ಮಳೆ ಹೂ.. ಮಳೆ... ಓ...ಹೂ
ಮೋಡಗಳೇ ಹೊತ್ತು ತನ್ನಿ... ಮಳೆಯನು..
ಮಳೆಯನು
ಒಮ್ಮೆ ಬಂದು ಹೋಗು
ಒಮ್ಮೆ ಬಂದು ಹೋಗು..ಮಳೆಯೇ..
ತುಂತುರು.. ತುಂತುರು.. ಹನಿಯೇ
ಮಳೆ... ಮುತ್ತಿನ ಹನಿ...
ಈ ಭೂಮಿಯಸಿರಿ ಹಸಿರಾಗಿರಲಿ..
ಈ ಭೂಮಿಯಸಿರಿ ಸ್ವರ್ಗವಾಗಲಿ.
॥ ಪಲ್ಲವಿ ॥
ಬರಡುಭೂಮಿ ಮಳೆ ಬಂದು ವನವಾಗಲಿ..
ಪಶು, ಪ್ರಾಣಿಗಳಿಗೆ ಹಸಿರಾಗಿರಲಿ...
ಹಸಿವು ನಿಗಲಿ ಚೈತನ್ಯತುಂಬಲಿ..
ಹಕ್ಕಿ ಹಾರಾಡಿ ಚಿಲಿಪಿಲಿ ಕಲರವ
ಎಲ್ಲಲ್ಲೂ ಕೇಳಲಿ...
ಗಿಡ, ಮರ, ಹೂ ಬಳ್ಳಿಅಬ್ಬಿ ಹಸಿರು
ಉಲ್ಲಾಸಾಗಲಿ....॥1॥
ಕೆರೆ, ಕಟ್ಟೆ, ಹಳ್ಳ ಕೊಳ್ಳ,ತುಂಬಲಿ,
ನದಿಯಾಗಿ, ಹರಿಯಲಿ...
ಮಳೆ ಬಂದು ರೈತರಿಗೆ ಮನ
ಹಸಿರಾಗಲಿ, ಅವರ, ಉಸಿರಾಗಲಿ..
ಈ ಭೂಮಿ ತಾಯಿ ಮಡಿಲು..
ಮಕ್ಕಳು, ಮನ ಸುಂದರ ಗೊಳಿಸು.
ಮನ ತುಂಬಾ ಉಲ್ಲಾಸ, ಸಂತಸ,
ತುಂದು.ನಕ್ಕು ನಲಿಸು...॥ 2॥
ಕನ್ನಡ ಪದವು ಕನ್ನಡ ನೆಲವು ಜಲವು
ಎಂದೆಂದಿಗೂ
. ನಮ್ಮಯ ಉಸಿರು
ನಮ್ಮಸುಂದರ ದೇವಾಲಯವು
ಬನಾನಿನಗಲಕ್ಕೂ
ಎತ್ತರಕ್ಕೂ ಕಾನನ ಮರವು ನಮ್ಮದೇ
ನಾಡಿನ ಸೌಂದರ್ಯ ಸಿಮೀಯೂ
ಕಡಲಿನ ತೀರವು ಕಂಪಿನ ತಾಣವು
ಕಡಲ ಒಡಲಲಿ ತೆಲಿದ ಬರುವ ತೆರೆವೂ
ದೂರದ ಪ್ರಯಾಣ ಚಂದದ ಆ ಕ್ಷಣ
. ನೆನಪಿನ ಮನ ಸುಂದರ ಜೀವನ
. ಎದೆಯಲ್ಲಿ ಚಿಮ್ಮಿದೆ
. ಹೃದಯದ ಹೊಮ್ಮಿದೆ
ನಮ್ಮ ಕನ್ನಡ ನಾಡಿನ ಹಿರಿಮೆ ಗರಿಮೆ
. ಜೋಗವು ಅಂದ
. ಜಲಪಾತವು ಚಂದ
. ಈ ನಾಡ ಗುಡಿಯಲಿ ಇಲ್ಲಿಯೇ
. ಸ್ವರ್ಗವೋ
ಈ ನಾಡ ನುಡಿಗಳ ನುಡಿಯುದೆ
. ಎಂದೆಂದಿಗೂ ಚಂದವೋ
. ಎಂದೆಂದಿಗೂ ಆನಂದವೋ
✍️ ವೀ.ವೀ.ಕುಂ
ದುಂಡಾದ ದೋಣಿ ಬಿಟ್ಟು
ಅದರೊಳಗೆ ಜೀವಿಗಳಿಟ್ಟು
ಉಸಿರಾಡೋ ಗಾಳಿ ನೀರನಿಟ್ಟು
ನದಿ ಸಾಗರ ಸಮುದ್ರ ಗಳಿಟ್ಟು
ಅವುಗಳಿಗೆ ಅಸಿವನಿಟ್ಟು..
ಪಶು ಪಕ್ಷಿ ಪ್ರಾಣಿಗಳನಿಟ್ಟು
ಶಿವನ ಅಂಕುಶದೊಳ್
ಆಟವಾಡುತಾನೋ ಶಿವನು....
ಹೂ ಹಣ್ಣು ಮಾಡಿಬಿಟ್ಟೆ ಸಿಹಿಕಹಿ ತುಂಬಿದೆ
ದೊಡ್ಡ ಕಾನನ ದೊಡ್ಡ ಪ್ರಾಣಿಗಳ ತುಂಬಿದೆ
ಮನದೊಳಗೆ ಅಸೆಯ ಹುಚ್ಚು ತುಂಬಿದೆ
ಬೆಳ್ಳಿ ಬಂಗಾರ ಮಾಡಿಬಿಟ್ಟೆ ಅಸೆ ತುಂಬಿದೆ
ಇವೆಲ್ಲವನ್ನೂ ಮೇಲೆ ನೋಡುತ..ಶಿವನು
ಚಂದದೊಂದು ಆಟವಾಡುತಾನೋ
ಮಾನವನ ಸೃಷ್ಟಿ ಮಾಡಿದ ಮಹಾದೇವ
ಮಾನವನಿಗೆ ಬುದ್ದಿ ಬಲವ ನೀಡಿ ದೇವ
ಸಾವು ನೋವು ಚಿಂತೆ ಸೃಷ್ಟಿದೆ ದೇವ
ಬೆಟ್ಟಕೆ ಹೋಗಿ ತಂದ ಕಲ್ಲಿge ಪ್ರಾರ್ಥನೆ
ದೋಪ ನೈವೇದ್ಯ ಪೂಜೆಯ ಪ್ರಾರ್ಥನೆ
ಹಣವೆಂಬ ಮಾಯಯ ಮಾಡಿದೆ ದೇವ
ವ್ಯಾಪಾರ ಅಸೆ ದುರಾಸೆ ಹಚ್ಚಿದೆ ದೇವ
ಇದೇಲ್ಲವನ್ನು ಮೇಲೆ ನಿಂತು ನೋಡುವ
ಚಂದದೊಂದು ಶಿವ ಆಟವಾಡುತಾನೋ.....
ನೀಲಿ ಆಕಾಶದೊಳಗೆ. ಬರುವ ಚಂದಿರ
ಅವನೇ ಸುಂದರ..
ಕಪ್ಪುನೆ ಮೋಡದೊಳಗೆ ಬರುವ ಚಂದಿರ
ಅವನೇ ಸುಂದರ
ಬೆಳ್ಳಿ ಬೆಳದಿಂಗಳಲಿ ತೆಲಿ ಬರುವ ಚಂದಿರ
ಅವನೇ ಸುಂದರ
ಮಿನುಗುವ ಮಿನುಗುವ ತಾರೆಗಳ ನಡುವೆ
ಬರುವ ಚಂದಿರ ಅವನೇ ಸುಂದರ
ಸುಂದರ ಕಾಡಿನ ಬೆಟ್ಟಗಳ ನಡುವೆ
ಬರುವ ಚಂದಿರ ಅವನೇ ಸುಂದರ
ನಕ್ಷತ್ರ ನಡುವೆ ನಗುವ ಮಗುವಿನಂತೆ
ಚಂದಿರ ಎಲ್ಲೆಲ್ಲೂ ಕಾಣುವ ಸುಂದರ
ಹಸಿರ ತುಂಬಿದ ಈ ಭೂಮಿ ಅಂದ
ಸಾಗರ ಸಮುದ್ರ ಈ ಅಲೆಯು ಚಂದ
ಚಂದ್ರನ ಹುಣ್ಣಿಮೆಯಲಿ ಪ್ರಕೃತಿಯೇ
ಅಂದದ ವಯ್ಯಾರ ಚಂದದ ವಯ್ಯಾರ
ಗಂಡು : ನಲ್ಲೆ ನಲ್ಲೆ ನನ್ನ ನಿನ್ನ ಮನವ ಬಲ್ಲೆ.
ನಿನ್ನ ನೋಡುವ ಆಸೆ ಹೊತ್ತು ಬಂದೆ ನಲ್ಲೆ
ನಿನ್ನ ಆತ್ಮದ ಹೃದಯದ ಪ್ರೀತಿ ನಾ ಬಲ್ಲೆ
ಓ ಓ...ನನ್ನ ಹೃದಯವೇ ನಿನಗಾಗಿ ಕಾಣಿಕೆ..
ಕಟ್ಟಿರುವೆ ಇಟ್ಟಿರುವೆ ನಿನಗಾಗಿ ಓ ನಲ್ಲೆ
ಹೆಣ್ಣು : ನನ್ನ ಪ್ರೇಮದ ಗೋಪುರ
ಎಂದೆಂದಿಗೂ ನಿನಗೋಸ್ಕರ...
ಕಾದಿರುವೆ ನಿನಗಾಗಿ..
ಮೂಡಿ ಇಡುವೇ ನಿನಗಾಗಿ
ಈ ಪ್ರೀತಿ ಸುಳ್ಳಲ್ಲ ನಂಬು ನೀ ನನ್ನ ನಲ್ಲಾ
ಗಂಡು : ಗೆಳತಿ ನಾ ಸೋತಿರುವೆ ನಿನಗಾಗಿ
ಕಾದಿರುವೆ ಬಾ ನಲ್ಲೆ ನನ್ನ ಹೃದಯದ ತೋಟಕೆ
ಈ ಪ್ರೀತಿ ಎಂದೆಂದಿಗೂ ನೀನಾಗಿ ಮೀಸಲು
ಹೆಣ್ಣು :ಹೊಂಗಿರಣ ನೇಸರ ಬಣ್ಣ ನಾ
ನಿನ್ನಲಿ ಕಂಡೆ ಓ ಪ್ರೀತಿ ನನ್ನ ನನ್ನೊಡೇಯ
ನಾನೇದೆಂದಿಗೂ ನಿನ್ನವಳೇ ರಾಜನೇ
ರವಿತೇಜನೆ ಪ್ರೀತಿಯ ಮಹಾರಾಜನೆ..
ಗಂಡು : ನನ್ನುಸಿರೊಳಗೆ ನೀನೇ ಬೇರೆತೆ
ನನಗಿಲ್ಲ ಯಾವುದು ಚಿಂತೆ..
ಬಾ ನನ್ನ ಹೃದಯವ ಬೆಳಗೋ ದೇವತೆ
ಬಾ ನನ್ನ ಹೃದಯವ ಬೆಳಗೋ ದೇವತೆ
ಕಸ್ತೂರಿ ಪರಿಮಳ ಸೂಸುತ
ಮಲ್ಲಿಗೆ ಕಂಪನು ಬಿರುತ
ಮಲ್ಲಿಗೆ ಹೂ ಮಾಲೆ ಮೂಡಿದ ಚಾಮುಂಡೇಶ್ವರಿ
ನೆಲೆಸಿರುವ ಮೈಸೂರ ಸುಂದರ
ಈ ಕನ್ನಡ ನಾಡನ ವೈಭವವೇ ಚಂದದ ಚಿತ್ತಾರ
. ಕನ್ನಡ ಪದವೇ ನುಡಿದ ನಾಲಿಗೆ ಚಂದ
ನಾಗರಹೊಳೆ ಈ ನಾಡ ಸೌಂದರ್ಯದ ಕಳೆ
ಇಲ್ಲಿ ಬರುವವದು ಜೇನಿನ ಸುರಿಮಳೆ
ಹಸಿರ ಹಾಸಿದ ಚಲುವಿನ ಹಸಿರತೋರಣ
. ಸವಿಯಾದ ಸವಿ ಸವಿದ ಹೂ ಮನ
ಆಕಾಶದಲಕ್ಕೂ ಎತ್ತರ ಮರವೇ ಹಂದರ
ನವಿಲುಗಳ ನರ್ತನ ಈ ಕಾನನ ಸುಂದರ
. ಕನ್ನಡ ಪದವೇ ನುಡಿದ ನಾಲಿಗೆ ಚಂದ
ಆನೆಗಳ ಹಿಂಡು ಜಿಂಕೆಯಾದಂಡು ನೋಡುವ
. ಈ ಕನ್ನಡಮ್ಮನ ದೇಗುಲವ ನೋಡುವ
ಚಂದಕ್ಕಿಂತ ಚಂದ ನೋಡುದೇ ಆನಂದ..
ನಾಡ ಮಣ್ಣಲಿ ಈ ಸೀಮೆಯೇ ಸೌಗಂಧ....
ಸಿದ್ದಿ ಪುರುಷ ಸಿದ್ದರೂಡರು ಇರುವ ಊರ
ಅದುವೇ ನನ್ನೂರು ಅದುವೇ ನಮ್ಮೂರ
ಹುಬ್ಬಳ್ಳಿ ನಗರ..ಹೂ ಬಳ್ಳಿ ನಗರ..
ಅಂದ ಮಕ್ಕಳಿಗೆ ಸಂಗೀತ ಕಳಿಸಿ.. ಬೆಳಸಿದ
ಬೆಳದಿಂಗಳಲಿ ಹುಣ್ಣಿಮೆ ಬೆಳದಿಂಗಳಲಿ
ತೆಲಿಸಿ ಗನಾಯೋಗಿ ಪುಟ್ಟರಾಜರ ಊರು
ಗದಗ ಸುಂದರ ಗದಗ ಸಂಗೀತ ನಾಡಿದು
ಗಾನ ಗಂಧರ್ವರ ನಾಡು ನನ್ನೂರು..
ಅದುವೇ ನಮ್ಮೂರು ಸಂಗೀತ ತವರೂರು
ಹೂ ಬಳ್ಳಿಯಂಗ ಹಬ್ಬಿ ಯಾದ ನೋಡ
ಶಿಕ್ಷಣಕ್ಕಾಗಿ ಕೈ ಬಿಸಿ ಕರೆವಾ ಅದುವೇ ನನ್ನೂರು ಅದುವೇ ನಮ್ಮೂರ ಹವಳಿ ನಗರ ಹುಬ್ಬಳ್ಳಿ ಧಾರವಾಡ...ಹುಬ್ಬಳ್ಳಿ ಧಾರವಾಡ...
ಸಂಗೀತ ಸರೋವರ ಸಂಗೀತ ಸರೋವರ
ಬಂಗಾರದಂಗೆ ಮಾತು ಮುತ್ತು
ತಾಜ್ ಬೆಣ್ಣಯಂತೆ ಸೊಗಸು....
ನೀಲಿ ಆಕಾಶದ ಹೊಳಪು....