Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಪ್ರೀತಿಯ ಬಯಕೆ.. ❤️

ನಗು ಮೊಗದ ಚೆಲುವನ ಕಾಣಲು
ಹಂಬಲಿಸುತಿದೆ ನನ್ನ ನಯನಗಳು
ಕುಡಿನೋಟವ ಬೀರು ಒಮ್ಮೆಯಾದರೂ...

ಕೋಮಲ ಸ್ಪರ್ಶದ ಸುಖವ ಸವಿಯಲು
ನನ್ನ ಒರಟು ಕೈಗಳು ಇಚ್ಛೆಸುತಿವಿ
ಒಮ್ಮೆ ನನ್ನ ಸೋಕಬಾರದೆ..?

ಬದುಕಿನ ಪಯಣವ ನಿನ್ನೊಡನೆ ಸವೆಯಲು
ಕಾತರಗೊoಡಿವೆ ನನ್ನ ಪಾದಗಳು
ಒಮ್ಮೆ ನನ್ನ ಜೊತೆಯಾಗಿ ಸಾಗಬಾರದೆ..?

ಬೆವರಿನ ಕಂಪನು ಸೆಳೆಯಲು
ನನ್ನ ನಾಸಿಕವು ತುಡಿಯುತಿದೆ
ಒಮ್ಮೆ ಘಮ ಸೋಸಬಾರದೆ..?


ಲೀಲಾಜಲವಾಗಿ ನುಡಿವ ಮಾತನ್ನು ಕೇಳಲು
ಪರಿತಪಿಸುತಿವೆ ನನ್ನ ಕರ್ಣಗಳು
ಒಮ್ಮೆ ಮಾತನಾಡಬಾರದೆ..?

ಮನದ ತುಂಬ ಮೂಡಿವೆ ನಿನ್ನ ಸೇರುವ ಬಯಕೆ
ಬಾಳಿಬಿಡು ಒಮ್ಮೆ ನನ್ನ ಬದುಕಿನ ಜೊತೆಗೆ.....

- bhagya g s

29 May 2023, 11:36 pm

ಹಸಿರಾದ ನನ್ನ ಮನಸ್ಸು.... ಸುಧಾ ಆರ್ ಬಳಿಗೇರ್

ಕಣ್ತುಂಬ ನೀನೇ ತುಂಬಿರಲು
ಬೇರೇನು ನೋಡಲಿ .......
ಮನದಲ್ಲಿ ನೀನೇ ಕುಳಿತಿರಲು .....
ಬೇರೆ ಯಾರನ್ನು ಬೇಡಲಿ......

ಪದಗಳೇಲವು ನೀನಾಗಿರುವೆ
ಏನೆಂದು ಮತ್ತೆ ಬರೆಯಲಿ......
ನಿತ್ಯವು ನಿನ್ನ ನಗುವು ಹೂವಾಗಿರುವಾಗ
ನಾನ್ಯಾಕೆ ಬಾಡೋ ಹೂ ಮುಡಿಯಲಿ......


ಬಂಗಾರದ ಮನಸ್ಸು ನಿನ್ನದಿರುವಾಗ
ಕದ್ದುಹೊಯ್ಯೋ ವಡವೆ ನಾನೇಕೆ ತೊಡಲಿ.....
ದಿನವೂ ಖುಷಿಯ ಅಲೆಯು ಏಳುವಾಗ
ನಾನೇಕೆ ಕಣ್ಣೀರ ಬಿರುಗಾಳಿ ಕರೆಯಲಿ.....

ಹಸಿರಾದ ನನ್ನ ಮನಸ್ಸು ಸಾದ ನಿನ್ನಲಿ.....

ಸುಧಾ ಆರ್ ಬಳಿಗೇರ್ .....


- ಸುಧಾ ಆರ್ ಬಳಿಗೇರ

29 May 2023, 12:47 pm

ಕೇಳೋ ಕೃಷ್ಣಯ್ಯ ಈ ಬಾಳು ಸಾಕೖಯಾ ....

ಹರಿಯೇ ನಿನ್ನ ನಾಮ ಸ್ಮರಣೆ ಇರದ ದಿನವು.... ನನಗೆ ಬ್ಯಾಡಯ್ಯ .....
ನಿನ್ನಲೋಂದು ಹರಕೆ ಈಡುವೇ ಕೇಳೋ ಕೃಷ್ಣಯ್ಯ....

ಕೇಳೋ ಕೃಷ್ಣಯ್ಯ.....

ಮುರುದಿನದ ಬಾಳ ಸಂತೆ ನಮಗೆ ಕೊಟ್ಟೀಯಾ
ಅಲ್ಲಿ ಹೊರಗೂ ನೀನೇ ಒಳಗೂ ನೀನೇ.....
ನನ್ನ ನಡುವೆ ಇಟ್ಟಿಯ....

ಕೇಳೋ ಕೃಷ್ಣಯ್ಯ......

ನಿನ್ನ ಸತೀಯ ಹಾಗೆ ನಾನು ತುಳಸಿಮಾಲೆ ಕೊಟ್ಟೇನಲ್ಲ .....
ದಳ ದಳವ ನೋಡೈಯಾ ಭವ ಬಂಧ ಬಿಡಿಸೖಯ....

ಕೇಳೋ ಕೃಷ್ಣಯ್ಯ.....

ಮುಕ್ತಿ ನೀಡೋ ಮುಕುಂದ ನಿನ್ನ......
ಕಣ್ಣಿರ ಹರಿಸಿ ಪಾದ ತೊಳೆದೇನಾ
ಮೋಕ್ಷ ನೀಡಿ ಬಾರದಂತೆ ತಡಿಯೋ ಜನುಮಾನ.....ಕೇಳೋ ನನ್ನ ಈ ಹರಕೇನ .....
ಕೇಳೋ ಕೃಷ್ಣಯ್ಯ .... ......

ಸುಧಾ ಆರ್ ಬಳಿಗೇರ್



- ಸುಧಾ ಆರ್ ಬಳಿಗೇರ

29 May 2023, 10:53 am

ಮೂರು ಗಂಟು

ಎಲ್ಲೋ ಹುಟ್ಟಿ ಬೆಳೆದ ಜೀವಗಳು..
ಮದುವೆ ಎಂಬ ನಂಟಿಗೆ ಬೆಸೆವ ಭಾವಗಳು..
ಮೂರು ಗಂಟಿನ ಬಂಧದ ಆತ್ಮೀಯತೆ..
ಏಳು ಹೆಜ್ಜೆಗಳ ಇಡುತ ಜೊತೆ ಜೊತೆ..
ಜನ್ಮ ಜನ್ಮಕೂ ಸೇರುವ ಭರವಸೆಯ ಕಡೆಗೆ..
ಸತಿ-ಪತಿಗಳಾಗುವ ಸಂಬಂಧ, ಹೆಸರಿನ ಬೆಸುಗೆ...
ಸಾಗುವುದು ಬಾಳ ಪಯಣ..
ನೋವು ನಲಿವಿನ ಜೀವನ..
ಪ್ರೀತಿ ಚಿರವಾಗಿರಲಿ ಸದಾ ಕಾಲ...
ಅಗ್ನಿ ಸಾಕ್ಷಿಯಲಿ ಕಟ್ಟುವ ಮಾಂಗಲ್ಯ...

ತನುಮನಸು ✍️

- Tanuja.K

27 May 2023, 11:59 pm

ಚಿತೆಯಲು ಜೊತೆಯಾಗುವೆ..

ನಿನ್ನ ಬಿಸಿ ಉಸಿರು ನನ್ನ ತಾಕಲು
ಮರೆವೆ ನನ್ನನ್ನೇ, ನೀ ಸನಿಹವಿರಲು..
ಎಂಥ ನಿರ್ಭಯ ನಿನ್ನ ಅಪ್ಪುಗೆಯಲಿ..
ಏನೋ ನೆಮ್ಮದಿ ನಿನ್ನ ಮಡಿಲಲಿ..
ಆಂತರ್ಯದಲಿ ಅಮ್ಮನಾದೆ..
ಅಕ್ಕರೆಯಲಿ ಅಪ್ಪನಾದೆ..
ಒಮ್ಮೆ ಸಂತೈಸುವ ಸ್ನೇಹಿತನಾದೆ..
ಮತ್ತೊಮ್ಮೆ ಪ್ರೇಮಿಸುವ ಪತಿಯಾದೆ...
ಸರ್ವವು ನೀನೆಯಾಗಿ, ಸರ್ವಸ್ವವೂ ನಿನ್ನದಾಗಿದೆ..
ಬಿಡಿಸಲಾಗದ ಬಂಧ ನಮ್ಮದು, ದೂರಾಗದ ದಾಂಪತ್ಯವದು...
ಕೈಯಹಿಡಿದು ಹೆಜ್ಜೆ ಹಾಕುವೆ ಕೊನೆಯ
ಪಯಣವರೆಗೂ..
ಚಿತೆಯಲು ಜೊತೆಯಾಗುವೆ, ಇನ್ನೇನಿದೆ ಈ ಜಗದಲಿ ನಿನ್ನ ತೊರೆದು..

ತನುಮನಸು ✍️

- Tanuja.K

27 May 2023, 11:18 pm

ಇಂದು ಇರದ ಭಾವ

ಮತ್ತೇ ತರುವೆ ಆಸೆಯ ಬಗೆ ದೂರ ತೀರಕೊಯ್ಯುವೆ

ಇಂದು ಇರದ ರಾತ್ರಿಯ ಕಳೆಯಲಾರೆ ಭಾವವೇ

ಮುಖ ಸುಂದರ ಒಲವಿನ ಬಂಧುರ ಈ ನನ್ನ ಚಂದಿರ

ಸುಖ ಹೊತ್ತಿಹ ಸಖ ನೀನಾಗಿ ಬರುವೆ ಎನಗೆ ಹತ್ತಿರ

ನಿನ್ನೆ ನಾಳೆಗಳನು ನೆನೆಯದೆ ಇಂದು ಬಾ ನಾವೆ ನಾವಾಗುವ

ಗಾಳಿ ಬೆಳಕು ನಾವಾಗಿ ಕೂಡಿ ದಿನಗಳನು ಕಳೆಯುವ

_ಶಶಿಜಿತ್

- m Jithendra_ಶಶಿಜಿತ್

26 May 2023, 10:34 pm

ದೂರವಿರದ ಕಾರಣ

ಮರೆಯದಲೆ ಹಾಡು ನಾ ಮೆಚ್ಚುವ ಹಾಡು
ಮೂರೊಂದಾರಾದರೂ ನಾ ಮರೆಯದ ಹಾಡು

ಹೊಸ ಭಾಷೆ ಹೊಸ ಪ್ರೀತಿ ಹೊಸ ರೀತೀ ಈ ಹರೆಯಕೆ
ಅನುಗಾಲವಿರಲಿ ಈ ನೀತಿ ಈ ಕೃತಿ ಈ ಬಂಧನಕೆ

ದೂರವಿರದ ಕಾರಣದ ಮೂಲವ ಹುಡುಕಲು
ಕಳೆಯಬೇಡ ಕೂಡಿಡು ವೇಳೆಯ ಬಹು ಹೊತ್ತಲು

ಅತಿ ಬೆಸುಗೆಯ ನವಿರಾದ ಭಾವದ ಹೊಸ ಬಗೆ
ಇರಲಿ ಮೊಗ್ಗೆರಡು ನವ ಕುಸುಮಗಳಾಗುವ ಹಲ ಬಗೆ

_ಶಶಿಜಿತ್

- m Jithendra_ಶಶಿಜಿತ್

25 May 2023, 10:11 pm

ಬಣ್ಣ ಬಣ್ಣದ ಮನಸ್ಸುಗಳು ....ಸುಧಾ ಅರ್ ಬಳಿಗೇರ್

ಒಮ್ಮೆ ೧ದು ಹರಳಿದ ಗುಲಾಬಿ .....
ಬಾಡಿದ್ದ ೧ದು ಗುಲಾಬಿಯನ್ನ ಹೀಗೆ ಕೇಳಿತು....
ನಿನ್ನ ಸೌಂದರ್ಯ ನೋಡು ಹೇಗೆ ಬಾಡಿ ಮಣ್ಣಿನ ಬಣ್ಣ ಬಂದಿರುವೆ ......

ಆದರೆ ನನ್ನ ನೋಡು .....ಹೇಗೆ ಯವ್ವನ ತುಂಬಿ ಬಣ್ಣ ಬಣ್ಣದಿಂದ ಹರಳಿರುವೆ ಯಂತ ಪ್ರೇಮಿಯು ನನ್ನ ಸೌಂದರ್ಯಕ್ಕೆ ಸೋಲಲೇಬೇಕು ಎಂದು ಹೇಳಿತು.......

ಹೌದು ನಿಜವೇ ನಿನ್ನ ಸೌಂದರ್ಯಕ್ಕೆ ಯಾರಾದರೂ ಸೋಲಲೇ ಬೇಕು ಎಂದು ಅ ಬಾಡಿದ ಗುಲಾಬಿ ಹೇಳಿತು ....ಹಾಗೆ ೧ದು ಮಾತುಕುಡ ಹೇಳಿತು .....

ಬಾಡಿದ್ದ ಗುಲಾಬಿ.....ಇಂದು ಮುಂಜಾನೆಯೇ ದಾರಿಹೋಕನೊಬ್ಬ ಆಗತಾನೇ ಹರಳಿದ್ದ ನನ್ನ ಚೆಲುವಕಂಡು ನನ್ನ ಕಿತ್ತು ತಾನು ಪೂಜಿಸುವ ದೇವರ ಮುಡಿಯಲ್ಲಿ ಇಟ್ಟು ಪೂಜಿಸಿದ... ೧ದು ದಿನವೆಲ್ಲ ಆ ದೇವರ ಮುಡಿಯಲ್ಲಿ ಇದ್ದು ನನ್ನ ಕರ್ಮವೇಲ್ಲ ಕಳೆಯಿತು ....ಆದ್ದರಿಂದ ನಾನು ಇಂದು ಮುಂಜಾನೆ ಬಾಡಿ ಮತ್ತೆ ಬೇರೊಂದು ಗಿಡದ ಬದಿಯಲ್ಲಿ ಇರುವೆ .... ಈ ಜನುಮದಲ್ಲಿ ಇಷ್ಟು ಸಾಕು ಸಂತೋಷದಿಂದ ಮಣ್ಣಲ್ಲಿ ಮಲಗುವೆ ......

ಬಾಡಿದ ಹೂವಿನ ಮಾತು ಕೇಳಿದ ಹರಳಿದ ಹೂವು
ತಲೆ ಕೆಳಗೆಮಾಡಿ ಸುಮ್ಮನಾಯಿತು ......
ಅದೇ ಸಮಯಕ್ಕೆ ಅಲ್ಲಿಗೆ ಪ್ರೇಮಿಗಳು ಬಂದರು ಹರಳಿದ ಅ ಹೂ ನ ಕಿತ್ತು ....ಪ್ರಿಯತಮ ತನ್ನ ಪ್ರೇಯಸಿಯ ಮೂಡಿಯಲ್ಲಿ ಇಟ್ಟ ಕೋಪದಲ್ಲಿ ಇದ್ದ ಪ್ರೇಯಸಿಯು ಆ ಹೂವನ್ನ ಕಿತ್ತು ಕಾಲಿನಲ್ಲಿ ಹೊಸಕಿದಳು .....

ಕಣ್ಣೀರು ಇಡುತ್ತಾ ಆ ಹರಳಿದ ಹೂವು ನನ್ನ ಕರ್ಮ ಇನ್ನು ಮುಗಿದಿಲ್ಲ ಎಂದು ಆ ಬಾಡಿದ್ದ ಹೂವಿನತ್ತ ನೋಡುತ್ತಾ ಮಣ್ಣು ಸೇರಿತು.......

ಬಣ್ಣ ಬಣ್ಣದ ಮನಸ್ಸುಗಳು.....

ಸುಧಾ ಆರ್ ಬಳಿಗೇರ್ .....



- ಸುಧಾ ಆರ್ ಬಳಿಗೇರ

25 May 2023, 05:25 pm

ನನ್ನವಳು

ಒಲವಿನ ಗೆಳತಿ..
ನೆನಪುಗಳ ಒಡತಿ..
ಸ್ನೇಹಕೆ ಸಂಗಾತಿ..

ಹೃದಯಕೆ ಸನಿಹ ಇವಳು..
ಮನದ ಹಂಬಲಕೆ ಕಾರಣಳು..
ಕವನಗಳಿಗೆ ಸ್ಫೂರ್ತಿ ನನ್ನವಳು...


ಕಾರಣವಿಲ್ಲ ಇವಳ ಪ್ರೀತಿಸಲು..
ಪದಗಳು ಸಾಲದು ಬಣ್ಣಿಸಲು..
ನನ್ನವಳು ಚಂದ ನಾಚಲು..


ನೀಲಿ ಕಣ್ಣ ಚೆಲುವೆ ಅವಳು..
ಮುದ್ದಾದ ಮುಂಗುರುಳು...
ಜಗವನೆ ಮರೆವೆ ಅವಳು ನಗಲು..



ತನುಮನಸು ✍️

- Tanuja.K

25 May 2023, 03:21 pm

ಎಲ್ಲರಂತಲ್ಲ ನನ್ನ ಅಪ್ಪ .... ಸುಧಾ ಆರ್ ಬಳಿಗೇರ್

ಅಪ್ಪ ಎಂದರೆ ಜನುಮಕ್ಕೆ ಕಾರಣ ಮಾತ್ರವಲ್ಲ
ಅಳುವಾಗ ಮಗುವ ಹೆಗಲಲ್ಲಿಹೊತ್ತು ಕುಣಿಸುವುದು ಅಲ್ಲ.....

ನಡೆಯೋದ ಕಲಿವಾಗ ಕೈಹಿಡಿದು ನಡೆಸೋದು ಮಾತ್ರವಲ್ಲ....
ಓದುವ ಸಮಯದಲ್ಲಿ ಗುರುವಾಗಿ ಕಲಿಸೋದು ಹೊಸದೇನು ಅಲ್ಲ.....

ನಾ ಗೆದ್ದು ಬಂದಾಗ ಖುಷಿಯಲ್ಲಿ ಹಿಗ್ಗೋದು ಬೇಕಿಲ್ಲ ...
ನೊಂದ ಸಮಯದಲ್ಲಿ ಕಣ್ಣೀರ ಒರೆಸಿದರು ಸಾಲಲ್ಲ....

ಆದರು ಎಲ್ಲರಂತಲ್ಲ ನನ್ನ ಅಪ್ಪ

ಸುಧಾ ಆರ್ ಬಳಿಗೇರ್......






- ಸುಧಾ ಆರ್ ಬಳಿಗೇರ

24 May 2023, 12:03 am