್ವರ ....
ಪುಸ್ತಕವು ಮೌನವಾದಗ ಲೇಖನೆಯ ಪದಗಳದೆ
ಇನ್ನಿಲದ ಅಬ್ಬರ ....

ಮೌನವೇ ಮಾತು ಆದಾಗ....

ರೆಪ್ಪೆಗಳು ಮೌನವಾದಗ ಒಳಗಿರೋ ನಿನ್ನ
ಬಿಂಬವೆ ಅದಕ್ಕೆ ಉತ್ತರ....
ಮಾತು ಮೌನವಾದಗ ಹೃದಯವು
ಪಿಸುಗುಟ್ಟುತ್ತಿದೆ ನೀ ಇರಲು ನನ್ನ ಹತ್ತಿರ....

ಮೌನವು ಮಾತು ಆದಾಗ....

ಸುಧಾ ಆರ್ ಬಳಿಗೇರ್ .....

- ಸುಧಾ ಆರ್ ಬಳಿಗೇರ

24 May 2023, 12:01 am

ನೀನೆಂದರೆ ಪ್ರೀತಿ ತಾನೆ ..... ಸುಧಾ ಆರ್ ಬಳಿಗೇರ್

ಮೊದಲ ಮಾತು ಮರೆತಿಲ್ಲ ಕೇಳು...
ಮೀಡಿದ ಪ್ರೀತಿ ನೆನಪಾಯಿತ್ತು ಹಗಲು ಇರುಳು...
ಮರೆತೇನೆಲ್ಲ ನನ್ನ ಮಾತು ಎದುರಲ್ಲಿ ನೀ ಇರಲು...

ನೀನೆಂದರೆ ಪ್ರೀತಿ ತಾನೆ.....

ಕಡೆದೇ ಶಿಲೆಯೊಂದ ನನ್ನೊಳಗೆ ನನ್ನತೇಮುಡಿರಲು...
ಉಸಿರಾಡೋ ಆಸೆ ಅದಕೇ ಚುಂಬಿಸಿ
ನೀಡು ತಾ ತನ್ನವುಸಿರಮೊದಲು...
ಕಣ್ಣೊಳಗೆ ಸದ ನಿನ್ನದೆ ಪ್ರತಿಬಿಂಬ ತುಂಬಿರಲು...

ನೀನೆಂದರೆ ಪ್ರೀತಿ ತಾನೆ ....


ನೀನೆಂದರೆ ಪ್ರೀತಿ ತಾನೆ
ಸುಧಾ ಆರ್ ಬಳಿಗೇರ್.....




ನೀನೆಂದರೆ ಪ್ರೀತಿ ತಾನೆ.....

- ಸುಧಾ ಆರ್ ಬಳಿಗೇರ

23 May 2023, 11:16 pm

ಇರುವೆ_ನೀನಿರುವೆ_ ನನ್ನಿರುವಿನಾ_ಥರವೇ

ಕರಿಯಾ ಇರುವೆ ನಿನ್ನ ಕರೆಯುತಿರುವೆ
ಮರೆಯಬೇಡೆಂದು ನೀ ಹೇಳುತಿರುವೆ

ಎಲ್ಲಿ ಅವಿತು ಕುಳಿತಿರುವೆ
ಎಲ್ಲಿಂದ ನೀನು ಬರುತಿರುವೆ

ದೃಢ ಸಂಕಲ್ಪದಿ ನೀ ಮೆರೆಯುತಿರುವೆ
ಸದೃಢ ಮನದಿ ನೀ ಮೇಲೇರುತಿರುವೆ

ಬವಣೆ ಮೆಟ್ಟಿ ನೀ ಕಷ್ಟಗಳನ್ನಟ್ಟುತ್ತಿರುವೆ
ನವಣೆ ಸಕ್ಕರೆ ನೀ ಮೆಲ್ಲುತ್ತಿರುವೆ

ಕಷ್ಟಕಾಲಕ್ಕೆ ನೀ ಕೂಡಿಡುತ್ತಿರುವೆ
ನಷ್ಟವಾಗದಂತೆ ನೀ ಜೀವ ತಡೆಯುತ್ತಿರುವೆ

ಅಷ್ಟೂ ಭಾರವನ್ನ ನೀ ಹೊತ್ತಿರುವೆ
ಸ್ಪಷ್ಟ ಬದುಕಿಗೆ ನೀ ಮಾದರಿಯಾಗಿರುವೆ

_ಶಶಿಜಿತ್



- m Jithendra_ಶಶಿಜಿತ್

23 May 2023, 09:44 pm

ನಿನ್ನೆಡೆಗೆ

ನಿನ್ನ ನೆನೆದಷ್ಟು ಮುಗುಳ್ನಗುವು
ನಕ್ಕಷ್ಟು ಸುಂದರ ಈ ಜಗವು
ನೆನಪುಗಳ ತೊಟ್ಟಿಲಲಿ
ನಮ್ಮೊಲವಿಗೆ ಜೋಜೋ ಲಾಲಿ....

ನಿನ್ನೆಡೆಗೆ ನಡೆದಷ್ಟು ದೂರ
ಹೂವಾಯ್ತು ಹೃದಯ ಪೂರ
ಮನವ ತಬ್ಬಿರಲು ಪ್ರೀತಿ
ಏಳುಬೀಳೆಲ್ಲ ಸೊನ್ನೆಯ ರೀತಿ.....

- ಶ್ರೀಕಾವ್ಯ

22 May 2023, 10:00 pm

ಸಾವಿರದ ಜನುಮವ ದಾಟಿ



ಸಾವಿರ ಜನುಮವ ದಾಟಿ ಬಂದೆ ನಾ ನಿನ್ನಯ ನೋಡಲು

ಸಾಕಾರವಾಯ್ತು ಸೇರಿದ ಮೇಲೆ ಕಂಡೆನು ನಾ ನಿನ್ನಯ ಒಡಲು

ಆಕಾರವಾದೆ ಅವಕಾಶವಾದೆ ಆಧಾರವಾದೆ ಬಾಳನು ಬೆಳಗಲು

ಸಾವಕಾಶದಲಿ ಭಾವಾಕಾಶದಲಿ ಪ್ರತಿಕ್ಷಣದಲಿ ನಿನ್ನಯ ಕಾಣಲು

ಉತ್ತಮವಾಯ್ತು ಉತ್ತರವಾಯ್ತು ಬಾಳಿದು ವರ ಬೆಳಗಲು

ಸುತ್ತಲೂ ಮತ್ತೇ ಕವಿದಿದೆ ಮೋಡ ಬಾಯಾರಿದ ಭುವಿಗೆ ಬರಲು

_ಶಶಿಜಿತ್

- m Jithendra_ಶಶಿಜಿತ್

21 May 2023, 11:02 pm

ನನ್ನನ್ನೇ ಮರೆತ ಆ ಕ್ಷಣ..

ಕಣ್ಣಲ್ಲಿ ಕಣ್ಣಿಟ್ಟಾಕ್ಷಣ..
ಮನದಲಿ ನಿಂತೆ ನೀನಾದಿನ..
ಅಪ್ಪಿತಪ್ಪಿಯೂ ರೆಪ್ಪೆ ಮುಚ್ಚ ಬಾರದೆಂದಿತು ಮನ..
ನನ್ನನ್ನೇ ಮರೆತ ಆ ಕ್ಷಣ....
ಮೋಡದ ಮರೆಯಲಿ ಚಂದಿರ ನೋಡುತ್ತಿರುವನು ನಮ್ಮನ್ನ...
ನಾಚಿಕೆಯಲಿ ಅಪ್ಪಿದೆ ನಾ ನಿನ್ನನ್ನ..
ಮನದಲಿ ಆಸೆಗಳು ಗರಿಗೆದರಿತು ಆಗ...
ನಗುತ ನೀ ನನ್ನ ಕರೆದಾಗ..
ನೀ ಎದುರಿಗೆ ಬಂದರೆ ತಳಮಳ ಮನದಲಿ..
ಭಯ ನಡುಕ ತನುವಿನಲಿ....


ತನುಮನಸು ✍️

- Tanuja.K

21 May 2023, 06:10 pm

ಸ್ನೇಹಕ್ಕೆ ಪ್ರೀತಿಯೆಂಬ ಲೇಪವೇಕೆ...??

ಸ್ನೇಹವೆಂದರೆ...
ಅದು ಹಾಲು ಜೇನಿನ ಸಮ್ಮಿಲನ..
ಆಕರ್ಷಣೆ ತೊರೆದು ಆರೈಕೆಗಳಿಂದ ತುಂಬಿದ ಮನ..
ಎಲ್ಲಿದ್ದರೂ ಸಂತೋಷವಾಗಿರು ಎಂಬ ಭಾವ..
ನೀ ನನಗೆ ಬೇಕೆಂಬ ಸ್ವಾರ್ಥ ದೂರ..
ಈ ಸ್ನೇಹಕ್ಕೆ ಪ್ರೀತಿಯೆಂಬ ಲೇಪವೇಕೆ..??
ಈ ಸ್ನೇಹವು ಕೊನೆ ಇಲ್ಲದ ಕಡಲು..
ಅನುಭವಿಸಿ ನೋಡಿದು ನಿಸ್ವಾರ್ಥ ಒಲವು..


ತನುಮನಸು ✍️

- Tanuja.K

21 May 2023, 06:10 pm

ಪ್ರಶ್ನೆಗಳೇ ನನ್ನಲ್ಲಿ ಉಳಿದಿದೆ..

ನಿನ್ನ ಮೇಲಿರುವುದು ಸ್ನೇಹವೋ, ಪ್ರೀತಿಯೋ ತಿಳಿಯುತ್ತಿಲ್ಲ..
ನಿನ್ನ ಜೊತೆಗೆ ಬದುಕಬೇಕೆಂಬ ಹಂಬಲ ಹೆಚ್ಚುತ್ತಿದೆಯಲ್ಲ..
ಪ್ರೀತಿಯ ಕನಸಿಗೆ ಕಾರಣ ನೀನು..
ನಿನ್ನನ್ನೇ ಅನುಕರಿಸಿ ಕಾಯುವೆ ನಾನು..
ಹೆಜ್ಜೆ ಹೆಜ್ಜೆಗೂ ಕಾಯುವಿಕೆ..
ಕಾರಣವಿಲ್ಲ ಒಲವಿನಾರಂಭಕೆ..
ಎಲ್ಲಕು ಉತ್ತರ ನಿನ್ನ ಬಳಿಯಿದೆ..
ಬರಿ ಪ್ರಶ್ನೆಗಳೇ ನನ್ನಲ್ಲಿ ಉಳಿದಿದೆ..


ತನುಮನಸು ✍️

- Tanuja.K

21 May 2023, 11:43 am

ಸೂರ್ಯ _ವರ _ಅದ್ಭುತ

ಮೂಡಿದ ಸೂರ್ಯಾ ಆಗಸದಿಂದ ಬೆಳಕಿನ ಕಿರಣಗಳ ಸೂಸುತ್ತಾ

ಹಾಡಿದ ಹಕ್ಕಿಯ ಚಲನವಲನಗಳನು ಬಿಡದಲೇ ತಾ ಗಮನಿಸುತಾ

ಕೂಡಿದ ಭೂಮಿಯ ಜೀವ ಜೀವಿಗಳ ಪೋಷಿಸಲು ತಾ ಅನವರತ

ಮಾಡಿದ ಅದ್ಭುತ ಸೃಷ್ಟಿಗಳನ್ನೆಲ್ಲ ವರ ದೇವನ ಬಹು ನೆನೆಯುತ್ತ

ಬಾಡಿದ ಗಿಡಗಳ ನೋಡುತ ನಿಲ್ಲದೆ ಕರೆದ ಮಳೆ ಮೋಡಗಳ ಗಮನಿಸುತ

ನೀಡಿದ ಈ ಪರಿ ವರ ಭುವಿಮನುಜರಿಗೆ ಬೇಡಿದವರನು ಬಿಡದೆ ಸಲಹುತ್ತಾ

_ಶಶಿಜಿತ್

- m Jithendra_ಶಶಿಜಿತ್

21 May 2023, 09:32 am

ಹೇಗೆ ಹೇಳಲಿ ಇನ್ನೂ ವಿವರಿಸಿ ನಿನ್ನ ಬಗ್ಗೆ...

ನಿನ್ನ ಮೇಲಿನ ಪ್ರೇಮ ಅನ್ನೋದು
ಹೇಗೆ? ಯಾಕೆ? ಎಲ್ಲಿ?
ಹುಟ್ಟಿತು ಅನ್ನೋ ಅರವಿಲ್ಲ ನಂಗೆ;
ನೀ ಜೊತೆಗಿದ್ದರು, ಇಲ್ಲದೆ ಇದ್ರು
ನೀನು ನನ್ನ ಬದುಕಿನ
ಒಂದು ಭಾಗ ಅಷ್ಟೆ;
ಬಹುಶಃ ಅದಕ್ಕೇ
ಅದಷ್ಟೇ ದಿಕ್ಕರಿಸಿ ದೂರಾದರೂ
ಮತ್ತೆ ಮತ್ತೆ ಈ ಮಳೆಗಾಲದ
ನದಿ ಮತ್ತೆ ಸಾಗರ ಸೇರುವ ಹಾಗೆ
ನೀ ನನ್ನ ಸೇರೋದು..!!
ಎಮ್.ಎಸ್.ಭೋವಿ...✍️


- mani_s_bhovi

20 May 2023, 11:46 pm