Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನದೆ ನೆನಪು ಬರುವೆಯಾ ನನ್ನ ಮುಂದೆ.....ಸುಧಾ ಆರ್ ಬಳಿಗೇರ

ಕನಸೋ ಇಲ್ಲ ನಿಜಾನೋ ಆದರೆ ಸದಾ ನೆನಪಾಗುವೆ ಸಮಯಕ್ಕೆ ಸರಿಯಾಗಿ ಹಸಿವಾಗುವಂತೆ....
ತಿನಿಸುವೆಯ ನಿನ್ನ ಪ್ರೀತಿಯ ಕೈ ತುತ್ತು....

ಬರೆಯಲು ಸಾದ್ಯವೇ ಅನಿಸುವುದು
ನಿನ್ನ ಮೇಲೆ ಕವಿತೆ ಕೈಯಲ್ಲಿ ಲೇಖನ ಇದ್ದರೆ....
ತರುವೆಯಾ ನನಗಾಗಿ ಪುಸ್ತಕದ ಉಡುಗೊರೆ....

ಕನಸಲ್ಲಿ ನಿನ್ನ ಕಂಡು ಕಾಣದೆ ಹುಡುಕುತ್ತಿರುವೆ ಹೀಗೆ ಏಕೆ ಕಾಡುವೆ
ಕರುಣೆ ಬಾರದೆ ನಿನಗೆ....
ನಿಂತುಬಿಡು ಒಮ್ಮೆ ಕಣ್ಣುಮುಂದೆ ಸರಿಯದಂತೆ ಹಿಂದೆ ಹಿಂದೆ....

ಸುಧಾ ಆರ್ ಬಳಿಗೇರ್.....






- ಸುಧಾ ಆರ್ ಬಳಿಗೇರ

17 Jun 2023, 01:45 pm

ಇದೆ ಕಣ್ಣಿಗೆ ಕಾಣುವುದಿಲ್ಲ

ಉಸಿರಾಡಲು ಗಾಳಿ ಇದೆ ಕಣ್ಣಿಗೆ ಕಾಣುವುದಿಲ್ಲ

ಮೈತುಂಬ ಗಾಯ ಕಣ್ಣಿಗೆ ನೋವು ಕಾಣುವುದಿಲ್ಲ

ನಾವು ಊಟವನ್ನು ಮಾಡಬಹುದು ಆದರೆ ಹಸಿವೂ ನಮಗೆ ಕಾಣುವುದಿಲ್ಲ

ಕೈ ಮಾಡಿ ಆಕಾಶ ತೋರಿಸಬಹುದು ಆದರೆ ಕೈಗೆ ನಿಲುಕುವುದಿಲ್ಲ

ನಿರು ಕುಡಿಯಬಹುದು ಮುಟ್ಟಿಗೆಯಲ್ಲಿ ಮುಟ್ಟಿಗೆ ಆಗಲಾರದು

ಒಬ್ಬರನ್ನು ಇನ್ನಬ್ಬರನ್ನೂ ಪ್ರೀತಿಸುತ್ತಾರೆ ಆದರೆ ಮನಸ್ಸು ಕಾಣುವುದೇ





ಆಹಾರ ವಾಸನೆಯನ್ನು ತೆಗೆದುಕೊಳ್ಳಬಹುದು ಆದರೆ ಕಣ್ಣಿಗೆ ಕಾಣುವುದಿಲ್ಲ

ಮಾವಿನ ಹಣ್ಣನ್ನು ರುಚಿ ಸವಿಯಬಹುದು ಆದರೆ ಕಣ್ಣಿಗೆ ಕಾಣುವುದೇ



- Karigouda Eattinamani

14 Jun 2023, 03:58 pm

ಕೈಯ ಹಿಡಿದು ಹೇಳು ಜಗಕೆ ಇವಳೇನೆ ನನ್ನಾಕೆ..

ನೀನೆಂದರೆ ವಿಶೇಷ ನನಗೆ..
ನಿನ್ನ ಸನಿಹ ಹಿತ ತನುಗೆ..
ಕನಸುಗಳ ಸರದಾರ ನೀನು..
ಕಲ್ಪನೆಗಳ ಅನಾಮಿಕನು...
ಯಾಕಿನ್ನು ದೂರ ನೀನು..
ಬಳಿ ಬಾ ಹರೆಯ ಕಾದಿದೆ ಇನ್ನು...
ಸ್ವಾರ್ಥಿಗಳ ಸಂತೆ ಬೇಡ ನನಗೆ..
ನೀನೊಬ್ಬ ಸಾಕು ಬದುಕಿಗೆ..
ಕೈಯ ಹಿಡಿದು ಹೇಳು ಜಗಕೆ...
ಇವಳೇನೆ ನನ್ನಾಕೆ....

ತನುಮನಸು ✍️

- Tanuja.K

12 Jun 2023, 10:12 pm

ಮೌನ..


ಸಂತೋಷವ ಕಳೆದುಕೊಂಡಿದೆ ಬದುಕು..
ದುಃಖದಲ್ಲಿ ಮುಳುಗಿದೆ ಮನಸು..
ಸಿಕ್ಕ ಪ್ರೀತಿಯನು ತಾನಾಗಿಯೇ ಒಲ್ಲೆ ಎಂದ ಹೃದಯ ಪರಿತಪಿಸುತ್ತಿದೆ...
ನೂರಾರು ಮಾತುಗಳನಾಡಿದ ತುಟಿಗಳು ಇಂದು
ಮೌನ ತಾಳಿದೆ...
ಯಾರ ಮಾತಿಗೂ ಸ್ಪಂದಿಸದ ಈ ಜೀವ
ನಿನ್ನನ್ನೇ ಹಂಬಲಿಸುತಿದೆ...
ಕೇಳದೆ ನನ್ನ ಮನದ ಮಾತು, ನೀ ಎಲ್ಲಿ ಹೋದೆ...

ತನುಮನಸು✍️

- Tanuja.K

12 Jun 2023, 09:59 pm

ಅಪ್ಪ

ಅಪ್ಪ ಅಪ್ಪ ಅಪ್ಪ..
ಎಷ್ಟು ಬಾರಿ ಕರೆದರೂ ಖುಷಿಯೇ..
ಎಷ್ಟು ಪ್ರೀತಿಸಿದರೂ ಕಡಿಮೆಯೇ..

ಅಪ್ಪ ಎಂದಾಕ್ಷಣ ನೆನಪಾಗುವುದು ನಿಮ್ಮ ಗಾಂಭೀರ್ಯ..
ನಿಮ್ಮ ಕೋಪ ಹೇಳಲಸಾಧ್ಯ...
ನಿಮ್ಮ ಪ್ರೀತಿ ಅತಿ ಹೆಚ್ಚು ಮಾಧುರ್ಯ..
ನಿಮ್ಮ ಆದರ್ಶವೇ ಮಾನಸಿಕ ಸ್ಥೈರ್ಯ...

ಅಪ್ಪ ಇಂದು ನೀವು ನೆನಪು ಮಾತ್ರ..
ನಿಮ್ಮಂತಹ ತಂದೆಯ ಪಡೆದ ನಾವು ಧನ್ಯರು..
ಆದರೆ ಇಷ್ಟೇ ವರುಷ ಸಾಕೆ ನಿಮ್ಮೊಂದಿಗೆ ಬದುಕಿದ ಕ್ಷಣಗಳು..??

ನಿಮ್ಮಂತಹ ತಂದೆಯೇ ಎಲ್ಲರಿಗೂ ಸಿಗಲಿ..
ಆದರೆ ಆ ಪ್ರೀತಿ ಕೊನೆವರೆಗೂ ಉಳಿಯಲಿ..
ನೋವಾದಾಗ, ದುಃಖವಾದಾಗ ನೆನಪಾಗುವಿರಿ ತಕ್ಷಣ..
ಕನಸಿನಲ್ಲಾದರು ಬನ್ನಿ ದಿನ ದಿನ..

ಇಂದೇಕೋ ನಿಮ್ಮ ನೆನಪು ಅತಿಯಾಗಿ ಕಾಡುತಿದೆ ಅಪ್ಪ
ಇನ್ನೊಂದು ಜನ್ಮವಿದ್ದರೆ ನಿಮ್ಮ ಮಗಳಾಗಿ ಹುಟ್ಟಬೇಕೆಂಬುದೆ ನನ್ನ ಕೊನೆಯಾಸೆಯಪ್ಪ..
ಪ್ರೀತಿಗೆ ಮತ್ತೊಂದು ಹೆಸರು ನನ್ನ ಅಪ್ಪ ಕೃಷ್ಣಪ್ಪ..

ತನುಮನಸು✍️

- Tanuja.K

11 Jun 2023, 10:43 pm

ಓ... ಒಲವೇ

ಕನಸಲು ನಿನ್ನನೇ
ಪ್ರತಿದಿನ ಜಪಿಸುವೆ
ಬಂದು ಬಿಡು ನೀ ನಿಜವಾಗಿ

ಯಾರನೆ ಕಂಡರು
ನಿನ್ನದೇ ನೆನಪು
ಬರುವುದು ಮನಕೆ ಸಿಹಿಯಾಗಿ

ಈ ಸುಂದರ ಪ್ರೀತಿಯಲಿ
ನನ್ನ ಪ್ರೇಮಿಯೂ ನೀನಾದೆ
ನನ್ನ ಒಲವ ನಿನಗೆ ಬಡಿಸಲೆ
ಈ ಕ್ಷಣದಲೆ.....

ಒಂದು ಕ್ಷಣಕೂ ಮರೆಯಾಗದಿರು ನೀನು
ನೀನೇ ನನ್ನ ಸ್ವಾತಿಮುತ್ತು
ಹೃದಯದೊಳಗೆ ನನ್ನ ಬಚ್ಚಿಟ್ಟುಕೊ ಒಮ್ಮೆ ಸಾಕು

ಒಂದು ಸುಂದರ
ಮೀನು ನೀನು
ನಾ ಅದಕೆ ಕಡಲಾಗಿ ನೀರುಣಿಸಿ
ಜೀವ ತುಂಬಲೇನು?

ಓ ನನ್ನ ಜೀವವೇ
ನೀ ಹೇಳಿಬಿಡು ನಿನಗೂ
ನಾನು ಇಷ್ಟವೇ?
ಇಷ್ಟವಾದರೆ ಹೃದಯದಲ್ಲಿ
ಇಟ್ಟು ಕೊಂಡು ನಾ ಕಾಯುವೆ

ನನ್ನ ಉಸಿರಲ್ಲಿ ಉಸಿರಾಗಿ
ಹೋಗಿರುವೆ ನೀನು
ನಿನಗಾಗಿಯೆ ಮೀಸಲು
ನನ್ನುಸಿರಿನ ಪ್ರತಿ ಬಡಿತವು


ಸಿಂಧು ಜಯಂತ್ k✍️

- Sindhu jayanth k

11 Jun 2023, 10:37 pm

ಸ್ವಲ್ಪ ಸಮಯ ಬೇಕಾಗಿದೆ..

ಬಿಡುವಿಲ್ಲದ ಕೆಲಸ ನಿನ್ನದು..
ಸ್ವಲ್ಪ ಬಿಡುವು ಮಾಡಿಕೊ ಈ ಜೀವ ಕಾದಿವುದು..
ನಿನ್ನಲ್ಲಿ ಏನನ್ನೂ ಬಯಸುವುದಿಲ್ಲ ನಾನು..
ಪ್ರೀತಿ ಮತ್ತು ಕಾಳಜಿಯ ಮುಂದೆ ಯಾವುದು ದೊಡ್ಡದಲ್ಲ ಹೌದಲ್ಲವೇನು..??
ನನ್ನ ಸಾವಿಗಾದರೂ ಸ್ವಲ್ಪ ಬೇಗ ಬರಲು ತಯಾರಾಗಿರು...
ಮಣ್ಣು ಮಾಡುವ ಜನರು ನನ್ನಂತೆ ಕಾಯರು..



ತನುಮನಸು✍️

- Tanuja.K

11 Jun 2023, 05:05 pm

ನಮ್ಮ ಪವಿತ್ರ ಭಾರತದೇಶ

ಭಾರತೀಯ ಮಕ್ಕಳೆಲ್ಲ ನಾವು ಒಂದೇ ಇಂದು ಎಂದಿಗೂ ಎಂದೆಂದಿಗೂ
ಭರತ ಭೂಮಿಯ ಬಿಡೆವು ಇಂದು ಎಂದಿಗೂ ಎಂದೆಂದಿಗೂ

ನಮ್ಮ ನೆಲ ನಮ್ಮ ಜಲ ನಮ್ಮ ಪವಿತ್ರ ತಾಣವು
ನಮ್ಮ ಇರುವು ನಮ್ಮ ಒಲವು ನಮ್ಮ ನೆಲದ ಪ್ರಾಣವು
ನಮ್ಮ ದೇಶ ನಮ್ಮ ಭಾಷೆ ನಮ್ಮ ಶಕ್ತಿ, ತ್ರಾಣವು
ನಮ್ಮ ಕುಲ ನಮ್ಮ ಬಲ ನಮ್ಮವರ ಸ್ವಾಭಿಮಾನವು

ಬರಲಿ ಎಲ್ಲಾ ದೇಶಭಕ್ತರು ಭರತ ಮಾತೆ ಮಕ್ಕಳು
ತರಲಿ ಎಲ್ಲ ದೇಶಕ್ಕಿಂದು ಸವಿ ಗೆಲುವಿನ ಕಲಿಗಳು
ಹೊರಲಿ ಎಲ್ಲ ದೇಶ ನಿಷ್ಠೆ ಶ್ರೇಷ್ಠತನವ ಮೆರೆಯಲು
ಹೊರಳಿ ಎಲ್ಲಾ ನಮ್ಮ ದೇಶಕ್ಕಿಂದು ಸೇವೆ ಮುಡಿಪಾಗಿಸಲು.

ಜೈ ಭರತ ಮಾತೇ . ಜೈ ಕನ್ನಡಾಂಬೆ..
_ಶಶಿಜಿತ್

- m Jithendra_ಶಶಿಜಿತ್

11 Jun 2023, 01:49 pm

ಯಾರು ಮೇಲು ಯಾರು ಕೀಳು......ಸುಧಾ ಆರ್ ಬಳಿಗೇರ್

ಕಣ್ಣು ಕನಸಿಗೊಂದು ಮಾತು ಕೇಳುತ್ತಿದೆ ....
ನಾನು ನನ್ನ ಕಣ್ಣು ಮುಚ್ಚಿದರೆ ಮಾತ್ರ ನೀನು ಕಾಣುವೆ ....

ಕನಸು ಕಣ್ಣಿಗೆ ಹೇಳಿತು ....ನೀನಾಗಿಯೇ ಕಣ್ಣು ಮುಚ್ಚುವ ಅವಶ್ಯಕತೇ ಇಲ್ಲ
ಯಲ್ಲ ನನ್ನ ನೋಡುವುದಕ್ಕಾಗಿಯೇ ಸ್ವತಃ ತಾವೇ ಕಣ್ಣು ಮುಚ್ಚುವರು ....

ಯಾರು ಮೇಲು ಯಾರು ಕೀಳು....

ಚಿಂತೆಯು ಹೇಳುತ್ತಿದೆ ಚಿತೆಗೆ ನೀನು ಎಷ್ಟು ಕ್ರೂರಿ ದೇಹವನ್ನ ಹೇಗೆ ಸುಡುತ್ತಿರುವೆ....

ಚಿತೆಯು ಹೀಗೆ ಹೇಳಿತು ....ಬದುಕಿರುವಾಗ ನೀನು ಈ ದೇಹಕ್ಕೆ ನೇಮದಿಯೇ ಸಿಗದ ಹಾಗೆ ಮಾಡಿ ಪ್ರತಿ ದಿನವೂ ಒಂದೊಂದು ಚಿಂತೆಗಳನ್ನು ಕೊಟ್ಟುಸುಟ್ಟಿರುವೆ ...ನಾನಾದರೂ ಒಂದೇ ಬಾರಿ ಸುಟ್ಟು ಈ ದೇಹಕ್ಕೆ ಶಾಂತಿ ತಂದಿರುವೆ ಎಂದು....

ಯಾರು ಮೇಲು ಯಾರು ಕೀಳು....

ಸುಧಾ ಆರ್ ಬಳಿಗೇರ್.....





- ಸುಧಾ ಆರ್ ಬಳಿಗೇರ

09 Jun 2023, 01:42 pm

ದೂರ ತೀರ ಪಯಣ

ದೂರ ತೀರ ಪಯಣದಿ ಸಾಗಿ ಬಂದಿರಿ ಅನುಕ್ಷಣದಿ

ಹೊಸದಾರಿ ಹೊಸರೀತಿ ಹೊಸಸೊಬಗುಗಳ
ಮಿಲನದ ಕಂಪು, ಹೊಸಕ್ಷಣಗಳ ಸೊಂಪು ಇರಲಿಯೆಂದೆಂದೂ

ಸಿರಿನಾಥ ಪ್ರಭುನಾಥ ವರನಾಥ ಗುಣನಾಥ
ಗುರುನಾಥ ನೀನೆ ಕಾಯೋ ಎನ್ನವರ ದೇವನೆಂದೆಂದೂ

ಪೂರ್ಣ ರೂಪದೊಳು ಪೂರ್ಣ ವರವಾಗಿ ಬರುವೆ ನೀ ಎಂದೆಂದೂ
ಪೂರ್ಣಗುಣದೊಳು ಪೂರ್ಣಿಮಚಂದಿರನಂತೆ ತೋರುತ ನಿಲ್ಲುವೆ ನೀ ಎಂದೆಂದೂ

ರಜತ ವರುಷದ ಹರುಷದ ವಿವಾಹ ಮಹೋತ್ಸವದ ಈ ದಿನಕೆ
ಅಜ ಹರಿ ಹರರ ಆಶೀರ್ವಾದಗಳು ಸದಾ ಇರಲಿ ನಿಮ್ಮ ವರ ಬಾಳಿಗೆ

_ಶಶಿಜಿತ್

- m Jithendra_ಶಶಿಜಿತ್

09 Jun 2023, 06:41 am