Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41
ಇದು ನನಗೆ ಮೊದಲ ಪ್ರೀತಿಏನಲ್ಲ.,
ಆದರೂ.. ನನ್ನೆದೆಯೊಳಗೆ ಹುಚ್ಚಿಡಿಸಿಹಳಲ್ಲ,
ವರುಷವಾದರೂ ಬಾರದ ಪ್ರೀತಿ ಇಂದೇಕೆ
ಅವಳ ಮೇಲೆ..?
ಹೇಳಲೇನವಳು ಸುರಸುಂದರಿಯಲ್ಲ,
ಉದ್ದ ಜಡೆ ಇಲ್ಲ, ಸದೃಢ ದೇಹವು ಅಲ್ಲ,
ಕಣ್ಣು ಕಾಮನಬಿಲ್ಲು, ಮೂಗು ಮೂಲಂಗಿಯಂತೂ
ಅಲ್ಲವೇ ಅಲ್ಲ,
ಆದರೂ ನನ್ನ ಮನಸ್ಸಿನಾಳದಲ್ಲಿ ಕುಳಿತಿಹಳಲ್ಲ.,
ಇಲ್ಲ ಇಲ್ಲ.......,
ಅವಳಿಗೂ ಒಂದು ಮುಗ್ಧ ಮನಸ್ಸಿದೆ,
ಅವಳ ಕಂಗಳಲ್ಲಿ ಕೈಗೆಟುಕದ ಕನಸುಗಳಿವೆ,
ಮೊಗದ ನಗುವು ಮುತ್ತಿನಂತಿರಲು,
ಅವಳೊಂದು ಮಗುವಂತೆ ಕಂಡಿಹಳು..
ಆದರೂ.... ಪ್ರೀತಿ ನನಗೆ ಹೊಸತೇನಲ್ಲ,
ಇದೇನು ಹಟತ್ತಾಗಿ ಬಂದ ಪ್ರೀತಿಯು ಅಲ್ಲ,
ಅವಳು ನನ್ನವಳಾಗಬೇಕೆಂಬ ಆಸೆಯೂ ನನಗಿಲ್ಲ,
ಈ ಪ್ರೀತಿಯ ಮುಚ್ಚಿ ಬಚ್ಚಿಡುವಷ್ಟು ಹೃದಯದಲ್ಲಿ
ಜಾಗವೂ ಉಳಿದಿಲ್ಲ.,
ನಾ ನಿನ್ನ ಪ್ರೀತಿಸುವೆ......!
ಎಂದು ಹೇಳುವಷ್ಟು ಧೈರ್ಯ ಮೊದಲೇ ಇಲ್ಲ,
ಹೇಳದೇ ಇರಲು ಸಾಧ್ಯವೂ ಇಲ್ಲ,
ಇಲ್ಲ ಇಲ್ಲ.......,
ಎಲ್ಲಾ ಪ್ರೀತಿ ಹೇಳಬೇಕೆಂಬ ನಿಲುವೇನಿಲ್ಲ,
ವ್ಯಕ್ತಪಡಿಸಿದ ಪ್ರೀತಿಎಲ್ಲಾ ಉಳಿದಿರುವುದು ಇತಿಹಾಸದಲ್ಲಿ ಎಲ್ಲಿಯೂ ಇಲ್ಲ,
ಇಲ್ಲ ಇಲ್ಲ.......,
ಆದರೂ ಇದು ನನಗೆ ಮೊದಲ ಪ್ರೀತಿಏನೆಲ್ಲ..,,,
KSN...
ಅತೀ ಮುಗ್ಧ ಒಲವ
ಮೂಲಕ ಕಾಣುವ
ಕಾಣಲಾರದ
ಚರಾಚರಗಳಲೂ
ನಿನ್ನಾ ಕಲ್ಪನೆಯ
ಮೂರ್ತಿಯನು
ಪ್ರತಿಷ್ಠಾಪಿಸಿ
ಅನುಕ್ಷಣವೂ
ಪೂಜಿಸುತಿಹೆ ನಾನು,
ಬಾಳ ಗುಡಿಸಲಲಿ
ಬಂದು ನೆಲೆ ನಿಲ್ಲಬೇಕೆಂದಿಲ್ಲ ನೀ
ಈ ಬಡಪಾಯಿಯ
ಭಕ್ತನ ಎದೆಯ ಗುಡಿಯೊಳಗೆ
ಒಮ್ಮೆ ಪ್ರೇಮದೇವಿಯಾಗಿ
ಸುಳಿದು ಹೋಗು...!
ಪ್ರೀತಿ ಅಂದರೆ ಪ್ರತಿದಿನ ಜೊತೆಯಲ್ಲಿರುವುದಲ್ಲ…
ದೂರದಲ್ಲಿದ್ದರೂ ಒಬ್ಬರನ್ನೊಬ್ಬರು ಹೃದಯದಲ್ಲಿ ಉಳಿಸಿಕೊಳ್ಳುವುದು.
ಕೆಲವು ಸಂಬಂಧಗಳಿಗೆ ಮಾತುಗಳು ಕಡಿಮೆಯಾಗಬಹುದು,
ಆದರೆ ನೆನಪುಗಳು ಎಂದಿಗೂ ಕಡಿಮೆಯಾಗುವುದಿಲ್ಲ.
ಜೀವನದಲ್ಲಿ ಎಲ್ಲರೂ ಸಿಗುವುದಿಲ್ಲ…
ಸಿಕ್ಕವರಲ್ಲಿ ಕೆಲವರು ಮಾತ್ರ
ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.
ನನ್ನ ಪ್ರೀತಿ ಗೆಲ್ಲುತ್ತದೋ ಸೋಲುತ್ತದೋ ಗೊತ್ತಿಲ್ಲ,
ಆದರೆ ನಾನು ಪ್ರೀತಿಸಿದ ರೀತಿ ಮಾತ್ರ
ನನ್ನ ಜೀವನದ ಅತ್ಯಂತ ಸುಂದರ ನೆನಪಾಗಿ ಉಳಿಯುತ್ತದೆ.”** ?
- Madhu Reddy
21 Aug 2026, 10:12 pm
ಪ್ರೀತಿ
ಎಲ್ಲಿ ನನ್ನ
ನಿನ್ನ ಪ್ರೀತಿ
ಮುಂಜಾವು,ಸಂಜೆ, ರಾತ್ರಿ
ಹುಡುಕಿದರು ಕಾಣದ ಪ್ರೀತಿ.
ಪ್ರೀತಿಯ ಬಿಡದೆ
ಮರೆಯಲು ಆಗದೆ
ಹುಚ್ಚು ಪ್ರೀತಿಯ ನೆರಳಲಿ
ಕಂಬನಿಯ ಆಸರೆ ಬೇಕೆ?
ಮುಂಜಾವಿಗೆ ಸಂಜೆಯ ಪ್ರೀತಿ
ಸಂಜೆಗೆ ರಾತ್ರಿಯ ಪ್ರೀತಿ
ಕಾಣದ ಪ್ರೀತಿಯ ಕಣ್ಗಳಿಗೆ
ಪ್ರೀತಿಯ ಮೌನ ಸಾಕೆ?
ಮತ್ತೆ ಮತ್ತೆ ಅದೇ ಮುಂಜಾವು
ಅದೇ ಸಂಜೆ,ಅದೇ ರಾತ್ರಿ
ಮನದಾಳದ ಮಡಿಲಲ್ಲಿ
ಪ್ರೀತಿಯ ಮುತ್ತನು ಸುರಿಸಿ
ಕತ್ತಲೆಯಲಿ ಕತ್ತು ಹಿಸುಕಿ
ಕಣ್ಮರೆಯಾದ ಪ್ರೀತಿ
ಪಾದ ಧೂಳ್ ಹಿಡಿದಿದೆ ಪಾದ ತೊಳಿ,
ಕುಂಕುಮ ಇಟ್ಟು ಶೃಂಗಾರ ಮಾಡು,
ಹೂವು ಇಟ್ಟು ಅಗರಬತ್ತಿ ಹಚ್ಚಿ
ಪೂಜೆ ಮಾಡು,
ಮೂರು ಮಕ್ಕಳು ಪ್ರಾಪ್ತಿ ಆಗುವಷ್ಟು ಆರ್ಶಿವಾದ ಮಾಡುವೆ..
ನಿಮ್ಮ ಅಪ್ಪನಿಗೆ ಬೇಗ ತಿಳಿಸು ಇದು 2027ರಾ ಆರ್ಶಿವಾದ ಆಗಿರುತ್ತೆ...
ಇದು ಅಡ್ವಾನ್ಸ್ ಅಷ್ಟೇ....
ಎಮ್.ಎಸ್.ಭೋವಿ...✍️
ನಿಂತ ನೆಲವು ಹೊಳೆಯಾಗಿ ಹರಿಯುತ್ತಿದೆ
ಪ್ರತಿ ಉಚ್ಛ್ವಾಸವೂ,ಕೊನೆಯದೆಂದು ಅನಿಸುತ್ತಿದೆ.
ವಾಸ್ತವವನ್ನು ಗ್ರಹಿಸಲಾಗದೆ ಬುದ್ಧಿಯೇ ದಾರಿ ಕಳೆದುಕೊಂಡಂತೆ ಆಗಿದೆ.
ನನ್ನ ಪ್ರಾಣವೇ ಮುಂದೆ ಬಂದು ನಿಂತಾಗ
ಈ ಶರೀರ ಸ್ಥಗಿತ ಗೊಂಡಿದೆ.
ಆ ಪ್ರಾಣ ಅವಳೆ
ನನ್ನ ನಿಲ್ದಾಣ ಅವಳೆ
ನಾನು ಅವಳೆ,ನನ್ನೊಳಗೂ ಅವಳೆ
ಪ್ರೀತಿಗೆ ಅನ್ವರ್ಥ ಅವಳೆ
ನನ್ನ ಪ್ರೇಮದ ಗುಡಿಗೆ ಕಳಶ ಅವಳೆ.
ನಾ ನಿನಗೆ ಕೈಗೆ ಕೊಟ್ಟೆ ಬಿಟ್ಟೆ ಗುಲಾಬಿ ಹೂವಾ
ನೀ ನನಗೆ ಕೈಗೆ ಕೊಟ್ಟೆ ಕೈಗೆ ಬಿಟ್ಟೆ ಹೃದಯವಾ
ಊರಾಗ ಎಷ್ಟ್ಟು ಹೈತಿ ಹುಡುಗಿ ನಿಂದು ಹವಾ
ಕದ್ದು ಹೋದೆ ನನ್ನ ಹೃದಯವಾ...
ನನ್ನ ನೋಡಿ ಹೊಡಿ ಬ್ಯಾಡ ಟ್ರ್ಯಾಕ್ಟರ್ ಹಾರ್ನ್
ನನ್ನ ಪ್ರೀತಿ ಹೈತಿತೆಂತ ಗೊತ್ತು ಬಂದು ಸೇರು ನನ್ನಾ
ನಿನಗಾಗಿ ಓಡಿ ಬಂದೆ ನಿನ್ನ ದೊರೆ ನನಗಾಗಿ ನಿನ್ನ ಆಸರೆ
ಓ ಮೈಸೂರು ಮಲ್ಲಿಗೆ ನೀ ಅಂದದ ಅಪ್ಸರೆ
ಬೆಂಕಿಯಂಗ್ ಹೋಳಿತಿದ್ರ ಅಪರಂಜಿ ಬಂಗಾರ
ನೀವಾಳಿಸಿ ಹೋಗಿ ಬೇಕು ನಿನ್ನ ಮುಂದ ಮುಂದ
ಅಷ್ಟೇ ಚಂದ ನಿನ್ನ ಬಣ್ಣ ಚಲುವು ಸುಂದರ ಕಣ್ಣ
ಕಟೇವಾಡಿ ಕುದುರೆ ನೆಡಗಿ ಇಳಕಲ್ ಸೀರೆ ನಿನ್ನ ಉಡಗಿ