ಎಲ್ಲಿಯ ಬಂಧ, ಎಲ್ಲಿಯ ಬಾಂಧವ್ಯದಾ ಕಾಂತ,
ಬಂಧ ಬಾಂಧವ್ಯಕೂ ಮಿಗಿಲಾದುದು ಏಕಾಂತದಾ ಹಂತ,
ಬಂಧ ಬಾಂಧವ್ಯದ ಬಂಧನವಳಿದ ಮೇಲೆ,
ತೋರದಿಹುದೆ ಏಕಾಂತವದು ತನ್ನ ಕರಿ ಛಾಯೆಯಾ ಲೀಲೆ?,
ಏಕಾಂತವಳಿದು ಬಂಧದ ಬಂಧನಕ್ಕೆ ಸಿಲುಕಿದ ಮೇಲೂ,
ಸಮಯ ಸಾಲದು ಏಕಾಂತವದು ಮರಳಿ ತನ್ನ ಜಾಗಕ್ಕೆ ಬರಲು,
ಅನಿಸಬಹುದು ಇದು ಬರಿಯ ಸೊಲ್ಲು,
ಎಲ್ಲರಿಗೂ ಸುಲಭವಲ್ಲ ಈ ಕವನ ಅರ್ಥೈಸಲು,
ಏಕೆಂದರಿದರ ಸಂಪೂರ್ಣ ಭಾವ, ಅರಿತು ಬರೆದವನ ಮನಕೆ ಮೀಸಲು.....
ಕಾವಲು ಹಾದಿಯಲ್ಲಿ ಕನವರಿಸ
ನಿಂತ ನೆನಪುಗಳ ನರ್ತನ. ..
ಇರುಳ ಅಂಗಳದ ನಿದಿರೆಗೆ
ಅಪ್ಪಲಾಗದೆ ನೆನಪಿಗೊಂದರಂತೆ
ಕಣ್ಣ ನೀರ ಹನಿಗಳ ಅರ್ಪಣ!!
ಭಾವನೆಗಳು ಬಣ್ಣದ ಮಾತುಗಳಡಿ
ತಗಡಿನ ತುತ್ತೂರಿಯಂತೆ"
ಉಸಿರ ಬಿಗಿ ಉದಿದಾಗಲಷ್ಟೆ
ಹೊರ ಬಂದ ಧ್ವನಿ ಕಿವಿಗಳನಪ್ಪಿ
ಸೇಳೆಯ ಹೊರಟದ್ದು
ಅದೊಂದು ಸದ್ದಿನ ಸಿಹಿ ಸಿಂಚನ::
ಭಾವಿಸಿ ಕೊಂಡತೆ ಇಲ್ಲಿ ಈ
ಭಾವನೆಗಳ ಕಥನ....
ಭಾವನೆಗಳಾಗದಿರಲಿ ಕಾಲಹರಣಕೊಂದು
ಬಳಸುವ ಸಾಧನ. ...@ ವಿಶ್ವ ರಾಜ್..
ಕತ್ತಲು ಬೆಳಕೊಳಗಿದೆ,
ಬೆಳಕು ಕತ್ತಲೊಳಗಿದೆ,
ಕತ್ತಲು ಬಂದಾಗ ಬೆಳಕು ಮರೆಯಾಗಿದೆ,
ಬೆಳಕು ಬಂದಾಗ ಕತ್ತಲು ಮರೆಯಾಗಿದೆ,
ಇರುವ ರವಿ ಅಲ್ಲೇ ಇರುವಲ್ಲೇ,
ಅಲೆವ ಶಶಿ ರವಿ ಇರುವಲ್ಲಿ,
ಹಗಲಲ್ಲೂ ಶಶಿ ಇರುವ ಮರೆಯಾಗಿರುವ,
ಇರುಳಲ್ಲೂ ರವಿ ಇರುವ ಮರೆಯಾಗಿರುವ,
ಹಗಲಿರುಳ ತಿರುಳ ತಿಳಿಯೋ ನೀ ದುರುಳ,
ತಿಳಿದವರಿಲ್ಲಿ ಇಹರು ವಿರಳಾತಿ ವಿರಳ,
ಅವರಿವರ ಸೊಲ್ಲ ಬಲ್ಲವರಿಲ್ಲಿ ಬಹಳ,
ಆದರವರದೇ ಅಂತರಾಳ ತಿಳಿಯದವರೇ ಹೇರಳ,
ನಿನ್ನಂತರಂಗದಲಿ ಕಾರ್ಮೋಡ ಕವಿದಿದೆ,
ಅದೇ ಅಂತರಂಗದಲಿ ದಿವ್ಯ ಜ್ಯೋತಿ ಬೆಳಗುತಿದೆ,
ಅಂತರಂಗ ಬಹಿರಂಗ ಅದು ಬೇರಿಲ್ಲ ನೀ ಕೇಳ,
ನಿನ್ನ ಮನದ ಮಾತು, ಅದ ಒಮ್ಮೆ ನೀ ಕೇಳ.....
ಸರಳತೆಯ ಸಾಹುಕಾರ,
ನಗು ಮುಖದ ರಾಜಕುಮಾರ
ಕಲಿಯುಗದ ಕರ್ಣಕುವರ,
ರಾಜ್ಯ ಕಂಡ ಅತ್ಯುನ್ನತ ವ್ಯಕ್ತಿತ್ವದ ಸರದಾರ
ಕರುನಾಡ ಪ್ರತಿ ಹೃದಯದಲ್ಲೂ ಮಾಡುತ್ತಿರುವಿರಿ ರಾಯಭಾರ,
ನಿಮ್ಮ ಪ್ರತಿ ಹೆಜ್ಜೆಗಳಲ್ಲು ಮಾಡಿದ್ದಿರಿ ಮಾನವೀಯತೆಯ ಪ್ರಚಾರ,
ಮನದೆಲ್ಲೇಡೆ ತುಂಬಿಕೊಂಡಿದ್ದೀರಿ" ಕೆಟ್ಟವರಿಗು ಒಳ್ಳೆಯದನ್ನೇ ಬಯಸೋಣ"ಎಂಬ ಒಳ್ಳೆ ವಿಚಾರ
ಎಂದಿಗೂ ಬಯಸಲಿಲ್ಲ ಆಡಂಬರ,
ನಗು ನಗುತ್ತಲೇ ಕರುನಾಡ ಹೃದಯದಲ್ಲಿ ದೇವರಾದ ಧೀರ,
ನಮ್ಮಿ *' ಡಾ. ಪುನೀತ್ ರಾಜಕುಮಾರ".*